ಸರ್ವರ್ ಸಮಸ್ಯೆ ನಿವಾರಿಸಲು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಮನವಿ

0
10

ಸುರಪುರ: ನಗರದ ತಹಸೀಲ್ ಕಚೇರಿಯಲ್ಲಿನ ಸರ್ವರ್ ಸಮಸ್ಯೆಯಿಂದಾಗಿ ತಾಲೂಕಿನ ಜನರು ಕಚೇರಿಗೆ ಅಲೆಯುವ ಮೂಲಕ ಬೇಷತ್ತಿದ್ದಾರೆ ಎಂದು ಮಾನವ ಹಕ್ಕುಗಳು ಹಾಗು ಭ್ರಷ್ಟಾಚಾರ ವಿರೋಧಿ ಸಂಸ್ಥೆ ದೆಹಲಿ ಸಂಘಟನೆಯ ತಾಲೂಕು ಅಧ್ಯಕ್ಷ ದಾವೂದ್ ಇಬ್ರಾಹಿಂ ಪಠಾಣ ಬೇಸರ ವ್ಯಕ್ತಪಡಿಸಿದರು.

ತಹಸೀಲ್ ಕಚೇರಿಯಲ್ಲಿನ ಸರ್ವರ್ ಸಮಸ್ಯೆಯನ್ನು ನಿವಾರಿಸುವಂತೆ ಆಗ್ರಹಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು,ತಾಲೂಕಿನ ಗ್ರಾಮೀಣ ಪ್ರದೇಶದ ಜನರು ಒಂದು ದಿನದ ಕೆಲಸ ಬಿಟ್ಟು ಹಣ ಖರ್ಚು ಮಾಡಿ ವಿವಿಧ ಯೋಜನೆಗಳಾದ ಸಂಧ್ಯಾ ಸುರಕ್ಷಾ ವಿಧವಾ ವೇತನ ವೃಧ್ಯಾಪ ವೇತನ ಆಧಾರ ಕಾರ್ಡ್ ಪಹಣಿ ಆದಾಯ ಜಾತಿ ಪ್ರಮಾಣ ಪತ್ರ ಹೀಗೆ ಅನೇಕ ಪ್ರಮಾಣ ಪತ್ರಗಳನ್ನು ಪಡೆಯಲು ಆಗಮಿಸುತ್ತಾರೆ.

Contact Your\'s Advertisement; 9902492681

ಸುರಪುರ ತಾಲೂಕಿನಾದ್ಯಂತ ಸರಳವಾಗಿ ಡಾ: ಬಾಬು ಜಗಜೀವನರಾಮ್ ಜಯಂತಿ ಆಚರಣೆ

ಆದರೆ ಇಲ್ಲಿ ಸರ್ವರ್ ಇಲ್ಲ ಎನ್ನುವುದರಿಂದ ಅವರು ತುಂಬಾ ಬೇಸರಗೊಂಡು ಒಂದು ದಿನದ ಕೆಲಸ ಖರ್ಚಾದ ಹಣ ಮತ್ತೆ ಬರುವುದು ಎಲ್ಲದರಿಂದ ಜನರು ರೋಸಿ ಹೋಗುತ್ತಾರೆ.ಸದಾಕಾಲ ಸರ್ವರ್ ಸಮಸ್ಯೆ ಎನ್ನುವ ಸಿದ್ಧ ಉತ್ತರದಿಂದ ಜನತೆ ಹೋರಾಟಕ್ಕೆ ಮುಂದಾಗುವ ಹಾದಿ ಹಿಡಿದಿದ್ದಾರೆ.ಆದ್ದರಿಂದ ಕೂಡಲೇ ಸರ್ವರ್ ಸಮಸ್ಯೆಯನ್ನು ನಿವಾರಿಸಬೇಕು ಇಲ್ಲವಾದಲ್ಲಿ ನಮ್ಮ ಸಂಘಟನೆಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಒತ್ತಾಯಿಸಿದರು.

ನಂತರ ತಹಸೀಲ್ದಾರ ಸುಬ್ಬಣ್ಣ ಜಮಖಂಡಿಯವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಕೆ.ಎಮ್.ಸಿ ತಾಲೂಕು ಅಧ್ಯಕ್ಷ ಖಾಜಾ ಅಜ್ಮೀರ್ ಖುರೇಶಿ ಟಿಪ್ಪು ಸುಲ್ತಾನ ಸಂಯುಕ್ತ ರಂಗದ ಜಿಲ್ಲಾಧ್ಯಕ್ಷ ಮಹ್ಮದ ಮೌಲಾ ಸೌದಾಗರ್ ಅಂಬೇಡ್ಕರ್ ಸೇನೆ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ರಮೀಜ್ ರಾಜಾ ಸಗರನಾಡು ಎಲೆಕ್ಟ್ರೀಕಲ್ ಕಾರ್ಮಿಕರ ಸಂಘದ ಅಧ್ಯಕ್ಷ ಅಬ್ದುಲ್ ರೌಫ್ ಕೆ.ಎಮ್.ವಾಯ್.ಸಿ ರಾಜ್ಯ ಉಪಾಧ್ಯಕ್ಷ ಅಬೀದ್ ಹುಸೇನ ಪಗಡಿ ಮಹಿಬೂ ಪಟೇಲ್ ಫಸಲ್ ಉರ್ ರಹಮಾನ್ ನಾಸಿ ವಸೀಂ ರಂಗಂಪೇಟ ಅಮ್ಜಾದ್ ಬೇಗ್ ಪಾಶಾ ಕರಾಟೆ ಇಮ್ರಾನ್ ಬೇಗ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here