ಬಸವಕಲ್ಯಾಣ ಬೈ ಎಲೆಕ್ಷನ್: ವೈದಿಕಶಾಹಿ ಮತ್ತು ಶರಣರ ನಡುವಿನ ಸಂಘರ್ಷ

0
43

ಸ್ವಾತಂತ್ರ್ಯಪೂರ್ವದಲ್ಲಿ ಕಲ್ಯಾಣಿ ಎಂದು ಕರೆಯುತ್ತಿದ್ದ, ಬಸವಕಲ್ಯಾಣ ಸ್ವಾತಂತ್ರ್ಯದ ನಂತರ ಜಗಜ್ಯೋತಿ ಬಸವಣ್ಣನವರ ಹೆಸರಿನೊಂದಿಗೆ ಬಸವಕಲ್ಯಾಣ ಎಂದು ಹೆಸರಿಡಲಾಯಿತು.

ಕಲ್ಯಾಣದ ಕ್ರಾಂತಿ ಸಾಮಾಜಿಕ, ಆರ್ಥಿಕ, ವೈಚಾರಿಕವಾಗಿ ಕೊನೆಗೆ ರಕ್ತಕ್ರಾಂತಿಯಾಗಿ ಅನೇಕ ಶರಣರು ಕಗ್ಗೊಲೆಯಾದರೆ ಕೆಲವು ಅಳಿದುಳಿದ ಶರಣರು ಕಲ್ಯಾಣದಿಂದ ಬೇರೆಡೆಗೆ ಹೋಗಿ ವಚನಸಾಹಿತ್ಯವನ್ನು ರಕ್ಷಿಸಿದರು. ಸ್ವತಂತ್ರೋತ್ತರ ಕಾಲದಲ್ಲಿ ಇಂದು ಕಲ್ಯಾಣ ಅತ್ಯಂತ ಗಂಭೀರ ಸಮಸ್ಯೆ ಎದುರಿಸುತ್ತಿದೆ. ಮೊದಲು ಎರಡು- ಮೂರು ಪಕ್ಷಗಳ ನಡುವೆ ಸ್ಪರ್ಧೆ ನಡೆಯುತ್ತಿತ್ತು.

Contact Your\'s Advertisement; 9902492681

ಸ್ವತಂತ್ರದ ನಂತರ ಮೊದಲ ಬಾರಿಗೆ ಕಲ್ಯಾಣದಲ್ಲಿ ವೈದಿಕಶಾಹಿ ಮತ್ತು ಬಸವಾದಿ ಶರಣರ ಮಧ್ಯೆ ದೊಡ್ಡ ಸಂಘರ್ಷ ಶುರುವಾಗಿದೆ. ಫ್ಯಾಸಿಸ್ಟ್ ರೂಪಾಂತರಿ ಬಿಜೆಪಿಯ ಮಾಲಿಕ ಸಂಘಪರಿವಾರವು ಸೆಕ್ಯುಲರ್ ವಾದಿ ಶರಣ ಸಂಕುಲವನ್ನು ನಾಶಮಾಡುವ ಷಡ್ಯಂತ್ರ ಈ ಚುನಾವಣೆ ಹಿನ್ನೆಲೆಯಲ್ಲಿದೆ.

ಆರ್.ಎಂ.ನಾಟೇಕರ್ ಅವರಿಗೆ ಅಂಬೇಡ್ಕರ್ ಶ್ರೇಷ್ಠ ಪ್ರಶಸ್ತಿ

ಅದರ ಭಾಗವಾಗಿಯೇ ಸಂಘಪರಿವಾರ ಕುದುರೆ ವ್ಯಾಪಾರ ಶುರು ಮಾಡಿದೆ. ಹಣದಿಂದ ಕಲ್ಯಾಣವನ್ನು ಕೊಂಡುಕೊಳ್ಳುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಇವರ ಭ್ರಮೆಗೆ ಮರುಳಾಗಿ ಕೆಲವು ಜನ ತಮ್ಮ ಸ್ವಾರ್ಥಕ್ಕಾಗಿ ಹಣದ ಮೇಲಿನ ನೋಣದ ಹಾಗೆ ಆ ಕಡೆಯಿಂದ ಈ ಕಡೆಗೆ ಈ ಕಡೆಯಿಂದ ಆ ಕಡೆ ಪಕ್ಷಾಂತರದ ಫಿರ್ಕಿ ಹೊಡಿತಿದ್ದಾರೆ. ಇಡೀ ದಲಿತ ಸಮುದಾಯ ನನ್ನೊಂದಿಗೆ ಇದೆ ಎಂದು ಪಕ್ಷದಿಂದ ಪಲಾಯನ ಮಾಡಿದ ರವಿ ಗಾಯಕವಾಡ ಅವರನ್ನು ಕಲ್ಯಾಣದ ದಲಿತ ಸಮುದಾಯ ತಮ್ಮ ಒಗ್ಗಟ್ಟು ಪ್ರದರ್ಶಿಸುವ ಮೂಲಕ ತಿರುಗೇಟು ನೀಡಿದ್ದಾರೆ.

ಒಬ್ಬ ವ್ಯಕ್ತಿಯ ಹಿಂದೆ ಸಮುದಾಯ ಓಡಿ ಹೋಗಲ್ಲ, ನಮಗೆ ನಾಯಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್. ಅವರು ಕೊಟ್ಟ ಸಂವಿಧಾನ ಸರ್ವನಾಶ ಮಾಡಲು ಹೊರಟ ಸಂಘಪರಿವಾರದ ಏಜೇಂಟರಿಗೆ ನಾವು ಬೆಂಬಲ ನೀಡಲ್ಲ ಎಂದು ತಿರುಗೇಟು ನೀಡಿದ್ದಾರೆ.

ಬೆಂ.ವಿ.ವಿ ಯಿಂದ ರ‍್ಯಾಂಕ್‌ ಪಡೆದ ಸುರಾನಾ ಕಾಲೇಜಿನ ವಿದ್ಯಾರ್ಥಿಗಳಿಗೆ ಎಡಿಜಿಪಿ ಭಾಸ್ಕರ್‌ ರಾವ್‌ ಸನ್ಮಾನ

ಇನ್ನು ಸ್ಥಳಿಯರಾದ ಪಲ್ಷದ ಟಿಕೇಟ್ ಆಕಾಂಕ್ಷಿಗಳಾದ ಮಲ್ಲಿಕಾರ್ಜುನ ಖೂಬಾ ಮತ್ತು ಗುಂಡುರೆಡ್ಡಿ ಅವರಿಗೆ ಟಿಕೇಟ್ ಕೊಡದೆ ಕಲಬುರಗಿಯವರಿಗೆ ಟಿಕೇಟ್ ನೀಡಿದ್ದು ಕಲ್ಯಾಣ ಪ್ರದೇಶಕ್ಕೆ ಮಲತಾಯಿ ಧೋರಣೆ ತೋರಿದಂತಾಗಿದೆ. ಬಂಡಾಯವೆದ್ದ ಮಲ್ಲಿಕಾರ್ಜುನ ಖೂಬಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಾವಿನ ಪ್ರಚಾರ ನಡೆಸಿದ್ದಾರೆ.

ಎನ್.ಸಿ.ಪಿ ಯಿಂದ ಕಣಕಿಳಿಯಬೇಕಿದ್ದ ಎಮ್.ಜಿ. ಮೂಳೆಯವರು ರಾತ್ರಿ ಕಂಡ ಬಾವಿಗೆ ಹಗಲಲ್ಲಿ‌ ಬಿದ್ದ ಹಾಗೆ ವಿರೋಧಿಸುತ್ತಲೇ ಬಿ.ಜೆ.ಪಿ ಪಕ್ಷಕ್ಕೆ ಸೇರಿಕೊಂಡರು.
ಆದರೆ ಸಂತೋಷದ ಸುದ್ದಿ ಎಂದರೆ ಮರಾಠ ಸಮುದಾಯ ಅವರೊಂದಿಗೆ ಹೋಗಿಲ್ಲ.

ಹತ್ತನೇ ತರಗತಿ ವಿದ್ಯಾರ್ಥಿ ಕ್ಲಾಸ್ ರೂಮ್ ಲ್ಲಿ ಆತ್ಮಹತ್ಯೆ

ಅದರ ನಂತರ ಸೆಕ್ಯುಲರ್ ಪಕ್ಷ ಎಂದು ಹೆಸರಿಟ್ಟುಕೊಂಡು ಕೋಮುವಾದಿಗಳ ಜೊತೆ ಸೇರಿಕೊಂಡಿರುವ ಜೆ.ಡಿ.ಎಸ್ ಪಕ್ಷವನ್ನು ಪಿ.ಜಿ.ಆರ್ ಸಿಂಧ್ಯ ಅವರು ಸಾವಿರ ಸಾವಿರ ಸಂಖ್ಯೆಯ ಮರಾಠ ಮುಖಂಡರೊಂದಿಗೆ ಜೆ.ಡಿ.ಎಸ್ ಪಕ್ಷವನ್ನು ತ್ಯಜಿಸಿದ್ದಾರೆ.

ಶಾಸಕರಾಗಿದ್ದ ದಿ. ಬಿ.ನಾರಾಯಣರಾವ್ ಅವರು ಹೇಳಿದಂತೆ ಕಲ್ಯಾಣದ ಮತದಾರರ ಜನತಾ ಅದಾಲತ್ ದ ಅಭಿಪ್ರಾಯ ನೋಡುವುದಾದರೆ: ಅತ್ಯಂತ ಕಡಿಮೆ ಅವಧಿಯಲ್ಲಿ ಜನರಿಗೆ ಮುಟ್ಟುವಂತೆ ತಳಮಟ್ಟದಿಂದ ಅಭಿವೃದ್ಧಿಯ ಕೆಲಸ ಮಾಡಿರುವುದು ಮತ್ತು ಜನರೊಂದಿಗಿನ ಅವರ ಬಾಂಧವ್ಯ ಕಾಂಗ್ರೇಸ್ ಪಕ್ಷಕ್ಕೆ ಅನುಕೂಲಕರವಾಗಿದೆ.

ಕಲಬುರಗಿ ನಗರದಾದ್ಯಂತ ಇಂದಿನಿಂದ 10 ನೈಟ್ ಕರ್ಫ್ಯೂ

ಪ್ರತಿ ಹಳ್ಳಿಯೆಡೆಗೆ ಹೋದಾಗ ಜನರು ಬಿ. ನಾರಾಯಣರಾವ್ ಅವರು ವಿಧಾನಸಭೆಯಲ್ಲಿ ಮಾಡಿದ ಭಾಷಣವನ್ನು ಮುಂಜಾನೆಯ ಸುಪ್ರಭಾತದ ಹಾಗೆ ಕೇಳುತ್ತಿದ್ದಾರೆ. ಈ ಸದನದಕ್ಕಿಂತ ಹೆಚ್ಚು, ಸುಪ್ರೀಂಕೋರ್ಟ್ ಗಿಂತ ಹೆಚ್ಚು , ರಾಷ್ಟ್ರಪತಿಗಿಂತ ಹೆಚ್ಚು, ಪಾರ್ಲಿಮೆಂಟ್ ಗಿಂತ ಹೆಚ್ಚು ರಾಷ್ಟ್ರದ ಮತದಾರರು ಮತ್ತು ಪ್ರಪಂಚಕ್ಕೆ ಮೊದಲ ಪ್ರಜಾಪ್ರಭುತ್ವ ಕೊಟ್ಟಂತ ಬಸವಣ್ಣನವರ ಅನುಭವ ಮಂಟಪಕ್ಕೆ ಅನುದಾನ ಕೊಡಿ ಇದಕ್ಕಿಂತ ಹೆಚ್ಚು ನಾ ನಿಮಗ ಏನೂ ಕೇಳಲ್ಲ ಎಂದ ಅಭಿವೃದ್ಧಿಯ ನಾಯಕನ ಅಕಾಲಿಕ ಅಗಲಿಕೆ ಜನರಿಗೆ ಒಂದು ದೊಡ್ಡ ನಷ್ಟವಾಗಿದೆ. ಬಿ. ನಾರಾಯಣರಾವ್ ಅವರು ಸತ್ತಿಲ್ಲ ಅವರು ಬದುಕಿದ್ದಾರೆ ಐದು ವರ್ಷ ಪೂರ್ಣಗೊಳಿಸಬೇಕು ಎಂಬ ಅಭಿಪ್ರಾಯ ಎಲ್ಲಡೆ ಇದೆ.

ಲಾಕ್ ಡೌನ್ ನಲ್ಲಿ ಅಕ್ಕಿ ಹಂಚಿ, ಚುನಾವಣೆಯಲ್ಲಿ ಹಣ ಹಂಚಿದರೆ ಖರೀದಿಯಾಗುವ ಜನ ಕಲ್ಯಾಣದಲ್ಲಿಲ್ಲ ಎಂದಿದ್ದಾರೆ. ಹಾಗಾಗಿ ಜನ ಹಿಂದುತ್ವವಾದಿಯ ವಾರಸುದಾರರಾದ ಬಿ.ಜೆ.ಪಿಯ ಜೊತೆ ನಿಲ್ಲದೆ. ದೀನ ದಲಿತರ ವಾರಸುದಾರರಾದ ಶರಣ ಸಂಕುಲ, ಬಾಬಾಸಾಹೇಬ ಮತ್ತು ಬಸಣ್ಣನವರ ಜೊತೆ ನಿಲ್ಲಬೇಕು. ಸಂಘಪರಿವಾರದ ಸರಸಂಚಾಲನ ಸರ್ವಾಧಿಕಾರ ಕಲ್ಯಾಣದಲ್ಲಿ ನಡೆಯಲ್ಲ, ಕಲ್ಯಾಣದ ಜನ ಸರ್ವತೋಮುಖವಾಗಿ ಚಿಂತನೆ ಮಾಡುತ್ತಾರೆ. ಕಲ್ಯಾಣ ಸೌಹಾರ್ಧ ಪರಂಪರೆಯನ್ನು ಕಾಪಾಡಿಕೊಂಡು ಬಂದಿದೆ ಎಂದು ಜಗತ್ತಿಗೆ ಈ ಚುನಾವಣೆಯಲ್ಲಿ ತೋರಿಸಬೇಕಾಗಿದೆ.

ಅಶ್ವಿನಿ ಮದನಕರ್
ಸಾಮಾಜಿಕ ಹೋರಾಟಗಾರರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here