“ಬಿ.ಎಚ್.ನಿರಗುಡಿ ಪರ ಮತ ಯಾಚನೆಗೆ ಕನ್ನಡಪರ ಸಂಘಟನೆಗಳ ಒಕ್ಕೂಟ ಸಿದ್ಧ

0
35

ಕಲಬುರಗಿ: ಸರಳ ಜೀವಿ, ಸಜ್ಜನ ಮನೋಭಾವದ ವ್ಯಕ್ತಿ, 20ಕ್ಕೂ ಹೆಚ್ಚು ಕೃತಿಗಳ ಕರ್ತೃ ಸಮಾಜೋನ್ಮುಖಿ ಬರಹಗಾರ ಕನ್ನಡ ಸಾಹಿತ್ಯ ಪರಿಷತ್ತಿಗೆ ಸ್ಪರ್ಧಿಸಿರುವ ಸಾಹಿತಿ ಬಿ.ಎಚ್. ನಿರಗುಡಿ ಅವರಿಗೆ ಕನ್ನಡ ಪರ ಸಂಘಟನೆಗಳ ಒಕ್ಕೂಟ ಬೆಂಬಲಿಸುಲಾಗುವುದು ಎಂದು ಒಕ್ಕೂಟದ ವಿಭಾಗೀಯ ಅಧ್ಯಕ್ಷ ಮಂಜುನಾಥ ನಾಲವಾರಕರ್ ಮತ್ತು ಜಿಲ್ಲಾಧ್ಯಕ್ಷ ಸಚಿನ್ ಫರತಾಬಾದ್ ತಿಳಿಸಿದ್ದಾರೆ.

ನಗರದ ಹಿಂದಿ ಪ್ರಚಾರ ಸಭಾಂಗಣದಲ್ಲಿ ಆಯೋಜಿಸಿದ್ದ ಕನ್ನಡಪರ ಸಂಘಟನೆಗಳ ಒಕ್ಕೂಟಗಳ ಜಿಲ್ಲಾಧ್ಯಕ್ಷ ಮತಯಾಚಿಸಿ ಬೆಂಬಲ ನೀಡಲು ಸಾಹಿತ್ಯ ಸಂಘಟಿಕ ಬಿ.ಎಚ್. ನಿರಗುಡಿ ಅವರು ಕರೆದ ಸಭೆಯಲ್ಲಿ ಸರ್ವರೊಡನೆ ಸಮಾಲೋಚಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

 ಪ್ರಜಾಪ್ರಭುತ್ವ ವ್ಯವಸ್ಥೆಯ ಸಫಲತೆಯಲ್ಲಿ ಆಡಳಿತ ವರ್ಗದ ಪಾತ್ರ ಅಮೋಘ

ಇದೇ ಸಂದರ್ಭದಲ್ಲಿ ಮಾತನಾಡಿದ ಮಂಜುನಾಥ ನಾಲವಾರಕರ್ ಅವರು, ಎಲ್ಲಾ ಸಮ್ಮೇಳನಗಳಲ್ಲಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಪರ ಸಂಘಟನೆಗಳನ್ನು ಕಡೆಗಣಿಸಲಾಗುತ್ತಿದೆ. ನಮಗೂ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು. ಸಚಿನ್ ಫರತಾಬಾದ್ ಮಾತನಾಡಿ, ಈ ಹಿಂದಿನ ಅಧ್ಯಕ್ಷರುಗಳಂತೆ ನೀವು ಕಾರ್ಯನಿರ್ವಹಿಸದೇ ಕನ್ನಡ ಕಟ್ಟುವ, ಉತ್ತುವ- ಬಿತ್ತುವ, ಎಲ್ಲೆಡೆಯೂ ಕನ್ನಡದ ವಾತಾವರಣ ನಿರ್ಮಾಣ ಮಾಡಬೇಕು ಅದಕ್ಕೆ ನಮ್ಮ ಸಹಕಾರ ಸದಾ ಇರುತ್ತದೆ ಎಂದು ಸಲಹೆ ನೀಡಿದರು.

ಕೋವಿಡ್-19 ಹೆಲ್ಪ್ ಡೆಸ್ಕ್‍ಗೆ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಭೇಟಿ

ನಂತರ ಮಾತನಾಡಿದ ಬಿ.ಎಚ್. ನಿರಗುಡಿ, ಸದಾ ಕನ್ನಡದ ಸೇವೆ ಮಾಡುವುದರೊಂದಿಗೆ ಕನ್ನಡದ ತೇರನ್ನು ಎಳೆಯಲು ತಮ್ಮ ಬೆಂಬಲ ಬೇಕು. ಒಂದೇ ಒಂದು ಬಾರಿ ತಾಯಿ ಭುವನೇಶ್ವರಿಯ ಸೇವೆಗೆ ಅವಕಾಶ ನೀಡಿ. ನಾನು ಇನ್ನೊಬ್ಬರ ಹಾಗೆ ಇದು ನನ್ನ ಕೊನೆ ಚುನಾವಣೆ ಎಂದು ಪದೇ ಪದೆ ಸ್ಪರ್ಧಿಸುವುದಿಲ್ಲ ಎಂದು ಭರವಸೆ ನೀಡಿ ತಾವೆಲ್ಲರೂ ಬೆಂಬಲ ನೀಡಬೇಕು ಎಂದು ಕೋರಿದರು.

ಈ ಸಂದರ್ಭದಲ್ಲಿ ಮುಖಂಡರಾದ ಗೋಪಾಲ ನಾಟೀಕಾರ, ಗುರುರಾಜ ಬಂಡಿ, ಸೋಮನಾಥ ಕಟ್ಟಿಮನಿ, ಲಿಂಗರಾಜ ಸಿಂಗಾಪೂರ್, ಆನಂದ ಕಪನೂರ್, ನಾಗರಾಜ ಸ್ವಾದಿ, ಮಹೇಶ ಕಾಶಿ, ದತ್ತು ಹಯ್ಯಾಳಕರ್, ಜಗನ್ನಾಥ ಪಟ್ಟಣಶೆಟ್ಟಿ, ಸಿದ್ದು ಜಮಾದಾರ, ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here