ಕೋವಿಡ್ ನಿಯಂತ್ರಣಕ್ಕಾಗಿ ವಾರದ ಸಂತೆ ಬಂದ್ ಮಾಡಿಸಿದ ಅಧಿಕಾರಿಗಳು

0
58

ಶಹಾಬಾದ: ಕೋವಿಡ್ ೧೯ ಎರಡನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ನಗರದಲ್ಲಿ ರವಿವಾರ ನಡೆಯುವ ವಾರದ ಸಂತೆಯನ್ನು ತಹಸೀಲ್ದಾರ ಸುರೇಶ ವರ್ಮಾ, ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ಪಿಎಸ್‌ಐ ಯಲ್ಲಮ್ಮ ಅವರ ನೇತೃತ್ವದಲ್ಲಿ ಸಂಪೂರ್ಣ ಬಂದ್ ಮಾಡಿಸಲಾಯಿತು.

ಬೆಳಿಗ್ಗೆ ೬:೩೦ ಗಂಟೆಗ ತರಕಾರಿ ಮಾರುಕಟ್ಟೆಗೆ ಪ್ರವೇಶ ಮಾಡಿದ ಅಧಿಕಾರಿಗಳು ಕೆಲವೇ ಜನರು ವ್ಯಾಪಾರ ಮಾಡುತ್ತಿರುವುದನ್ನು ಕಂಡು ತರಾಟೆಗೆ ತೆಗೆದುಕೊಂಡರು.ಅಲ್ಲದೇ ಅವರನ್ನು ಅಲ್ಲಿಂದ ತೆರಳುವಂತೆ ಮಾಡಿದರು.ಆಗ ಒಬ್ಬರಿಬ್ಬರು ಅಧಿಕಾರಿಗಳ ಜತೆಗೆ ತಕರಾರು ಮಾಡಲು ಪ್ರಾರಂಭಿಸಿದರು.ಆಗ ತಹಸೀಲ್ದಾರ ಸುರೇಶ ವರ್ಮಾ ಅವರು ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕಾಗಿರುವುದು ಪ್ರತಿಯೊಬ್ಬನ ಕರ್ತವ್ಯ.ಒಂದು ಸರ್ಕಾರದ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಿದರೇ ಕಾನೂನಾತ್ಮಕ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

Contact Your\'s Advertisement; 9902492681

ಶಹಾಬಾದ: ವಾರಾಂತ್ಯ ಕರ್ಫ್ಯೂಗೆ ತಾಲೂಕಿನ ಜನತೆ ಸಂಪೂರ್ಣ ಬೆಂಬಲ

ಅಲ್ಲದೇ ಜಗತ್ತಿನಲ್ಲಿಯೇ ಕೊರೊನಾ ರೋಗ ಸಾಕಷ್ಟು ಪ್ರಾಣ ಹಾನಿ ಮಾಡಿ ದಿಗಲೆಬ್ಬಿಸಿದೆ.ಆದರೂ ಜೀವದ ಮೇಲೆ ಹಂಗಿಲ್ಲದೆ ವ್ಯಾಪಾರ ಮಾಡುವುದು ಎಷ್ಟರ ಮಟ್ಟಿಗೆ ಸರಿ.ನಾವು ಬದುಕಿದ್ದರೇ ಎಲ್ಲಾ. ಈ ರೀತಿಯ ವರ್ತನೆಯಿಂದ ಕೊರೊನಾ ಸಮುದಾಯದ ಮಟ್ಟಕ್ಕೆ ಹರಡುತ್ತಿದೆ.ಈಗಾಗಲೇ ದೇಶದಲ್ಲಿಯೇ ಆಕ್ಸಿಜನ್ ಸಿಗುತ್ತಿಲ್ಲ, ಬೆಡ್ ,ವೆಂಟಿಲೇಟರ್ ಸಿಗುತ್ತಿಲ್ಲ. ಸಾಕಷ್ಟು ರೋಗಿಗಳು ಸಾಯುತ್ತಿದ್ದಾರೆ.

ಸಾಕಷ್ಟು ಜನರು ರೋಗದಿಂದ ಬಳಲುತ್ತಿದ್ದಾರೆ.ಅಲ್ಲದೇ ದಿನದಿಂದ ದಿನಕ್ಕೆ ವೈರಸ್ ಹರಡುವ ವೇಗ ಹೆಚ್ಚುತ್ತಿದೆ.ಆದರೂ ಮೊಂಡುತನ ಮಾಡುವುದು ಸರಿಯಲ್ಲ.ಕೂಡಲೇ ಅಂಗಡಿ ಬಂದ್ ಮಾಡಿ ಹೋದರೇ ಸರಿ.ಇಲ್ಲವಾದರೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೆನೆ ಎಂದು ಹೇಳಿದ ಬಳಿಕ, ವ್ಯಾಪಾರಸ್ಥರು ಅಲ್ಲಿಂದ ಜಾರಿದರು.ನಂತರ ನಗರದ ಮುಖ್ಯ ರಸ್ತೆಯ ಮೂಲಕ ಸಂಚರಿಸಿ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಿಸಿದರು.ಕೆಲವು ಕಡೆ ೧೦ ಗಂಟೆಯ ನಂತರವೂ ವ್ಯಾಪಾರ ಮಾಡುತ್ತಿರುವವರನನ್ನು ಗದರಿಸಿದರು.ಅಲ್ಲದೇ ಮಾಸ್ಕ್ ಕಡ್ಡಾಯವಾಗಿ ಹಾಕದವರ ವಿರುದ್ಧ ದಂಡ ಹಾಕಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರ ನಿಗದಿಪಡಿಸಿದ ಬೆಡ್ ಚಾರ್ಚ್ ಮಾತ್ರ ಪಡೆಯಲು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ

ಈ ಸಂದರ್ಭದಲ್ಲಿ ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ಕಂದಾಯ ಅಧಿಕಾರಿ ಸುನೀಲಕುಮಾರ ವೀರಶೆಟ್ಟಿ, ಪಿಎಸ್‌ಐ ಯಲ್ಲಮ್ಮ, ಸಿಬ್ಬಂದಿಗಳಾದ ನಿಂಗಣ್ಣಗೌಡ ಪಾಟೀಲ, ಹುಸೇನ ಪಾಷಾ, ಶಿವರಾಜ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here