ಶಹಾಪುರ : ಕೊರೋನಾ ಮಹಾಮಾರಿ ತೀವ್ರಗತಿಯಲ್ಲಿ ಹರಡುತ್ತಿದ್ದಂತೆ ರಾಜ್ಯಸರ್ಕಾರ ಲಾಕ್ ಡೌನ್ಸ್ ಹೊರಡಿಸಿದ ಹಿನ್ನಲೆಯಲ್ಲಿ ತಾಲ್ಲೂಕಿನ ಸಗರ ಗ್ರಾಮದಲಿ ಲಾಕ್ ಡೌನ್ ಬಿಸಿ ತಟ್ಟಿದೆ ಗ್ರಾಮೀಣ ಭಾಗದ ರಸ್ತೆಗಳು ಬಿಕೋ ಎನ್ನುತ್ತಿದ್ದವು ವ್ಯಾಪಾರ ವಹಿವಾಟು ಬೆಳಿಗ್ಗೆಯಿಂದಲೇ ಬಂದ್ ಆಗಿತ್ತು ಸಾರ್ವಜನಿಕರ ದಿನಬಳಕೆ ವಸ್ತುಗಳ ಖರೀದಿಗಾಗಿ ಅಂಗಡಿ ಮುಂಗಟ್ಟುಗಳಿಗೆ ಬೆಳಿಗ್ಗೆ ಹತ್ತು ಗಂಟೆಗೆಯ ವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು ಅನಗತ್ಯವಾಗಿ ಹೊರಗಡೆ ಬಂದೋರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.
ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದ ವಿಶ್ವ ಗುರು ಭಾರತದ ಬಗ್ಗೆ ನಿಮಗೆ ಗೊತ್ತಾ?
ಈಗಾಗಲೇ ಕರೋನದ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಗ್ರಾಮ ಪಂಚಾಯಿತಿ ವತಿಯಿಂದ ಡಂಗುರ ಸಾರಲಾಗಿದೆ ಅನೌಪಚಾರಿಕವಾಗಿ ಮರದ ಕೆಳಗಡೆ ಮಾತನಾಡಿಕೊಂಡು ಕುಳಿತವರಿಗೆ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿ ಯಾರೂ ಮನೆಯಿಂದ ಹೊರಗಡೆ ಬಾರದಂತೆ ಸಾರ್ವಜನಿಕರಿಗೆ ತಿಳಿ ಪಡಿಸಲಾಗಿದೆ ಅಲ್ಲದೆ ಜನಜಾಗೃತಿ ಮೂಡಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿಸಲಾಯಿತು.
ಕರ್ನಾಟಕ ರಾಜ್ಯ ನದಾಫ್ ಪಿಂಜಾರ್ ಸಂಘದಿಂದ ಸ್ಪಷ್ಟೀಕರಣ
ಪ್ರತಿಯೊಬ್ಬರು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು ಅಂದಾಗ ಮಾತ್ರ ಕೊರೋನಾ ಮಹಾಮಾರಿ ತಡೆಗಟ್ಟಿದಂತಾಗುತ್ತದೆ ಎಂಬುದನ್ನು ನಾವು ನೀವೆಲ್ಲರೂ ಅರಿತುಕೊಳ್ಳಬೇಕಾಗಿದೆ.