ಚಿತ್ತಾಪುರ: ಕರೋನಾ 2ನೇ ಅಲೆಯ ಸೋಂಕು ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ 14 ದಿನಗಳ ಜನತಾ ಕರ್ಫ್ಯೂ ಜಾರಿ ಮಾಡಿರುವುದಯಿಂದ ನಿತ್ಯ ದುಡಿಯುವ ಕಾರ್ಮಿಕ ವರ್ಗ ಹಾಗೂ ಬಡವರಿಗೆ ವಿತರಿಸುವ ಪಡಿತರ ಆಹಾರ ಧಾನ್ಯಗಳನ್ನು ಹೆಚ್ಚಿಗೆ ಮಾಡಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಅಖೀಲ ಭಾರತ ಬಂಜಾರ ಸೇವಾ ಸಂಘದ ತಾಲೂಕ ಯುವ ಅಧ್ಯಕ್ಷ ಜಗದೀಶ ಚವ್ಹಾಣ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಕರೋನಾ ಸೋಂಕು ತಡೆಯುವಲ್ಲಿ ಸರ್ಕಾರ ವಿಫಲ:ಚಂದ್ರಶೇಖರ ವೈ.ಕಾಶಿ.
ಕಾರ್ಮಿಕ ವರ್ಗ ಹಾಗೂ ಬಡವರಿಗೆ ಕೆಲಸವಿಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ.ಕಳೆದ ವರ್ಷ ಲಾಕ್ಡೌನ್ ಮಾಡಿದಾಗ ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಿಸಲಾಯಿತು.ಈ ವರ್ಷವು ಉಚಿತವಾಗಿ ಆಹಾರ ಧಾನ್ಯಗಳನ್ನು ನೀಡಬೇಕು. ಯಾರು ಹಸಿವಿನಿಂದ ಸಾಯದಂತೆ ನೋಡಿಕೊಳ್ಳುವುದು ಸರ್ಕಾರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ರಾಜ್ಯದ ಉಗ್ರಾಣದಲ್ಲಿ ಇರುವ ದಾಸ್ತಾನುಗಳನ್ನು ಇಂತಹ ತುರ್ತು ಪರಿಸ್ಥಿತಿಯಲ್ಲಿ ಸರ್ಕಾರ ಬಳಸಿಕೊಳ್ಳಬೇಕು, ಬಡವರಿಗೆ ಅವರ ಜೀವನ ನಡೆಸಲು ಆರ್ಥಿಕ ಸಹಾಯ ಮಾಡಬೇಕು ಎಂದು ತಿಳಿಸಿದರು.