ಸೇಡಂ: ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ 24 ಜನ ರೋಗಿಗಳು ಸಾವನಪ್ಪಿರುವುದು ಇದಕ್ಕೆಲ್ಲ ರಾಜ್ಯ ಬಿಜೆಪಿ ಸರಕಾರವೇ ನೇರ ಹೋಣೆ ಆಗಿದೆ ಎಂದು ಸೇಡಂ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ದೂರಿದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ ಕೊರತೆ ಇದ್ದರೆ ರೋಗಿಗಳನ್ನು ಒಳರೋಗಿಗಳನ್ನಾಗಿ ಏಕೆ ಸೇರಿಸಿಕೊಳ್ಳಲಾಗಿದೆ.
ರೋಗಿಗಳಿಗೆ ಆಸ್ಪತ್ರೆಯಲ್ಲಿ ಸೇರಿಸಿಕೊಂಡ ನಂತರ ಆ ರೋಗಿಯ ಎಲ್ಲಾ ಚಿಕಿತ್ಸೆ ವ್ಯವಸ್ಥೆ ಮಾಡಿಕೊಳ್ಳುವುದು ಅಲ್ಲಿನ ಆಸ್ಪತ್ರೆ ವೈದ್ಯರ ಜವಾಬ್ದಾರಿಯಾಗಿದೆ ರಾಜ್ಯದಲ್ಲಿ ಇಷ್ಟೊಂದು ಭಯಾನಕ ಪರಿಸ್ಥಿತಿಯಲ್ಲಿ ಮುಂಜಾಗ್ರತೆ ಮಾಡಿಕೊಳ್ಳದ ಬಿಜೆಪಿ ಸರಕಾರದ ವಿಫಲತೆಯಿಂದಾಗಿ ಅಮಾಯಕ ಬಡ 24 ರೋಗಿಗಳು ತಮ್ಮ ಜೀವವನ್ನೇ ಕಳೆದುಕೊಳ್ಳಬೇಕಾಯಿತು.
ಸರಕಾರ ಕೂಡಲೇ ಮೃತಪಟ್ಟಿರುವ ಪ್ರತಿಯೊಬ್ಬ ರೋಗಿಗಳ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರ ನೀಡಬೇಕು ಹಾಗೂ ಆಸ್ಪತ್ರೆಯಲ್ಲಿ ನಡೆದಿರುವ ಘಟನೆ ಬಗ್ಗೆ ಕೂಡಲೇ ತನಿಖೆ ಮಾಡಿ ತಪ್ಪಿಸ್ಥರಿಗೆ ಶೀಕ್ಷೆ ನೀಡಬೇಕು ಎಂದು ಬಾಲರಾಜ್ ಗುತ್ತೆದಾರ ಒತ್ತಾಯಿಸಿದ್ದಾರೆ.