ಬಸವ ಜಯಂತಿ ಹಾಗೂ ರಮಜಾನ್ ಹಬ್ಬವನ್ನು ಮನೆಯಲ್ಲಿ ಆಚರಿಸತಕ್ಕದ್ದು: ಕಲ್ಲದೇವರು

0
119

ಶಹಾಬಾದ: ಕೊರೊನಾ ಸಂದರ್ಭ ಇದಾಗಿದ್ದು, ಸರ್ಕಾರದ ಸೂಚನೆಯನ್ನು ಪಾಲನೆ ಮಾಡುವ ಮೂಲಕ ಬಸವ ಜಯಂತಿ ಹಾಗೂ ರಮಜಾನ್ ಹಬ್ಬದ ಆಚರಣೆ ವೇಳೆಯಲ್ಲಿ ಪ್ರತಿಯೊಬ್ಬರು ಶಾಂತಿ, ಸೌಹಾರ್ದತೆಯಿಂದ ಸರಳವಾಗಿ ಮನದಲ್ಲಿ ಮತ್ತು ಮನೆಯಲ್ಲೇ ಮಾಡತಕ್ಕದ್ದು ಎಂದು ಪಿಐ ಕೃಷ್ಣಪ್ಪ ಕಲ್ಲದೇವರು ಮನವಿ ಮಾಡಿದರು.

ಅವರು ಗುರುವಾರ ಬಸವ ಜಯಂತಿ ಹಾಗೂ ರಮಜಾನ್ ಹಬ್ಬದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಠಾಣೆ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಾಗರಿಕ ಶಾಂತಿ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಸವ ಜಯಂತಿ ಹಾಗೂ ರಮಜಾನ ಹಬ್ಬ ಎರಡು ಹಬ್ಬಗಳು ಕೂಡಿಕೊಂಡು ಬಂದಿವೆ. ಕಳೆದ ಬಾರಿಯೂ ಕೋವಿಡ್ ಇರುವುದರಿಂದ ಸರಳವಾಗಿ ಮನೆಯಲ್ಲೆ ಆಚರಣೆ ಮಾಡಲಾಗಿತ್ತು. ಈ ಬಾರಿ ಈದ್ಗಾ ಮೈದಾನಗಳಲ್ಲಿ , ಮಜ್ಜಿದ್‌ಗಳಲ್ಲಿ ಈ ಬಾರಿ ಪ್ರಾರ್ಥನೆ ಮಾಡುವಂತಿಲ್ಲ.ಪರಸ್ಪರ ಆಲಂಘಿಸಲು ಅವಕಾಶವಿಲ್ಲ.ಅಲ್ಲದೇ ಸಾರ್ವಜನಿಕರು ಮನೆಯಿಂದ ಹೊರಗಡೆ ಬರದೇ ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರದ ನಿಯಮಗಳನ್ನು ಪಾಲಿಸಬೇಕಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ಪಾಳು ಬಿದ್ದ ಇಎಸ್‌ಐ ಆಸ್ಪತ್ರೆಯನ್ನು ಸ್ವಚ್ಚಗೊಳಿಸುತ್ತಿರುವ ಅಧಿಸೂಚಿತ ಕ್ಷೇತ್ರ ಸಮಿತಿ

ಪಿಎಸ್‌ಐ ತಿರುಮಲೇಶ ಮಾತನಾಡಿ,ಈ ಬಾರಿ ಕೊರೊನಾ ಸಂಕ? ಸಮಯವಾಗಿದ್ದರಿಂದ ಸಾರ್ವಜನಿಕರು ಸರ್ಕಾರದ ನಿರ್ದೇಶನಗಳನ್ನು ಪಾಲನೆ ಮಾಡುತ್ತಾ ಹಬ್ಬವನ್ನು ಆಚರಿಸಬೇಕಾಗಿದೆ.ಒಂದು ವೇಳೆ ಸರ್ಕಾರದ ಆದೇಶವನ್ನು ಉಲ್ಲಂಘನೆಯಾದರೆ ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ಹಬ್ಬದ ಸಂದರ್ಭದಲ್ಲಿ ಪ್ರಚೋದನಾಕಾರಿ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ನಾಗರಿಕರ ಹಿತ ಕಾಪಾಡುವುದು ಮತ್ತು ಶಾಂತಿ ಸುವ್ಯವಸ್ಥೆ ಪಾಲನೆಯು ಪ್ರತಿಯೊಬ್ಬರ ಜವಾಬ್ದಾರಿ. ಸಣ್ಣಪುಟ್ಟ ಅಹಿತಕರ ಘಟನೆ ನಡೆದರೂ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಕೋರಿದರು.

ಡಾ.ರಶೀದ್ ಮರ್ಚಂಟ,ಗಿರೀಶ ಕಂಬಾನೂರ, ಅಣವೀರ ಇಂಗಿನಶೆಟ್ಟಿ, ಕುಮಾರ ಚವ್ಹಾಣ,ಸೂರ್ಯಕಾಂತ ಕೋಬಾಳ,ಮೃತ್ಯುಂಜಯ್ ಹಿರೇಮಠ,ಶರಣು ಪಗಲಾಪೂರ,ಅನ್ವರ ಪಾಶಾ, ಶಿವು ನಾಟೇಕಾರ, ಇನಾಯತಖಾನ ಜಮಾದಾರ,ಮ.ಇಮ್ರಾನ್, ಮ.ಮಸ್ತಾನ, ಡಾ.ಅಹ್ಮದ್ ಪಟೇಲ್,ಅಣ್ಣಪ್ಪ ದಸ್ತಾಪೂರ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here