ಕಲಬುರಗಿ: ಕೈ ಮಗ್ಗ ನೇಕಾರರಿಗೆ ಧನಸಹಾಯ ಘೋಷಣೆ ಮಾಡಿ ಅವರಿಗೆ ಕನಿಷ್ಠ ರೂ. 11 ಸಾವಿರದಿಂದ 21 ಸಾವಿರ ಆರ್ಥಿಕ ಧನ ಸಹಾಯ ಘೋಷಣೆ ಮಾಡಬೇಕೆಂದು ಕ.ಕ. ನೇಕಾರ ಮಹಾಸಭಾ ಜಿಲ್ಲಾ ಸಂಚಾಲಕ ಆಗ್ರಹಿಸಿ, ಸರ್ಕಾರ ನೇಕಾರರನ್ನು ಕಡೆಗಣಿಸಿ ಅನ್ಯಾಯ ಮಾಡಿದೆ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಈ ಭಾಗದಲ್ಲಿ ತುರ್ತು ಅಭಿವೃದ್ಧಿ ಘಟಕ ಹೆಸರಿಗೆ ಮಾತ್ರ ಇದೆ ಆದರೆ ಕೈಮಗ್ಗ ಹಾಗೆ ಉಳಿದಿದೆ, ಅದಕ್ಕೆ ಉತೇಜನ, ತರಬೇತಿ ಇಲ್ಲದೆ ಗುಡಿ ಕೈಗಾರಿಕೆಗಳು ಮುಚ್ಚಳ ಗೊಂಡಿವೆ. 371 ಜೆ ಅಡಿಯಲ್ಲಿ ತಂದು 1100 ಸಾವಿರ ಕೋಟಿ ಕೇಂದ್ರ ಸರ್ಕಾರದಿಂದ ಪಡೆದು ಅಭಿವೃದ್ಧಿ ಪಡಿಸಲು ನ್ಯಾಯವಾದಿ ಜೇ. ವಿನೋದ ಕುಮಾರ ಅಗ್ರಹಿಸಿದ್ದಾರೆ.
ನೇಕಾರ ಸಮ್ಮಾನ ಅಡಿಯಲ್ಲಿ ಪ್ರತಿಯೊಬ್ಬ ಕೈಮಗ್ಗ ನೇಕಾರ ವಿಶೇಷ ಅರ್ಥಿಕ ಧನಸಹಾಯ ಅಡಿಯಲ್ಲಿ 6000/- ಕೇಂದ್ರ ಸರ್ಕಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.