ಕಲಬುರಗಿ: ಉಚಿತ ಅಂಬ್ಯುಲೆನ್ಸ್ ಸೇವೆ

0
28

ಕಲಬುರಗಿ: ಮಹಾಮಾರಿ ಕೋವಿಡ್ 19 ಮಾಮಾರಿಂದಾಗಿ ರಾಜ್ಯದ ಜನತೆ ಸಂಕಷ್ಟದಲ್ಲಿ ಇರುವ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮೈ ಸೇವಾ ತಂಡವು ಕಲಬುರ್ಗಿ ಜಿಲ್ಲಾ ಅನಾರೋಗ್ಯ ಪೀಡಿತರಿಗೆ ಸಹಾಯ ಹಾಗೂ ಸೇವೆಯನ್ನು ಮಾಡುವ ಸಂಕಲ್ಪ ಮಾಡಿದ್ದೇವೆ. ಇಂದಿನಿಂದ ಉಚಿತ ಅಂಬುಲೆನ್ಸ್ ಸೇವೆ ಹಾಗೂ ಆಕ್ಸಿಜನ್ ಕನ್ಸನ್‍ಟೇಟರ್‍ಗಳು ಅನಾರೋಗ್ಯ ಪೀಡಿತರಿಗೆ ಮನೆ ಬಾಗಿಲಿಗೆ ತಲುಪಿಸುವ ಪ್ರಯತ್ನ ಮಾಡುತ್ತೇವೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಪ್ರವೀಣ್ ತೆಗನೂರ್ ತಿಳಿಸಿದ್ದಾರೆ.

ಆಂಬುಲೆನ್ಸ್ ಸೇವೆಗಾಗಿ 9986176909 ಶರಣು ಸಜ್ಜಂಶೆಟ್ಟಿ ಅವರನ್ನು ಹಾಗೂ ಆಕ್ಸಿಜನ್ ಕನ್ಸೆನ್‍ಟೇಟರ್‍ಗಳಿಗಾಗಿ 9916542222 ಡಾ. ಶಂಭುಲಿಂಗ ಪಾಟೀಲ್ ಬಳಬಟ್ಟಿ ಇವರನ್ನು ಸಂಪರ್ಕಿಸಬಹುದು.

Contact Your\'s Advertisement; 9902492681

ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೆವಾಡಿ ಹಾಗೂ ನಗರ ಅಧ್ಯಕ್ಷರಾದ ಸಿದ್ಧಜಿ ಪಾಟೀಲ್ ಅವರು ಜಂಟಿಯಾಗಿ ಮಾತನಾಡಿ ಕಳೆದ ಲಾಕ್ಡೌನ್‍ನಲ್ಲಿ ಉಚಿತ ಔಷಧ ಸೇವೆಯನ್ನು ಜನರ ಮನೆಯ ಬಾಗಿಲಿಗೆ ತಲುಪಿಸುವ ಮೂಲಕ ಯಶಸ್ವಿಯಾಗಿ ನಿಭಾಯಿಸಿದ್ದು ಇದೇ ತಂಡ ಈ ಬಾರಿಯೂ ಇದೇ ತಂಡವು ಯಶಸ್ವಿಯಾಗಿ ನಿಭಾಯಿಸುತ್ತದೆ ಎಂದು ಹೇಳಿದರು. ಕಲಬುರ್ಗಿ ಜಿಲ್ಲೆಯ ಉಚಿತ ಅಂಬುಲೆನ್ಸ್ ಹಾಗೂ ಆಕ್ಸಿಜನ್ ಕನ್ಸೆಂತ್ರೇಟರ್ ಸೇವೆ ಮಾಡಿದ್ದಕ್ಕಾಗಿ ವಿಜಯೇಂದ್ರ ಯಡಿಯೂರಪ್ಪನವರಿಗೆ ಕೃತಜ್ಞಾತಾರ್ಹವಾಗಿದೆ ಎಂದರು.

ಸಂದರ್ಭದಲ್ಲಿ ಮುಖಂಡರಾದ ವಿಶಾಲ ದರ್ಗಿ, ಮಾಹಾದೇವ ಬೆಳಮಗಿ, ಸೂರಜ್ ತಿವಾರಿ, ಸೋಮು, ಅಣವೀರ ಪಾಟೀಲ್, ಶರಣು ಸಜ್ಜನ್, ಶಂಭು ಪಾಟೀಲ್, ಅಂಬರೀಶ್ ಮೇತ್ರಿ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here