ಬಡವರ ನೆರವಿಗೆ ಧಾವಿಸಿ ಆಹಾರದ ಕಿಟ್ ಒದಗಿಸಿದ ರವಿ ಚವ್ಹಾಣ

0
82

ಶಹಾಬಾದ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ತಾಲೂಕಿನಲ್ಲಿನ ಬಡವರಿಗೆ ಆಹಾರದ ಕಿಟ್ ಒದಗಿಸುವ ಮೂಲಕ ಕಾಂಗ್ರೆಸ್ ಮುಖಂಡ ರವಿ ಚವ್ಹಾಣ ಬಡವರ ನೆರವಿಗೆ ಧಾವಿಸಿದ್ದಾರೆ.

ಕಳೆದ ಹಲವು ವ?ಗಳಿಂದಲೂ ಹಲವು ಸಾಮಾಜಿಕ ಕಾರ್ಯಕ್ರಮ ಮಾಡಿ ಸಮಾಜ ಸೇವೆ ಮಾಡುತ್ತಿರುವ ರವಿ ಚವ್ಹಾಣ ಅವರು ಈಗಾಗಲೇ ತಮ್ಮದೇ ರಕ್ತದ ಬ್ಯಾಂಕಿನಿಂದ ಸಂಕಷ್ಟದಲ್ಲಿರುವವರಿಗೆ ರಕ್ತವನ್ನು ಒದಗಿಸುತ್ತಿದ್ದಾರೆ.ಅಲ್ಲದೇ ಕೊರೊನಾ ಸೊಂಕಿತರಿಗೆ ಆಕ್ಸಿಜನ್ ಸಿಲಿಂಡರ್‌ಗಳನ್ನು ಉಚಿತವಾಗಿ ಒದಗಿಸುವ ಮೂಲಕ ಬಡವರ ಸಂಕಷ್ಟಕ್ಕೆ ತಲೆ ಬಾಗಿದ್ದಾರೆ. ಲಾಕ್ ಡೌನ್ ಆದಾಗಿನಿಂದ ಈವರೆಗೂ ಎಲ್ಲಾ ಸಮುದಾಯಗಳಿಗೆ ಆಹಾರದ ಕಿಟ್ ವಿತರಣೆ ಮಾಡುವ ಮೂಲಕ ಬಡವರಿಗೆ ಸಹಾಯ ಹಸ್ತ ಚಾಚಿದ್ದಾರೆ. ಬಡವರಿಗೆ ಮತ್ತು ನೊಂದವರಿಗೆ ಪ್ರತಿನಿತ್ಯ ಫುಡ್ ಕಿಟ್ ವಿತರಿಸುತ್ತಿದ್ದಾರೆ.

Contact Your\'s Advertisement; 9902492681

ಶಹಾಬಾದ ನಗರದ ೨೭ ರ್ವಾಗಳಲ್ಲಿ ಸುಮಾರು ೧೫ ವಾರ್ಡಗಳಿಗೆ ತಲಾ ವಾರ್ಡಗಳಿಗೆ ೫೦ ಕ್ಕಿಂತ ಹೆಚ್ಚು ಬಡ ಕುಟುಂಬಗಳನ್ನು ಗುರುತಿಸಿ ಫುಡ್ ಕಿಟ್ ಜೊತೆಗೆ ಮಾಸ್ಕ್ ವಿತರಿಸಿದ್ದಾರೆ.ಅಲ್ಲದೇ ಇನ್ನೆರಡು ದಿನಗಳಲ್ಲಿ ೧೨ವಾರ್ಡಗಳಿಗೆ ದಿನಸಿ ಕಿಟ್ ವಿತರಿಸಲಿದ್ದಾರೆ.

ಆಹಾರದ ಕಿಟ್ ವಿತರಿಸಿದ ಬಳಿಕ ಮಾತನಾಡಿದ ರವಿ ಚವ್ಹಾಣ ಅವರು, ಕೊರೋನಾವೆಂಬ ಮಹಾಮಾರಿ ಜನರನ್ನು ದೊಡ್ಡಮಟ್ಟದಲ್ಲಿ ಕಾಡುತ್ತಿದೆ. ಅದರಲ್ಲೂ ಸರ್ಕಾರದ ಸೂಚನೆಯಂತೆ ಲಾಕ್‌ಡೌನ್ ಆದ ದಿನದಿಂದಲೂ ಎಲ್ಲಾ ಸಮುದಾಯಗಳು ಬಡತನದಿಂದ ನೊಂದು ಹೋಗಿವೆ. ಹೀಗಾಗಿ ಎಲ್ಲಾ ಬಡವರಿಗೆ ಕಿಟ್‌ಗಳನ್ನು ವಿತರಿಸುತ್ತಿದ್ದು, ಸಾಮಾಜಿಕ ಅಂತರದೊಂದಿಗೆ ನೊಂದ ಕುಟುಂಬಗಳಿಗೆ ವಿತರಣೆ ಮಾಡುತ್ತಿದ್ದೇವೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್ ಮಾತನಾಡಿ,ರವಿ ಚವ್ಹಾಣ ನಾಮಕೇ ಬಾಸ್ತೆ ಕಿಟ್ ಹಂಚದೇ ಒಂದು ತಿಂಗಳಿಗಾಗುವಷ್ಟು ಆಹಾರ ಧಾನ್ಯಗಳನ್ನು ಹಂಚಿದ್ದಾರೆ. ಅವರಿಂದ ಬಡವರಿಗೆ ಸಹಾಯವಾಗಲಿ ಎಂದು ಹೇಳಿದಲ್ಲದೇ, ಮನೆಯಿಂದ ಆಚೆ ಬರುವ ಪ್ರತಿಯೊಬ್ಬರು ಮಾಸ್ಕ್ ಕಡ್ಡಾಯವಾಗಿ ಧರಿಸಿ.ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಮಾಸ್ಕ್‌ನ್ನು ಕೇವಲ ಬಾಯಿಗಲ್ಲ, ಮೂಗನ್ನು ಸೇರಿಸಿ ಹಾಕಿಕೊಳ್ಳಬೇಕು.

ಕಾಂಗ್ರೆಸ್ ಮುಖಂಡರಾದ ಶರಣಗೌಡ ಗೋಳಾ, ವಿಶ್ವರಾಧ್ಯ ಬೀರಾಳ, ಮೃತ್ಯುಂಜಯ್ ಹಿರೇಮಠ,ಪೀರಪಾಶಾ, ಹಾಷಮ್ ಖಾನ, ದೇವೆಂದ್ರಪ್ಪ ವಾಲಿ, ಕುಮಾರ ಚವ್ಹಾಣ,ಅನ್ವರ ಪಾಶಾ,ಬಾಬಾ ಖಾನ,ಮಹ್ಮದ್ ಜಾವೀದ್,ಮೀರಾಜ ಸಾಹೇಬ,ಮತೀನ ಬಾದಲ್, ಶಹನಾವಾಜ್,ಮಹ್ಮದ್ ಬಾಕ್ರೋದ್ದಿನ್, ಡಾ.ಅಹ್ಮದ್ ಪಟೇಲ್,ಸೂರ್ಯಕಾಂತ ಕೋಬಾಳ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here