ಗುಲ್‌ಮೊಹರ್‌ನ ಮೋಡಿ ನೋಡಿ

0
24

ಶಹಾಬಾದ: ಹೂವು ಅರಳಿರುವ ಸುಂದರ ಚಿತ್ತಾರಕ್ಕೆ ಮರಳಾಗದವರಿಲ್ಲ. ಇಲ್ಲಿನ ಜಿಇ ಕಾಲೋನಿಯಲ್ಲಿ ಕೆಂಪು ರಂಗಿನ ಅರಳಿದ ಹೂ ರಾಶಿಯನ್ನು ಮುಡಿಯಲ್ಲಿ ಹೊತ್ತು ನಿಂತಿರುವ ಗುಮೊಹರ್ ಮರಗಳ ಸಾಲು ಸ್ವಾಗತ ಕೋರುತ್ತಿವೆ. ಕಾಲೋನಿಯಲ್ಲಿ ಯಥೇಚ್ಛವಾಗಿ ಬೆಳೆದಿರುವ ಮರಗಳು ಈಗ ಹೂಗಳನ್ನು ಅರಳಿಸಕೊಂಡು ದಾರಿ ಹೋಕರ ಕಣ್ಮನ ಸೆಳೆಯುತ್ತಿದೆ.

ಒಂದು ಬಾರಿ ಕಾಲೋನಿಯಲ್ಲಿ ಸುತ್ತಾಡಿದರೆ ವೈವಿದ್ಯಮಯ ಸಸ್ಯ ಸಂಪತ್ತು ನಮ್ಮನ್ನು ಆಕರ್ಷಿಸದೇ ಇರಲಾರದು. ಹಚ್ಚಹಸಿರಿನಿಂದ ಕೂಡಿದ ಸಸ್ಯಗಳು, ಹೂ, ಹಣ್ಣುಗಳಿಂದ ನಳನಳಿಸುವ ಸಸ್ಯ ಸಂಪತ್ತು ಎಲ್ಲೆಡೆ ಕಣ್ಣಿಗೆ ರಾಚುತ್ತದೆ.
ಮೇ, ಜೂನ್ ತಿಂಗಳ ಸಮಯದಲ್ಲಿ ಬೇಸಿಗೆಯ ಬಿರು ಬಿಸಿಲಿಗೆ ಎಲೆಯನ್ನೆಲ್ಲಾ ಉದುರಿಸಿಕೊಂಡು ಕೆಂಪು ಹೂಗಳನ್ನು ಮರದ ತುಂಬಾ ಅರಳಿಸಿ ಕಂಗೊಳಿಸುತ್ತದೆ. ಎಲ್ಲಾ ಪ್ರದೇಶದಲ್ಲಿ ಕಂಡು ಬರುವ ಈ ಮರ ಸೌಂದರ್ಯದ ಪ್ರತೀಕವಾಗಿದೆ.ಗಿಡದ ತುಂಬೆಲ್ಲಾ ಹೂಗಳು ಅರಳಿರುವುದರಿಂದ ನಾನಾ ವಿಧದ ಬಣ್ಣ ಬಣ್ಣದ ಚಿಟ್ಟೆಗಳು ಹಾಗೂ ಕೀಟಗಳು ಮಕರಂದ ಹೀರಲು ಹಾರಾಡುತ್ತಿರುವ ನೋಟವು ಆಕರ್ಷಕವಾಗಿರುತ್ತದೆ.

Contact Your\'s Advertisement; 9902492681

ಆಸ್ಟ್ರೇಲಿಯಾ, ಕೆರಬಿಯನ್, ಚೈನಾ, ಥೈವಾನ್ ಸೇರಿದಂತೆ ವಿವಿಧ ದೇಶಗಳಲ್ಲಿ ಕಂಡು ಬರುತ್ತದೆ. ಭಾರತದಲ್ಲಿ ಮೇ-ಜೂನ್ ತಿಂಗಳಲ್ಲಿ ಅರಳುವ ಗುಲ್‌ಮೊಹರ್ ಕೆಂಪು ಬಣ್ಣದ ಪರಿಮಳ ಸೂಸುತ್ತಾ ನಗೆ ಚೆಲ್ಲಿ ನಿಲ್ಲುವ ಪರಿ ಚಿತ್ತಾಕರ್ಷಕ ಹಾಗೂ ವರ್ಣಾತೀತ.

ಎಲೆಗಳು ಉದುರಿ ಹೋಗಿ ಮರದ ತುಂಬೆಲ್ಲ ಮೈದುಂಬಿಕೊಂಡು ಕಂಗೊಳಿಸುವುದರಿಂದ ದಾರಿ ಹೋಕರ, ವಾಯು ವಿಹಾರಕ್ಕೆ ಬಂದ ನೋಡುಗರ ಕಣ್ಮನ್ ಸೆಳೆಯುತ್ತಿದೆ. ಎತ್ತ ನೋಡಿದರೂ ರಕ್ತದ ಬಣ್ಣ ರಾಚುತ್ತಾ ನಿಂತು ಪರಿಸರದ ಮೇಲೆ ಪ್ರಭುತ್ವ ಸಾಧಿಸಿ, ಮರಕ್ಕೂ ಪರಿಸರಕ್ಕೂ ಕಳೆ ತರುತ್ತಿದೆ.

ಸಂಕೇಶ್ವರ ಮರ, ಮೇ ಫ್ಲವರ್, ಕತ್ತಿಕಾಯಿ ಮರ ವಿವಿಧ ಹೆಸರುಗಳಿಂದ ಕರೆಯುವ ಇದರ ವೈಜ್ಞಾನಿಕ ಹೆಸರು ಡಿಲೋನಿಕ್ಸ ರೇಜಿಯಾ ಎಂದು. ಲೆಗುಮಿನೇಸಿ ಕುಟುಂಬಕ್ಕೆ ಸೇರಿರುವ ಈ ಮರ ಔಷಧಿಯ ಗುಣಗಳನ್ನು ಹೊಂದಿದೆ.
ಕೇವಲ ಎರಡು ತಿಂಗಳು ಕಾಲ ಮಾತ್ರ ಅರಳುವ ಹೂಗಳು ತಮ್ಮ ಚೆಲುವಿನಿಂದ ನೋಡುಗರ ಮನತಣಿಸಿ ಅನೇಕ ಚಿಟ್ಟೆ ಹಾಗೂ ದುಂಬಿಗಳ ಹೊಟ್ಟೆಯನ್ನೂ ತುಂಬಿಸಿ ತಾವು ಬಂದ ಕೆಲಸ ಮುಗಿಯಿತೆಂಬಂತೆ ಮಾಯವಾಗುತ್ತವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here