ನಗರಸಭೆಯ ಪೌರಕಾರ್ಮಿಕರ ಸೇವೆಗೆ ಬೆಲೆ ಕಟ್ಟಲಾಗದು: ಗುರಲಿಂಗಪ್ಪ

0
32

ಶಹಾಬಾದ: ನಗರವನ್ನು ಕೊರೊನಾ ಮುಕ್ತ ನಗರವನ್ನಾಗಿ ಮಾಡಲು ಪಣತೊಟ್ಟು ಅವಿರತವಾಗಿ ನಮ್ಮೊಂದಿಗೆ ಶ್ರಮಿಸಿದ ನಗರಸಭೆಯ ಪೌರಕಾರ್ಮಿಕರಿಗೆ ಹಾಗೂ ಸಿಬ್ಬಂದಿ ವರ್ಗದವರ ಕಾರ್ಯಕ್ಕೆ ಬೆಲೆ ಕಟ್ಟಲಾಗದು ಎಂದು ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಹೇಳಿದರು.

ಅವರು ಗುರುವಾರ ನಗರಸಭೆಯಲ್ಲಿ ಆಯೋಜಿಸಲಾದ ಪೌರಕಾರ್ಮಿಕರಿಗೆ ಮತ್ತು ನಗರಸಭೆಯ ಎಲ್ಲಾ ಸಿಬ್ಬಂದಿಗಳಿಗೆ ಫೇಸ್ ಕವರ್, ಸ್ಯಾನಿಟೈಜರ್, ಮಾಸ್ಕ್ ಹಾಗೂ ಗ್ಲೌಸ್‌ಗಳನ್ನು ವಿತರಿಸಿ ಮಾತನಾಡಿದರು.

Contact Your\'s Advertisement; 9902492681

ಮಾಸ್ಕ್ ಕೊಟ್ಟಿರುವುದು ಬಾಯಿಗಲ್ಲ. ಅದನ್ನು ಮೂಗಿನ ಮೇಲೆ ಹಾಕಿಕೊಳ್ಳುವದಕ್ಕೆ ಎಂಬುದು ಅರಿಯಬೇಕು.ಅಲ್ಲದೇ ನಿಮ್ಮ ಶ್ರಮದಿಂದಲೇ ಕೊರೊನಾ ಇಳಿಮುಖವಾಗಲು ಸಾಧ್ಯವಾಗಿದೆ.ನಿಮ್ಮ ಶ್ರಮಕ್ಕೆ ಬೆಲೆ ಕಟ್ಟಲಾಗದು.ಆದರೆ ನಿಮ್ಮ ಜತೆ ನಾವೆಂದಿಗೂ ಇದ್ದೆವೆ ಎಂದು ಭರವಸೆ ನೀಡುತ್ತೆವೆ.ನಿಮ್ಮ ಆರೋಗ್ಯದ ಜತೆ ನಗರದ ಆರೋಗ್ಯವನ್ನು ಕಾಪಾಡುವ ನಿವೇ ನಿಜವಾದ ದೇವರು.ನಿಮ್ಮ ಸೇವೆ ಸ್ಮರಣೀಯವಾದುದು ಎಂದು ಹೇಳಿದರು.

ಬಂಡಾಯ ಸಾಹಿತಿ ಡಾ. ಸಿದ್ಧಲಿಂಗಯ್ಯ ನಿಧನ

ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಮಾತನಾಡಿ, ನಗರದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ನಮ್ಮ ಇಲಾಖೆಯ ಕಾರ್ಮಿಕರು ಅವಿರತವಾಗಿ ಶ್ರಮಿಸಿದ್ದಾರೆ.ಪ್ರತಿ ವಾರ್ಡಗಳಲ್ಲಿ ಸ್ಯಾನಿಟೈಜರ್, ಕಸವನ್ನು ವಿಲೇವಾರಿ ಮಾಡುವುದು, ಅಂಗಡಿಗಳನ್ನು ಬಂದ್ ಮಾಡಿಸುವುದು.ಸೊಂಕಿತ ವ್ಯಕ್ತಿಯ ಮಾಹಿತಿಗಳನ್ನು ಕಲೆ ಹಾಕಿ ವರದಿ ಸಲ್ಲಿಸುವುದು ಸೇರಿದಂತೆ ಅನೇಕ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿರುವುದರಿಂದಲೇ ಕೊರೊನಾ ತಗ್ಗಿದೆ.ಅಲ್ಲದೇ ಕೆಲವು ಪೌರ ಕಾಂಇಕರಿಗೂ ಸೊಂಕು ತಗುಲಿ ಗುಣಮುಖರಾಗಿದ್ದಾರೆ.ಯಾವುದಕ್ಕೂ ನಿರ್ಲಕ್ಷ್ಯ ಭಾವನೆ ತೋರದೇ ನಗರಸಭೆಯಿಂದ ನೀಡುವ ಎಲ್ಲಾ ಪರಿಕರಗಳನ್ನು ಬಳಸಿಕೊಳ್ಳಬೇಕು.ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಹಾಗೂ ಫೇಸ್ ಕವರ್ ಹಾಕಿಕೊಳ್ಳುವುದರ ಮೂಲಕ ತಮ್ಮ ರಕ್ಷಣೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ನಗರಸಭೆಯ ಸದಸ್ಯರಾದ ರವಿ ಚವ್ಹಾಣ, ನಾಗರಾಜ ಕರಣಿಕ್,ಸಾಬೇರಾಬೇಗಂ, ಪಾರ್ವತಿ ಪವಾರ, ಕಚೇರಿ ವ್ಯವಸ್ಥಾಪಕ ಶಂಕರ ಇಂಜಗನೇರಿ, ಎಇಇ ಪುರುಷೋತ್ತಮ, ಎಇಇ ಮುಜಾಮಿಲ್ ಅಲಾಂ, ಕಂದಾಯ ಅಧಿಕಾರಿ ಸುನೀಲಕುಮಾರ ವೀರಶೆಟ್ಟಿ,ಎಇ ಶಾಂತರೆಡ್ಡಿ ದಂಡಗುಲಕರ, ಜೆಇ ಬಸವರಾಜ, ಮೌಲಾ ಅಲಿ, ಸಮುದಾಯ ಸಂಘಟಕ ಅಧಿಕಾರಿ ರಘುನಾಥ ನರಸಾಳೆ,ಶಬಾನಾಬೇಗಂ, ಆರೋಗ್ಯ ನಿರೀಕ್ಷಕರಾದ ಶಿವರಾಜಕುಮಾರ,ರಾಜೇಶ, ಶರಣು ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here