ಆಶಾ ಕಾರ್ಯಕರ್ತರಿಗೆ ‘ಸ್ಟೀಮರ್ ಮಶಿನ್’ ವಿತರಣೆ

0
122

ಕಲಬುರಗಿ: ವಿಶ್ವಜ್ಯೋತಿ ಪ್ರತಿಷ್ಠಾನದ ೧೩ ನೇ ವರ್ಷಾಚರಣೆ ನಿಮಿತ್ತ ಕಿಲ್ಲರ್ ಕೊರೊನಾದ ಸಂಕಷ್ಟದ ಸಂದರ್ಭದಲ್ಲೂ ತಮ್ಮ ಜೀವದ ಹಂಗು ತೊರೆದು ಪ್ರಾಮಾಣಿಕ ಸೇವೆ ಮಾಡುತ್ತಿರುವ ಆಶಾ ಕಾರ್ಯಕರ್ತರಿಗೆ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಸಾರಥ್ಯದ ಕ್ರಿಯಾಶೀಲ ಗೆಳೆಯರ ಬಳಗದ ವತಿಯಿಂದ ಸ್ಠೀಮರ್ ಮಶಿನ್‌ಗಳನ್ನು ಕೊಡಲಾಯಿತು. ನಂತರ ಯೋಧರಂತೆ ಕೊರೊನಾದ ವಿರುದ್ಧ ಹೋರಾಟ ಮಾಡುತ್ತಿರುವ ವೈದ್ಯರು, ಪೌರ ಕಾರ್ಮಿಕರು, ಆರೋಗ್ಯ ಸಹಾಯಕರು,  ಪೊಲೀಸ್, ಅಗ್ನಿಶಾಮಕ ದಳ, ಶಿಕ್ಷಕ ಸೇರಿದಂತೆ ವಿವಿಧ ವೃತ್ತಿಗಳ ಪ್ರತಿನಿಧಿಗಳನ್ನು ಹೂ ಮಳೆ ಸುರಿಸುವ ಮೂಲಕ ವಿಶೇಷವಾಗಿ ಅಭಿನಂದನೆ ಸಲ್ಲಿಸಿದ ಅಪರೂಪದ ಕಾರ್ಯಕ್ರಮವೊಂದು ಶುಕ್ರವಾರ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿತು.

ನೇತೃತ್ವ ವಹಿಸಿದ್ದ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಕಣ್ಣಿಗೆ ಕಾಣದ ಕೊರೊನಾ ಎಂಬ ವೈರಿ ಮನುಕುಲಕ್ಕೆ ಸವಾಲೊಡ್ಡಿದೆ. ಇದಕ್ಕಾಗಿ ಹೆದರುವ ಅಗತ್ಯವಿಲ್ಲ. ನಮ್ಮ ಜೀವನ ಶೈಲಿ ಬದಲಾಯಿಸಿಕೊಂಡು, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೆ ಸಾಕು ಈ ಕೊರೊನಾದಿಂದ ಪಾರಾಗಬಹುದು. ಆಶಾ ಕಾರ್ಯಕರ್ತರು, ಪೊಲೀಸ್, ಆರೋಗ್ಯ ಇಲಾಖೆ, ಪೌರ ಕಾರ್ಮಿಕರು, ಶಿಕ್ಷಕರು ಸೇರಿದಂತೆ ಅನೇಕ ಕೊರೊನಾ ಯೋಧರು ಕೊರೊನಾದ ಸಂದಿಗ್ಧ ಸಂದರ್ಭದಲ್ಲೂ ತಮ್ಮ ಕುಟುಂಬದ ಚಿಂತನೆ ಮಾಡದೇ ಇಡೀ ಸಮಾಜವೇ ನಮ್ಮ ಕುಟುಂಬ ಎಂದು ಭಾವಿಸಿ ಕಾರ್ಯನಿರ್ವಹಿಸುತ್ತಿರುವ ಈ ಕೊರೊನಾ ವಾರಿಯರ‍್ಸ್‌ಗಳ  ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

Contact Your\'s Advertisement; 9902492681

ತಪ್ಪದೇ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ : ಗುರಲಿಂಗಪ್ಪ

ಸಾಹಿತ್ಯ ಪ್ರೇರಕರಾದ ಶರಣರಾಜ್ ಛಪ್ಪರಬಂದಿ, ಕಲ್ಯಾಣಕುಮಾರ ಶೀಲವಂತ ಮಾತನಾಡಿ, ಕೊರೊನ ಸೋಂಕಿನಿಂದ ಮುಕ್ತರಾಗಬೇಕಾದರೆ ಸ್ವಯಂ ಜಾಗೃತಿಯೊಂದೇ ದಾರಿ. ಹಾಗಾಗಿ, ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಶುಚಿತ್ವಕ್ಕೆ ಒತ್ತು ನೀಡುವಂಥ ಆರೋಗ್ಯಕರ ಜೀವನಶೈಲಿಯನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದರು.

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಭವನಿಸಿಂಗ್ ಠಾಕೂರ, ಡಾ.ಬಾಬುರಾವ ಚವ್ಹಾಣ, ಪ್ರಮುಖರಾದ ಸಂದೇಶ ಕಮಕನೂರ, ರವೀಂದ್ರಕುಮಾರ ಭಂಟನಳ್ಳಿ, ಪ್ರಭುಲಿಂಗ ಮೂಲಗೆ, ಸುರೇಶ ಬಡಿಗೇರ, ಮಂಜುನಾಥ ಕಂಬಳಿಮಠ, ಜಗದೀಶ ಮರಪಳ್ಳಿ, ಅಶ್ವಿನಿ ಹಡಪದ, ಪೂರ್ಣಿಮಾ ಜಾನೆ, ವಿಶಾಲಾಕ್ಷಿ ದೇಸಾಯಿ, ಶಿವರಾಜ್ ಅಂಡಗಿ, ಎಸ್.ಎಂ.ಪಟ್ಟಣಕರ್, ಎಂ.ಎಸ್.ಪಾಟೀಲ ನರಿಬೋಳ, ಅರವಿಂದ ಗೋಟೂರ, ಪ್ರಸನ್ನ ವಾಂಜರಖೇಡೆ, ಡಾ.ಅನುಪಮಾ ಕೇಶ್ವಾರ, ರವಿಕುಮಾರ ಶಹಪುರಕರ್, ಶಿವಾನಂದ ಮಠಪತಿ, ಬಸವಪ್ರಬು, ಮುಡುಬಿ, ವಿದ್ಯಾಸಾಗರ ದೇಶಮುಖ, ಶರಣಬಸಪ್ಪ ನರೋಣಿ, ಪ್ರಭುದೇವ ಯಳವಂತಗಿ, ಪ್ರೊ.ಯಶ್ವಂತರಾಯ ಅಷ್ಟಗಿ, ರಾಜಕುಮಾರ ಕೋಟೆ, ಶ್ರೀಧರ ನಾಗನಹಳ್ಳಿ, ದಯಾನಂದ ಪಾಟೀಲ, ಸಂತೋಷ ಕುಡ್ಹಳ್ಳಿ, ಮನೋಹರ ಪೊದ್ದಾರ, ದೇವೇಂದ್ರಪ್ಪ ಗಣಮುಖಿ, ಪರಮೇಶ್ವರ ಶಟಕಾರ, ಬಿ.ಎಂ.ಪಾಟೀಲ ಕಲ್ಲೂರ, ಶ್ರೀಕಾಂತಗೌಡ ತಿಳಗೂಳ, ಮಾಲಾ ಕಣ್ಣಿ, ಮಾಲಾ ದಣ್ಣೂರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here