ಮಾನವೀಯ ಸೇವೆ ಇತರರಿಗೆ ಮಾದರಿಯಾಗಲಿ- ಮಹ್ಮದ್ ಅಜರ್

0
98

ಶಹಾಬಾದ: ಲಾಕ್ ಡೌನ್ ಸಮಯ,ಎಲ್ಲರೂ ರೋಗಕ್ಕೆ ಹೆದರಿ ಮನೆಯಲ್ಲಿ ಬೆಚ್ಚಗೆ ಕುಳಿತಿದ್ದರೆ,ಅಲ್ಲಿ ಯಾವುದೇ ಪ್ರಚಾರದ ಹಂಗಿಲ್ಲದೇ,ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜಕ್ಕೆ ನಾವೇನಾದರೂ ಮಾಡಬೇಕೆಂಬ ಸಹೃದಯತೆಯಿಂದ,ಅತ್ಯಂತ ಉತ್ಸಾಹದಿಂದ ಸುಮಾರು ಒಂದುವರೆ ತಿಂಗಳು ಕಾಲ ಶುಚಿ-ರುಚಿಯಾದ ಅಡುಗೆ ಮಾಡಿ,ತಾವೇ ಖುದ್ದಾಗಿ ಎಲ್ಲವನ್ನೂ ಸಿದ್ಧಪಡಿಸಿ ಅವಶ್ಯಕತೆ ಇರುವವರಿಗೆ ನಗರದ ಸಿಟಿಜೆನ್ ಕ್ಲಬ್ ಆಹಾರವನ್ನು ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

ಸಿಟಿಜೆನ್ ಕ್ಲಬ್ ಸದಸ್ಯರೆಲ್ಲರೂ ಸೇರಿ ನಾವೆಲ್ಲರೂ ಕೊರೊನಾದಂತ ಈ ಸಮಯದಲ್ಲಿ ಜನರಿಗೆ ತುತ್ತು ಅನ್ನಕ್ಕಾಗು ಪರದಾಡುತ್ತಿದ್ದಾರೆ.ಅವರಿಗೆ ಆಹಾರ ವ್ಯವಸ್ಥೆಯ ಜತೆಗೆ ಕುಡಿಯುವ ನೀರಿನ ಬಾಟಲ್ ಹಾಗೂ ಪೇಪರ್ ಪ್ಲೇಟ್ ನೀಡುವ ನಿರ್ಧಾರ ಕೈಗೊಂಡಿದ್ದರು.ಅಲ್ಲದೇ ಇದು ಕೇವಲ ಬಡವರಿಗೆ ಮಾತ್ರವಲ್ಲದೇ, ಸರಕಾರಿ ಕಚೇರಿ ಸಿಬ್ಬಂದಿಗಳು, ಖಾಸಗಿ ಸಿಬ್ಬಂದಿಗಳಿಗೂ ಹೋಟೆಲ್ ಬಂದ್ ಆಗಿರುವುದನ್ನು ಗಮನಿಸಿ ಅವರಿಗೂ ಆಹಾರ ವಿತರಿಸಿದ್ದು ಮಾತ್ರ ವಿಶೇಷವಾಗಿತ್ತು.ಲಾಕ್‌ಡೌನ ಎಲ್ಲಿಯವರೆಗೆ ಇರುತ್ತದೆ ಅಲ್ಲಿಯವರೆಗೆ ಆಹಾರ ವಿತರಿಸುತ್ತೆವೆ ಎಂದು ತಿಳಿಸಿದ್ದೆವು.ಅದರಂತೆ ನಡೆದುಕೊಂಡಿದ್ದೆವೆ ಎಂದು ಕ್ಲಬ್ ಸದಸ್ಯ ಮಹ್ಮದ್ ಅಜರ್ ತಿಳಿಸಿದ್ದಾರೆ.ಅಲ್ಲದೇ ನಮ್ಮ ಕ್ಲಬ್‌ನಲ್ಲಿ ಯಾರಿಗೂ ರಾಜಕೀಯ ಮಹತ್ವಾಕಾಂಕ್ಷೆಯಾಗಲೀ,ಇದನ್ನೇ ಬಂಡವಾಳವಾಗಿಸಿಕೊಂಡು ಸಭ್ಯರಂತೆ,ದೊಡ್ಡ ಸಮಾಜಸೇವಕರಂತೆ ಫೋಸ್ ಕೊಡುವ ಯಾವುದೇ ಉದ್ಧೇಶವಂತೂ ನಮಗಿಲ್ಲ.ಆದರೆ ನಾವು ಮಾಡುವ ಸೇವೆ ಅರ್ಹರಿಗೆ ಸಲ್ಲಬೇಕು.

Contact Your\'s Advertisement; 9902492681

ನಮ್ಮ ಹಾಗೇ ಸೇವಾ ಮನೋಭಾವ ಇತರರಿಗೆ ನಿಜಕ್ಕೂ ಪ್ರೇರಣೆಯಾಗಲಿ.ಇದರಿಂದ ಇನ್ನೂ ಹೆಚ್ಚಿನ ಜನರಿಗೆ ಸಹಾಯ ಮುಟ್ಟಲಿ ಎಂಬುದೇ ನಮ್ಮ ಆಶಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಯಾಸೀನ್ ಹುಸೇನ,ಮಹ್ಮದ್ ಇಶಾಕ್, ನೀರಜ ಶರ್ಮಾ,ಸುಭಾನ ಖಾನ, ಜಮೀರ ಬೇಗ, ಮಹ್ಮದ್ ಇರ್ಫಾನ್ ಇತರರು ಇದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here