ಡಾ. ಸಿದ್ದಲಿಂಗಯ್ಯ ವ್ಯಕ್ತಿಯಲ್ಲ ಮಹಾನ್ ಶಕ್ತಿಯಾಗಿದ್ದರು: ನೀಲಕಂಠ ಬಡಿಗೇರ್

0
38

ಶಹಾಪುರ : ಸಮಾಜದಲ್ಲಿನ ಹಸಿವು, ಬಡತನ, ಅಸ್ಪೃಶ್ಯತೆ, ಅಸಮಾನತೆ,ಮೂಢನಂಬಿಕೆ ಹೋಗಲಾಡಿಸಲು ಸಾಕಷ್ಟು ಶ್ರಮವಹಿಸಿ ಜೊತೆಗೆ ಕ್ರಾಂತಿಗೀತೆಗಳ ರಚಿಸುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ಡಾ. ಸಿದ್ಧಲಿಂಗಯ್ಯನವರು ಒಬ್ಬ ವ್ಯಕ್ತಿ ಇಲ್ಲದೇ ಮಹಾನ್ ಶಕ್ತಿಯಾಗಿದ್ದರು ಎಂದು ಪ್ರಗತಿಪರ ಚಿಂತಕ ನೀಲಕಂಠ ಬಡಿಗೇರ ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಇತ್ತೀಚೆಗೆ ಅಗಲಿದ ಬಂಡಾಯ ಹಾಗೂ ದಲಿತ ಸಾಹಿತಿ ಡಾ. ಸಿದ್ದಲಿಂಗಯ್ಯ ಹಾಗೂ ಕಲಬುರಗಿಯ ಹಿರಿಯ ಸಾಹಿತಿಗಳಾದ ಪ್ರೊ.ವಸಂತ ಕುಷ್ಟಗಿಯವರ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು

Contact Your\'s Advertisement; 9902492681

ಡಾ.ಸಿದ್ದಲಿಂಗಯ್ಯನವರ ಸಮಗ್ರ ಸಾಹಿತ್ಯ ಬಡವರ,ದೀನ ದಲಿತರ,ಶೋಷಿತರ ಹಿಂದುಳಿದ ಜನರ, ತುಳಿತಕ್ಕೊಳಗಾದವರ ಪರವಾಗಿ ಎಳೆಎಳೆಯಾಗಿ ಇಲ್ಲಿ ಅಕ್ಷರ ರೂಪದಲ್ಲಿ ತೆರೆದಿಟ್ಟಿದ್ದಾರೆ ಅಲ್ಲದೆ ಅವರ ಬಹುತೇಕ ಕೃತಿಗಳು ವೈಚಾರಿಕತೆಯಿಂದ ಕೂಡಿದ್ದು ಸಮಾಜದ ಏಳಿಗೆಗೆ ಅವರು ಮನಸ್ಸು ಸದಾ ತುಡಿಯುತ್ತಿರುವುದನ್ನು ನಾವಿಲ್ಲಿ ಕಾಣಬಹುದು ಎಂದು ಉಪನ್ಯಾಸಕರಾದ ಡಾ. ರವೀಂದ್ರನಾಥ್ ಹೊಸಮನಿ ಹೇಳಿದರು.

ಹಿರಿಯ ಸಾಹಿತಿ ಶಿವಣ್ಣ ಇಜೇರಿ ಮಾತನಾಡಿ ಪ್ರೊ. ವಸಂತ ಕುಷ್ಟಗಿಯವರು ಸಾಹಿತಿಗಳಾಗಿ, ಸಂಘಟಕರಾಗಿ,ವೃತ್ತಿಯಿಂದ ಪ್ರಾಧ್ಯಾಪಕರಾಗಿ ಒಳ್ಳೆಯ ಸುಸಂಸ್ಕೃತ ಮನೆತನದಿಂದ ಬಂದಂಥವರು ಸರಳ ಹಾಗೂ ಸಜ್ಜನಿಕೆಗೆ ಹೆಸರುವಾಸಿಯಾಗಿದ್ದರು ಎಂದು ಅವರನ್ನು ಗುಣಗಾನ ಮಾಡಿದರು

ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಶ್ರೀ ಸಿದ್ಧರಾಮ ಹೊನಕಲ್,ಗುರುಬಸಯ್ಯ ಗದ್ದುಗೆ,ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಲಿಂಗಣ್ಣ ಪಡಶೆಟ್ಟಿ,ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಲಿಂಗಣ್ಣ ಆನೇಗುಂದಿ, ಬಸವರಾಜ್ ಜಿ ಹಿರೇಮಠ,ನಿವೃತ್ತ ಉಪತಹಸೀಲ್ದಾರ್ ಸಾಯಿಬಣ್ಣ ಮಡಿವಾಳಕರ್,ಶರಣಪ್ಪ ಮುಂಡಾಸ್, ದೇವಿಂದ್ರಪ್ಪ ಕನ್ಯಾಕೋಳೂರ,ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಪಂಚಾಕ್ಷರಿ ಹಿರೇಮಠ,ಬಸವರಾಜ ಸಿನ್ನೂರ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here