ಹೈ. ಕ. ಪುಸ್ತಕ ಪ್ರಕಾಶಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

0
45

ಕಲಬುರಗಿ, ಜೂ. ೧೫ – ಹೈದರಾಬಾದ ಕರ್ನಾಟಕ ಪ್ರದೇಶದ ಲೇಖಕರ, ಸಾಹಿತಿಗಳ, ಯುವ ಬರಹಗಾರರ ಪುಸ್ತಕಗಳನ್ನು ಪ್ರಕಟಿಸಿ ಅವುಗಳಿಗೆ ಮಾರುಕಟ್ಟೆಯನ್ನು ಒದಗಿಸಿ, ಓದುಗರ ಸಂಖ್ಯೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಹೈದರಾಬಾದ ಕರ್ನಾಟಕದ ಸಮಾನ ಮನಸ್ಕರು ಸೇರಿ ೨೦೧೮-೧೯ರಲ್ಲಿ ಹೈದರಾಬಾದ ಕರ್ನಾಟಕ ಪುಸ್ತಕ ಪ್ರಕಾಶಕರ ಸಂಘ ಅಸ್ತಿತ್ವಕ್ಕೆ ಬಂದಿದೆ.

ಗೂಗಲ್ ಮೀಟ್‌ನಲ್ಲಿ ಸಭೆ ಸೇರಿ ೨೦೨೧-೨೦೨೪ ಮೂರು ವರ್ಷದ ಅವಧಿಗೆ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮಹಿಪಾಲರೆಡ್ಡಿ ಮುನ್ನೂರು ಕಲಬುರಗಿ, ಉಪಾಧ್ಯಕ್ಷರಾಗಿ ಸಿ. ಮಂಜುನಾಥ ಬಳ್ಳಾರಿ, ಪ್ರಧಾನ ಕಾರ್ಯದರ್ಶಿಯಾಗಿ ವೈ. ಬಿ. ಜೂಡಿ ಕೊಪ್ಪಳ, ಸಹ ಕಾರ್ಯದರ್ಶಿ ಬಸವರಾಜ ಸಿನ್ನೂರ ಯಾದಗಿರಿ, ಸಂಘಟನಾ ಕಾರ್ಯದರ್ಶಿಯಾಗಿ ಮಂಜುನಾಥ ಜಿ. ಗೊಂಡಬಾಳ, ಸಹ ಸಂಘಟನಾ ಕಾರ್ಯದರ್ಶಿಯಾಗಿ ಶಿವಕುಮಾರ ಪಿ. ಹರವಿ (ದೇವದುರ್ಗ) ರಾಯಚೂರು, ಖಜಾಂಚಿಯಾಗಿ ಸುಶೀಲಾ ಎಂ. ಎಸ್. ಕೊಪ್ಪಳ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಉಮಾಶಂಕರ ಬ. ಹಿರೇಮಠ, ಎಂ. ಪಿ. ಮುದಾಳೆ ಬೀದರ, ಗಾದೆಪ್ಪ ಕಮಲಾಪುರ ಹಂಪಿ ಹಾಗೂ ಮಹೇಶಬಾಬು ಸುರ್ವೆ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ.

Contact Your\'s Advertisement; 9902492681

ಹೈದರಾಬಾದ್ ಕರ್ನಾಟಕ ಪ್ರಕಾಶಕರ ಸಂಘದಿಂದ ೨೦೨೧ರ ಅಗಸ್ಟ್ ತಿಂಗಳ ಕೊನೆಯಲ್ಲಿ ಕೊಪ್ಪಳದಲ್ಲಿ ಪುಸ್ತಕಗಳ ರಿಯಾಯಿತಿ ಮೇಳ ನಡೆಸಲು ಚಿಂತನೆ ನಡೆಸಲಾಗಿದೆ. ಹೈದರಾಬಾದ್ ಕರ್ನಾಟಕದ ಏಳು ಜಿಲ್ಲೆಗಳ ಪ್ರಕಾಶಕರ ಸಮಾವೇಶ, ಪುಸ್ತಕ ಮಾರಾಟದಲ್ಲಿ ಸಹಕಾರ, ಪ್ರಕಾಶಕರಿಗೆ ಪ್ರಶಸ್ತಿ ..ಹೀಗೆ ವಿವಿಧ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಹೈದರಾಬಾದ್ ಕರ್ನಾಟಕದ ಏಳು ಜಿಲ್ಲೆಯ ಪ್ರಕಾಶಕರು ಹೆಸರು ನೋಂದಾಯಿಸಲು ಮೊ: ೯೮೪೫೩೩೮೧೬೦ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here