ಆರೋಗ್ಯ ಸಮಸ್ಯೆಯಿಂದ ಬಂದ ಜನರನ್ನು ಸರಿಯಾಗಿ ಉಪಚರಿಸಿ: ಅಂಜಲಿ ಕಂಬಾನೂರ

0
76

ಶಹಾಬಾದ: ಹಸಿದು ಬಂದ ಜನರಿಗೆ ಅನ್ನ ನೀಡುವ ಹಾಗೇ, ಆರೋಗ್ಯದ ಸಮಸ್ಯೆಯಿಂದ ಬಳಲಿ ಬಂದ ವ್ಯಕ್ತಿಗಳನ್ನು ಉಪಚರಿಸುವುದು ವೈದ್ಯರ ಕರ್ತವ್ಯ ಎಂದು ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಹೇಳಿದರು.

ಅವರು ಶನಿವಾರ ನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ, ವೈದ್ಯರ ಹಾಗೂ ಸಿಬ್ಬಂದಿಗಳ ಜತೆ ಸಭೆ ನಡೆಸಿ ಮಾತನಾಡಿದರು.

Contact Your\'s Advertisement; 9902492681

ನಗರದ ಜನರಿಗೆ ಸಮುದಾಯ ಆರೋಗ್ಯ ಬಗ್ಗೆ ವಿಶ್ವಾಸವಿದೆ.ಅಲ್ಲಿಗೆ ಹೋದರೆ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡುತ್ತಾರೆ ಎಂದು.ಆದರೆ ಇತ್ತಿಚ್ಚಿನ ದಿನಗಳಲ್ಲಿ ದೂರುಗಳು ಬರುತ್ತಿವೆ.ದೂರು ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ತಮ್ಮ ಮೇಲಿದೆ.ಅಲ್ಲದೇ ಕೋವಿಡ್ ಲಸಿಕೆ ಕಾರ್ಯಕ್ರಮ ಸರಿಯಾಗಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಉತ್ತಮ ಅಭಿಪ್ರಾಯ ಬಂದಿದೆ.ಅದನ್ನು ಇನ್ನೂ ಸರಿಯಾಗಿ ನಿರ್ವಹಿಸಿ.ಅಲ್ಲದೇ ಆಸ್ಪತ್ರೆಯಲ್ಲಿ ಸ್ವಚ್ಚತೆ ಕಾಪಾಡಿ. ಸಾರ್ವಜನಿಕರು ಬಂದಾಗ ಪ್ರೀತಿಯಿಂದ ಮಾತನಾಡಿಸಿ. ತಮಗೆ ನಗರಸಭೆಯಿಂದ ಬೇಕಾದ ಸೌಲಭ್ಯಗಳನ್ನು ಪಟ್ಟಿ ಮಾಡಿ ಕೊಡಿ.ಅದನ್ನು ಪೂರೈಸುವ ನಿಟ್ಟಿನಲ್ಲಿ ನಾನು ಕ್ರಮಕೈಗೊಳ್ಳುತ್ತೆನೆ.ಆದರೆ ಸರಿಯಾದ ಸಮಯಕ್ಕೆ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿರಬೇಕು.ಇಲ್ಲದಿದ್ದರೇ ಅವರ ವಿರುದ್ಧ ಕ್ರಮಕೈಗೊಳ್ಳಲು ನಿರ್ದೇಶಿಸಲಾಗುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಅವರನ್ನು ಸನ್ಮಾನಿಸಲಾಯಿತು. ನಗರಸಭೆಯ ಉಪಾಧ್ಯಕ್ಷೆ ಸಲೀಮಾ ಬೇಗಂ, ಇಮ್ರಾನ್, ಅನ್ವರ ಪಾಷಾ, ಸದಸ್ಯೆ ಸಾಬೇರಾ ಬೇಗಂ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಬ್ದುಲ್ ರಹೀಮ್,ಡಾ. ಸಂಧ್ಯಾ ಕಾನೇಕಾರ, ಡಾ.ಖತೀಜಾ ಅಯರೂಮ್, ಡಾ.ರಶೀದ್, ಆರೋಗ್ಯ ನಿರೀಕ್ಷಣಾ ಅಧಿಕಾರಿ ಯುಸುಫ್ ನಾಕೇದಾರ, ಶಿವಕುಮಾರ, ರಾಹುತ್, ಸಂಜಯ್ ರಾಠೋಡ, ಮೋಹನ ಗಾಯಕವಾಡ,ಹಣಮಂತ ಲಾಳಸಂಗಿ, ,ಅಮರೇಶ ಇಟಗಿಕರ್ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here