ತೈಲ ಬೆಲೆ ಏರಿಕೆ ಖಂಡಿಸಿ ಜೆಡಿಎಸ್ ಪ್ರತಿಭಟನೆ

0
40

ಸುರಪುರ: ದೇಶದಲ್ಲಿನ ತೈಲ ಬೆಲೆ ಏರಿಕೆಯನ್ನು ಖಂಡಿಸಿ ನಗರದ ತಹಸೀಲ್ ಕಚೇರಿ ಮುಂದೆ ಜಾತ್ಯಾತೀತ ಜನತಾ ದಳದ ಮುಖಂಡರು ಪ್ರತಿಭಟನೆ ನಡೆಸಿದರು.ಕೇಂದ್ರ ಮತ್ತು ರಾಜ್ಯ ಸರಕಾರದ ವಿರುಧ್ಧ ಘೋಷಣೆಗಳನ್ನು ಕೂಗಿದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ದೇಶದಲ್ಲಿ ತೈಲ ಬೆಲೆಯ ಜೊತೆಗೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ.ಬರೀ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಪಕ್ಷ ದೇಶದ ಜನರ ಜೀವದ ಜೊತೆಗೆ ಚಲ್ಲಾಟವಾಡುತ್ತಿವೆ.ಕೇಂದ್ರ ಸರಕಾರ ನೀಡಿರುವ ಒಂದೂ ಭರವಸೆ ಈಡೇರಿಲ್ಲ.ಜನರಿಗೆ ನೌಕರಿ ಕೊಡುವೆ ಎಂದರು ನೌಕರಿ ಕೊಡಿಸಲಿಲ್ಲ.ಅನೇಕ ಸರಕಾರಿ ಸ್ವಾಮ್ಯದ ದೊಡ್ಡ ದೊಡ್ಡ ಉದ್ಯಮಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ದಾರೆ.ಇನ್ನು ಅಗತ್ಯ ವಸ್ತುಗಳನ್ನು ಜನರು ಖರಿದಿಸಲು ಸಾಧ್ಯವಾಗುತ್ತಿಲ್ಲ.ರೈತರ ಕೃಷಿಯನ್ನು ಮಾಡದಂತಹ ಸ್ಥಿತಿಗೆ ಬಂದಿದ್ದಾರೆ.ರಸಗೊಬ್ಬರ ಬೆಲೆ ಏರಿಕೆಯಿಂದ ರೈತರು ತತ್ತರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ ಸಿರಸ್ತೆದಾರ ಕೊಂಡಲ ನಾಯಕ ಅವರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ ವಜಾಹತ್ ಹುಸೇನ್ ಹೆಚ್.ಡಿ.ಕುಮಾರಸ್ವಾಮಿ ಸೇನೆ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮುಖಂಡರಾದ ಸಂಗಣ್ಣ ಬಾಕ್ಲಿ ತಿಪ್ಪಣ್ಣ ಪೊಲೀಸ್ ಪಾಟೀಲ್ ಶೌಕತ್ ಅಲಿ ಶಾಂತು ತಳವಾರಗೇರಿ ಅಲ್ತಾಫ್ ಸಗರಿ ಲಕ್ಷ್ಮಣ ಕವಡಿಮಟ್ಟಿ ಮಹ್ಮದ ಗೌಸ್ ಎಂ.ಡಿ ಅಯೂಬ್ ಸೇರಿಷದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here