ಹಣಮಂತ ಕೂಡಲಗಿ ಕೊಲೆ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಯಲಿ: ಶಾಸಕ ಡಾ. ಅಜಯ್ ಸಿಂಗ್ ಆಗ್ರಹ

0
22

ಕಲಬುರಗಿ: ಜೇವರ್ಗಿ ತಾಲೂಕಿನ ಬಳ್ಳೂಂಡಗಿ ಹತ್ತಿರ ಜೂನ್ ತಿಂಗಳ 8 ರಂದು ನಡೆದಿರುವ ಹಣಮಂತ ಹೊಸ್ಮನಿ ಕೂಡಲಗಿಯವರ ಕೊಲೆ ಪ್ರಕರಣವನ್ನು ಖಂಡಿಸಿರುವ ವಿಧಾನಸಭೆ  ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್ ಸಿಂಗ್ ಸಾಮರಸ್ಯದ ಜೇವರ್ಗಿ ಮತಕ್ಷೇತ್ರದಲ್ಲಿ ಕೊಲೆ, ಸುಲಿಗೆಯತಂಹ ಅಪರಾಧ ಸಂಸ್ಕøತಿಗೆ ಅವಕಾಶವೇ ಇಲ್ಲ, ಆದಾಗ್ಯೂ ಇಂತಹ ನಡೆಯಬಾರದ ಘಟನೆ ನಡೆದಿದೆ. ಈ ಘಟನೆಯ ತನಿಖೆ ಕೈಗೆತ್ತಿಕೊಂಡಿರುವ ಕಲಬುರಗಿ ಪೆÇಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸುವ ಮೂಲಕ ಹಂತಕರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಡಾ. ಅಜಯ್ ಸಿಂಗ್ ಅವರು, ಶರಣರು, ಶಿವಯೋಗಿಗಳು, ಸಂತರು, ದಾಸೋಹಿಗಳು ಬಾಳಿ ಬದುಕಿರುವ ನಾಡು, ದಾಸೋಹ ಸಂಸ್ಕøತಿಯ ಬೀಡು ಜೇವರ್ಗಿ. ಯಾವ ಕಾಲದಲ್ಲೂ ಇಲ್ಲಿನ ಜನತೆ ರಾಗ- ದ್ವೇಷಗಳಿಗೆ, ಕೊಲೆಯಂತಹ ಹೀನ ಕೆಲಸಗಳಿಗೆ  ಅವಕಾಶವನ್ನೇ ನೀಡಿಲ್ಲ. ಆದಾಗ್ಯೂ ನಡೆಯಬಾರದ ಘಟನೆ ನಡೆದು ಹೋಗಿದೆ. ಕೊಲೆ ಸಂಸ್ಕøತಿ ಯಾರೂ ಕೂಡ ಬೆಂಬಲಿಸಬಾರದು.

Contact Your\'s Advertisement; 9902492681

ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸುವ ನಿಟ್ಟಿನಲ್ಲಿ ಪೆÇಲೀಸರು ತಮ್ಮ ತನಿಖೆಯ ಜಾಣ್ಮೆ ಪ್ರದರ್ಶಿಸಲಿ. ಹಂತಕರನ್ನು ಬಯಲಿಗೆಳೆದು ಇಂತಹ ಹೀನ ಕೃತ್ಯಗಳು ಮರುಕಳಿಸದಂತೆ ಹಾಗೂ ಜೇವರ್ಗಿಯಲ್ಲಿ ಎಂದಿನಂತೆ ಶಾಂತಿ- ಸಾಮರಸ್ಯ ಕಾಯಂ ನೆಲೆಸುವಂತೆ ಕ್ರಮ ಕೈಗೊಳ್ಳಲಿ ಎಂದು ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here