ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ

0
21

ಸುರಪುರ: ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಲಾದ ಕಂಪ್ಯೂಟರ್ ಲ್ಯಾಬ್‌ನ್ನು ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅಧ್ಯಕ್ಷ ಹಾಗು ಶಾಸಕರಾದ ನರಸಿಂಹ ನಾಯಕ (ರಾಜುಗೌಡ) ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಜುಗೌಡ,ನಾವೆಲ್ಲ ಇದುವರೆಗೆ ಬರೀ ೬,೭ನೇ ಜನರೇಷನ್ ಕಂಪ್ಯೂಟರ್ ನೋಡಿದ್ದೇವೆ,ಈಗ ೧೦ನೇ ಜನರೇಷನ್ ಕಂಪ್ಯೂಟರ್ ಖರಿದಿಸುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮವಾದ ಕಲಿಕಾ ಅವಕಾಶ ಒದಗಿಸಲಾಗಿದೆ.

Contact Your\'s Advertisement; 9902492681

ವಿದ್ಯಾರ್ಥಿಗಳಿಗಾಗಿ ಯಾವುದೇ ರೀತಿಯ ಸಹಾಯವನ್ನು ಮಾಡಲು ಸಿದ್ಧನಿದ್ದೇನೆ,ಅದರಂತೆ ವಿದ್ಯಾರ್ಥಿಗಳು ಕೂಡ ಉತ್ತಮವಾಗಿ ಓದಿ ಬದುಕಿನಲ್ಲಿ ಮೇಲೆ ಬರುವಂತೆ ತಿಳಿಸಿದರು.ಅಲ್ಲದೆ ಎಲ್ಲರು ಕಡ್ಡಾಯವಾಗಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಿ ನೀವು ಹೇಳಿದ ದಿನದಂದು ಲಸಿಕೆ ಹಾಕಲು ಆರೋಗ್ಯ ಇಲಾಖೆ ಸಿಬ್ಬಂದಿಗಳು ಕಾಲೇಜಿಗೆ ಬರುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಶ್ರೀಕಾಂತ ಮಾತನಾಡಿ,ಶಾಸಕರ ಮುತುವರ್ಜಿಯಿಂದ ಕಲ್ಯಾಣ ಕರ್ನಾಟಕ ಅಭೀವೃಧ್ಧಿ ಮಂಡಳಿಯಿಂದ ೫೦ ಲಕ್ಷ ರೂಪಾಯಿಗಳ ಅನುದಾನ ದೊರೆತಿದ್ದು ಇದರಲ್ಲಿ ೬೭ ಕಂಪ್ಯೂಟರ್‌ಗಳನ್ನು ಖರಿದಿಸಿ ಸುಸಜ್ಜಿತವಾದ ಲ್ಯಾಬ್ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ) ಪಿಐ ಎಸ್.ಎಮ್.ಪಾಟೀಲ್ ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ್ ಮುಖಂಡರಾದ ವೇಣುಗೋಪಾಲ ಜೇವರ್ಗಿ ನಗರಸಭೆ ಸದಸ್ಯ ನರಸಿಂಹಕಾಂತ ಪಂಚಮಗಿರಿ ಪಿಬ್ಲ್ಯೂಡಿ ಎಇಇ ಎಸ್.ಜಿ.ಪಾಟೀಲ್ ಕಾಲೇಜಿನ ರಾಮನಗೌಡ ಪಾಟೀಲ್ ಶಂಕರ ನಾಯಕ ಜಯರಾಮ ನಾಯಕ ಸೇರಿದಂತೆ ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗು ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here