ಎಐಡಿವೈಒ ೫೬ನೇ ಸಂಸ್ಥಾಪನ ದಿನ ಆಚರಣೆ

0
33

ಶಹಾಬಾದ: ನಿರುದ್ಯೋಗ ಸಮಸ್ಯೆ ದೇಶದಲ್ಲಿ ತಾಂಡವಾಡುತ್ತಿದ್ದು, ಅದರ ವಿರುದ್ಧ ಹೋರಾಡಲು ಯುವಜನರು ಸಂಘಟಿತರಾಗಬೇಕು ಎಂದು ಎಸ್‌ಯುಸಿಐ ಸ್ಥಳೀಯ ಕಾರ್ಯದರ್ಶಿ ಗಣಪತಿರಾವ ಮಾನೆ ಹೇಳಿದರು.

ಅವರು ರವಿವಾರ ನಗರದ ಎಐಡಿವೈಒ ಸ್ಥಳಿಯ ಸಮಿತಿ ವತಿಯಿಂದ ಆಯೋಜಿಸಲಾದ ಎಐಡಿವೈಒನ ೫೬ನೇ ಸಂಸ್ಥಾಪನ ದಿನ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೇರೆವೆರಿಸಿ ಮಾತನಾಡಿದರು.

Contact Your\'s Advertisement; 9902492681

ಕೋವಿಡ್ ೨ನೇ ಅಲೆ ಸಂದರ್ಭದಲ್ಲಿ ಜನಸಾಮಾನ್ಯರು ಚಿಕಿತ್ಸೆ ಸಿಗದೆ ಹಾಗೂ ಆಕ್ಸಿಜನ ಸಿಗದೆ ಜನರು ಸಾವನ್ನಾಪ್ಪಿರುವದು ಬಹಳ ನೋವಿನ ಸಂಗತಿಯಾಗಿದೆ.ನಮ್ಮನ್ನಾಳುವ ಸರಕಾರಗಳು ಆಗತ್ಯ ವಸ್ತುಗಳಾದ ಅಡುಗೆ ಎಣ್ಣೆ ,ಬೆಳೆ ಕಾಳುಗಳು, ಪೇಟ್ರೋಲ್ ,ಡಿಸೇಲ್ ಇತರ ವಸ್ತುಗಳ ಬೆಲೆ ಏರಿಕೆಮಾಡಿ ಸಾಮಾನ್ಯ ಜನರ ಜೀವನ ಕಷ್ಟಕ್ಕೆ ನೂಕಿವೆ. ಇಂತಹ ಅನೇಕ ಸಮಸ್ಯೆಗಳ ವಿರುದ್ಧ ಯುವಜನರು ಸಂಘಟಿತರಾಗಿ ಹೊರಾಟ ಕಟ್ಟಬೇಕು ಎಂದರು.

ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ.ಎಸ್.ಎಚ್ ಮಾತನಾಡಿ, ಕೇಂದ್ರ ಸರ್ಕಾರವು ರೈತ ವಿರೋಧಿ ಕಾನೂನುಗಳು ಜಾರಿಗೊಳಿಸಿ ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ.ಅಲ್ಲದೇ ಕೋವಿಡ್ ೨ನೇ ಅಲೆಯಲ್ಲಿ ಜನರ ಆರೋಗ್ಯ ಕಾಪಾಡುವಲ್ಲಿ ನಿರ್ಲಣ್ಯ ಧೋರಣೆ ತೋರಿರುವುದರಿಂದ ಸುಮಾರು ನಾಲ್ಕು ಲಕ್ಷ ಜನರ ಸಾವಿಗೆ ಕೇಂದ್ರದ ಬಿಜೆಪಿ ಸರ್ಕಾರದ ನೀತಿಗಳೇ ಕಾರಣವಾಗಿದೆ.ಆದ್ದರಿಂದ ಜನರ ಆರೋಗ್ಯ ಕಾಪಾಡುವಲ್ಲಿ ಸರ್ಕಾರವು ಸಂಪೂರ್ಣವಾಗಿ ವಿಪಲವಾಗಿದೆ.ಈ ಸಮಸ್ಯೆಗಳ ವಿರುದ್ಧ ಯುವಜನರು ಹೊರಾಟಕ್ಕೆ ಸಜ್ಜಾಗಬೇಕೆಂದರು. ಎಐಡಿವಾಯ್‌ಒ ಅಧ್ಯಕ್ಷ ಸಿದ್ಧು ಚೌಧರಿ ಅಧ್ಯಕ್ಷತೆ ವಹಿಸಿದ್ದರು.

ವಿಶ್ವನಾಥ ಸಿಂಘೆ, ರಾಘು ಪವಾರ,ಶ್ರೀನಿವಾಸ ,ತೀಮ್ಮಯ್ಯ ಮಾನೆ ,ಪ್ರವಿಣ್ ಬಣಮಿಕರ್ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here