ಸುರಪುರ:ವಿವಿಧ ಕಾಲೇಜುಗಳಲ್ಲಿ ಕೋವಿಡ್ ಲಸಿಕೆ ಅಭಿಯಾನ

0
14

ಸುರಪುರ: ನಗರದ ಶ್ರೀಪ್ರಭು ಮಹಾವಿದ್ಯಾಲಯ ಹಾಗು ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ೧೮ ವರ್ಷ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗು ಕಾಲೇಜಿನ ಉಪನ್ಯಾಸಕ ಮಂಡಳಿ ಮತ್ತು ಸಿಬ್ಬಂದಿಗಳಿಗೆ ಯಾದಗಿರಿ ಜಿಲ್ಲಾಡಳಿತ ಮತ್ತು ತಾಲೂಕು ಆರೋಗ್ಯ ಇಲಾಖೆಯ ವತಿಯಿಂದ ಉಚಿತ ಕೊರೊನಾ ಲಸಿಕೆ ವಿತರಣಾ ಅಭಿಯಾನ ನಡೆಸಲಾಯಿತು.

ಶ್ರೀಪ್ರಭು ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ಭಾಗವಹಿಸಿ ಮಾತನಾಡಿ,ಕೊರೊನಾ ಸೊಂಕಿನಿಂದ ಮುಕ್ತರಾಗಿರಲು ಪ್ರತಿಯೊಬ್ಬರು ಕೊರೊನಾ ಲಸಿಕೆ ಪಡೆಯುವುದು ತುಂಬಾ ಮುಖ್ಯವಾಗಿದೆ.ಆದ್ದರಿಂದ ಸರಕಾರ ಈಗ ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಕೊರೊನಾ ಲಸಿಕೆ ನೀಡುವ ಅಭಿಯಾನ ನಡೆಸುತ್ತಿದ್ದು,ವಿದ್ಯಾರ್ಥಿಗಳು ಲಸಿಕೆ ಪಡೆಯುವ ಮೂಲಕ ಅಭಿಯಾನ ಯಶಸ್ವಿಗೊಳಿಸಿ,ಲಸಿಕೆಯಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲ,ಲಸಿಕೆ ಪಡೆಯುವುದರಿಂದ ಕೊರೊನಾ ಸೊಂಕು ತಗುಲಿದರು ಅದರಿಂದ ಯಾವುದೇ ತೊಂದರೆ ಆಗುವುದಿಲ್ಲ.ಆದ್ದರಿಂದ ಎಲ್ಲರು ಲಸಿಕೆ ಪಡೆಯಲು ಮುಂದೆ ಬರುವಂತೆ ಸಲಹೆ ನೀಡಿದರು.

Contact Your\'s Advertisement; 9902492681

ನಂತರ ಕಾಲೇಜಿನ ಪ್ರಾಂಶುಪಾಲ ಎಸ್.ಹೆಚ್.ಹೊಸ್ಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಸರಕಾರ ವಿದ್ಯಾರ್ಥಿಗಳಿಗಾಗಿ ಉತ್ತಮವಾದ ಅವಕಾಶ ನೀಡಿದೆ,ಆದ್ದರಿಂದ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಲಸಿಕೆ ಪಡೆದುಕೊಳ್ಳುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲ ವೇಣುಗೋಪಾಲ ಜೇವರ್ಗಿ ಸೇರಿದಂತೆ ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗು ಸಿಬ್ಬಂದಿಗಳು ಭಾಗವಹಿಸಿದ್ದರು. ಉಪನ್ಯಾಸಕ ಸಾಯಿಬಣ್ಣ ಮುಡಬೂಳ ಪ್ರಾಸ್ತಾವಿಕವಾಗಿ ಮಾತನಾಡಿದರು.ನಂತರ ೧೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಲಸಿಕೆಯನ್ನು ಪಡೆದುಕೊಂಡರು.

ಸರಕಾರಿ ಪಾಲಿಟೆಕ್ನಿಕ್ ಕಾಲೇಜ್: ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಚಿತ ಕೊರೊನಾ ಲಸಿಕೆ ಅಭಿಯಾನ ನಡೆಸಲಾಯಿತು.ಶುಕ್ರವಾರ ಬೆಳಿಗ್ಗೆ ನಡೆದ ಅಭಿಯಾನದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಕಾಂತ ಜಿ.ಕೆ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಪ್ರಾಂಶುಪಾಲರು ಸೇರಿದಂತೆ ಕಾಲೇಜಿನ ೧೦ ಜನ ಸಿಬ್ಬಂದಿಗಳು ಹಾಗು ೨೭ ಜನ ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here