ಕಲಬುರಗಿ: ಕರ್ನಾಟಕ ಯುವಜನ ಒಕ್ಕೂಟದ ವತಿಯಿಂದ ಯುವಕರ ಆದರ್ಶ ಸಂತ ಶ್ರೀ.ಸ್ವಾಮಿ ವಿವೇಕಾನಂದರ 119 ನೇ ಸ್ಮರಣೋತ್ಸವ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕರ್ಮದಲ್ಲಿ ಸಂಘಟನೆಯ ರಾಜ್ಯ ಸಂಚಾಲಕ ಹಾಗೂ ನ್ಯಾಯವಾದಿ ಜೇನವೆರಿ ವಿನೋದಕುಮಾರ ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ದಶಕದಿಂದ ನಮ್ಮ ಸಂಘಟನೆ ನಗರ ಸಾಮಾಜಿಕ ಮೂಲ ಸೌಲಭ್ಯಗಳನ್ನು ಪಡೆದು ಕೊಳ್ಳಲು ಸದಾ ಹೋರಾಟ ಮಾಡುತ್ತಾ ಬರುತಿದೆ ಎಂದು ತಿಳಿಸಿದರು.
ಖ್ಯಾತ ಉದ್ಧಮಿ ವೆಂಕಟೇಶ್ ಕುಲಕರ್ಣಿ(ಕೆಂಭಾವಿ) ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಕೆ. ವೈ.ಫ್ ಸಂಘಟನೆ ರಾಜಕೀಯ ರಹಿತ, ಪಕ್ಷಾತೀತ ಹೋರಾಟ ಮಾಡುವದನ್ನು ಕಂಡು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೋರಾಟ ಹಮ್ಮಿಕೊಳ್ಳಿ ನಮ್ಮ ಬೆಂಬಲ ಸಹ ಅವರಿಗೆ ಇರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘಟನೆಯ ಅಧ್ಯಕ್ಷ ಅನಂತ್ ಗುಡಿ ವಹಿಸಿ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಬೆಲೆ ಏರಿಕೆಯಿಂದ ಮಾಧ್ಯಮ ಜನರ ಜೀವನ ದುಸ್ತರ ವಾಗುತ್ತಾಸಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಳ್ಳು ಆಶ್ವಾಸನೆಯನ್ನು ನೀಡುತ್ತಾ ಜನರನ್ನು ಮೋಸಗೋಳಿಸುವದ್ದನು ತಕ್ಷಣವೇ ನಿಲ್ಲಿಸಿ, ಆರ್ಥಿಕವಾಗಿ ಹಿಂದುಳಿದ ಈ ಭಾಗದ ಜನರ ಜೀವನ ಸುದಾರಿಸುವ ನಿಟ್ಟಿನಲ್ಲಿ ಸೂಕ್ತ ಯೋಜನೆ ಹಾಕಿಕೊಂಡು, ಜೀವನ ಮಟ್ಟ ಸ್ಥಿತಿಗತಿ ಭದ್ರ ಗೊಳಿಸಲು ಹೆಚ್ಚಿನ ವಿಶೇಷ ಅನುದಾನ ಬಿಡುಗಡೆ ಗೊಳಿಸಿಬೇಕು ಎಂದು ಅಗ್ರಹಿಸುತ್ತೆವೆ. ಯುವಕರು ಉದ್ಯೋಗ ವಿಲ್ಲದೆ ಅಪರಾಧ ಕೃತ್ಯಗಳನ್ನು ಮಾಡಲು ಹೊರಟಿದ್ದಾರೆ ಅದನ್ನು ತಡೆಯುವುದಕ್ಕೆ ನಿರೂದೋಗ್ಯ ಬತ್ತೆ ನೀಡುವ ಮೂಲಕ ಆರ್ಥಿಕ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆಯಬೇಕೆಂದು ಸರ್ಕಾರಕ್ಕೆ ಆಗ್ರಹಿಸುತೇನೆ ಎಂದು ತಿಳಿಸಿದರು.
ಕೊನೆಯಲ್ಲಿ ಈರಯ್ಯ ಸ್ವಾಮಿ ಬಂದರವಾಡ ವಂದಿಸಿದರು. ಕಾರ್ಯಕ್ರಮದಲ್ಲಿ ಮಹಾಲಷ್ಮಿ ಟೈಲರ್ನ ಮೆಹಬೂಬ್ ಸಾಬ ಶೈಖ್, ರಾಜಕೀಯ ಧುರೀಣ ಶರಣಬಸಪ್ಪ ಪಾಟೀಲ (ಜಾಪುರ್) ಪ್ರಾರಂಪರಿಕ ವೈದ್ಯ ಈರಣ್ಣ ರಾಂಪುರೆ, ಶಿಕ್ಷಕರರಾದ ಗುರುಲಿಂಗಪ್ಪಾ ರಾವೂರ, ಶಿಕ್ಷಣ ಸಂಸ್ಥೆ ಯ ಕಾರ್ಯದರ್ಶಿ ರಾಜಶೇಖರ ಮಠಪತಿ, ಮೌನಪ್ಪ ಬಡಿಗೇರ ಇತರರು ಉಪಸ್ಥಿತರಿದ್ದರು.