ಹುತಾತ್ಮ ಯೋಧ ಕಾಶಿರಾಯಗೆ ಸುರಪುರ ನಾಗರಿಕರ ಶ್ರದ್ಧಾಂಜಲಿ

0
43

ಸುರಪುರ: ಕಳೆದ ಶುಕ್ರವಾರ ಬೆಳಿಗ್ಗೆ ಫುಲ್ವಾಮಾದಲ್ಲಿ ನಡೆದ ಉಗ್ರರೊಂದಿಗಿನ ಕಾಳಗದಲ್ಲಿ ಹುತಾತ್ಮರಾದ ವಿಜಯಪುರ ಜಿಲ್ಲೆಯ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಯೋಧ ಕಾಶೀರಾಯ ಬೊಮ್ಮನಹಳ್ಳಿಯವರಿಗೆ ಸುರಪುರದಲ್ಲಿ ನಾಗರಿಕರಿಂದ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.

ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ,ಉಗ್ರವಾದ ಎನ್ನುವುದು ಜಗತ್ತಿಗೆ ಅಂಟಿದ ಪಿಡುಗಾಗಿದೆ,ಅದನ್ನು ಸರ್ವನಾಶ ಮಾಡಲು ಭಾರತದಿಂದ ಸಾಧ್ಯವಿದೆ.ಇದನ್ನು ಅರಿತುಕೊಂಡ ಉಗ್ರಗಾಮಿಗಳು ಸದಾಕಾಲ ಭಾರತದಲ್ಲಿ ದಾಳಿಗೆ ವಂಚಿಸುತ್ತಿವೆ.

Contact Your\'s Advertisement; 9902492681

ಆದರೆ ಭಾರತದ ವೀರಯೋಧರು ಉಗ್ರಗಾಮಿಗಳನ್ನು ನಿರ್ನಾಮ ಮಾಡುತ್ತಾರೆ ಎಂಬುದನ್ನು ತಿಳಿದು ಮೋಸದಿಂದ ದಾಳಿಗೆ ಬರುತ್ತಿವೆ.ಅದರಂತೆ ಶುಕ್ರವಾರ ಫುಲ್ವಾಮಾದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಅನೇಕ ಜನ ಉಗ್ರರನ್ನು ನಾಶಮಾಡಿದ ನಮ್ಮ ಭಾರತೀಯ ವೀರ ಸೇನಾನಿಗಳು,ಅದರಲ್ಲಿ ನಮ್ಮ ರಾಜ್ಯದ ವಿಜಯಪುರ ಜಿಲ್ಲೆಯ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ವೀರಯೋಧ ಕಾಶೀರಾಯ ಬೊಮ್ಮನಹಳ್ಳಿಯವರು ತಮ್ಮ 35ನೇ ವಯಸ್ಸಿನಲ್ಲಿಯೆ ನಾವು ಅವರನ್ನು ಕಳೆದುಕೊಂಡಿದ್ದೇವೆ.ಇದು ಭಾರತೀಯರಾದ ನಮ್ಮೆಲ್ಲರಿಗೂ ನೋವಿನ ಸಂಗತಿಯಾಗಿದೆ.ಈ ಉಗ್ರಗಾಮಿಗಳೆಂಬ ನರ ರಾಕ್ಷಸರನ್ನು ಸರ್ವನಾಶ ಮಾಡಲು ನಾವೆಲ್ಲರು ನಮ್ಮ ಸೇನೆಯ ಬೆಂಬಲಕ್ಕೆ ನಿಲ್ಲೋಣ,ಅಲ್ಲದೆ ನಮ್ಮ ಯುವ ಪೀಳಿಗೆಯು ಸೇನೆಗೆ ಸೇರಲು ಮುಂದಾಗಬೇಕು ಎಂದರು.

ಅಲ್ಲದೆ ಈಗಾಗಲೇ ನಮ್ಮ ತಾಲೂಕಿನ ಚಂದ್ಲಾಪುರ ದೇವರಗೋನಾಲ ಲಕ್ಷ್ಮೀಪುರ ಹೀಗೆ ಅನೇಕ ಗ್ರಾಮಗಳ ಯೋಧರು ಸೇನೆಯಲ್ಲಿದ್ದು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಹಗಲಿರಳು ಭಾರತ ಮಾತೆಯ ಸೇವೆಯಲ್ಲಿ ತೊಡಗಿರುವ ಎಲ್ಲಾ ಯೋಧರಿಗೆ ನಾವು ಸದಾಕಾಲ ಋಣಿಯಾಗಿರಬೇಕು ಮತ್ತು ಸದಾಕಾಲ ಅವರ ಬೆಂಬಲಕ್ಕಿರಬೇಕೆಂದರು.

ಸಭೆಯ ಆರಂಭದಲ್ಲಿ ಹುತಾತ್ಮ ಯೋಧನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ,ನಂತರ ಮೇಣದ ಬತ್ತಿಯನ್ನು ಬೆಳಗಿ ಎರಡು ನಿಮಿಷಗಳ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಈ ಸಂದರ್ಭದಲ್ಲಿ ಗಂಗಾಧರ ನಾಯಕ ಅರಳಳ್ಳಿ ಮಲ್ಲಿಕಾರ್ಜುನ ಬಾದ್ಯಾಪುರ ಪರಶುರಾಮ ನಾಆಟೇಕಾರ್ ಸಚಿನ ಕುಮಾರ ನಾಯಕ ರಮೇಶ ಕುಲಕರ್ಣಿ ಪ್ರವೀಣ ವಿಭೂತೆ ಆನಂದ ಪರ್ಥಾನೆ ದೇವಪ್ಪ ಮೇದಾ ಮಲ್ಲು ಒಟ್ಟಿ ಕೃಷ್ಣಾ ಕಾಥಾ ಮಂಜುನಾಥ ಮಠಪತಿ ಅನೀಲ್ ಪರಶುರಾಮ ಹುಲಕಲ್,ಪೊಲೀಸ್ ಪೇದೆಗಳಾದ ಬಸವರಾಜ ಮುದಗಲ್,ದಯಾನಂದ ಜಮಾದಾರ ಹೊನ್ನಪ್ಪ ಹೊನ್ನಾರಿ ಮಾನಯ್ಯ ಸೇರಿದಂತೆ ಅನೇಕ ಜನ ಪೊಲೀಸ್ ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ಹಾಗು ರಾಜುಗೌಡ ಸೇವಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರುಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here