ಆಶಾ ಕಾರ್ಯಕರ್ತೆಯರಿಗೆ ಸಂಘದಿಂದ ಕಿಟ್ ವಿತರಣೆ

0
11

ಸುರಪುರ: ನಗರದ ಹಳೆ ಆಸ್ಪತ್ರೆ ಆವರಣದಲ್ಲಿ ಕೋರೋನಾ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರಿಗೆ ಎನ್95 ಮಾಸ್ಕ್, ಹ್ಯಾಂಡ್ ಗ್ಲೌಜ್, ಫೇಸ್ ಶೀಲ್ಡ್ ಒಳಗೊಂಡ ಸುರಕ್ಷಿತ ಆರೋಗ್ಯ ಪರಿಕರಗಳನ್ನು ಎ.ಐ.ಯು.ಟಿ.ಯು.ಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ(ರಿ) ದ ಯಾದಗಿರಿ ಜಿಲ್ಲಾ ಸಮಿತಿ ವತಿಯಿಂದ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾ ಮುಖಂಡ ರಾಮಲಿಂಗಪ್ಪ ಬಿ.ಎನ್ “ಕೊರೋನಾ ನಿಯಂತ್ರಣದಲ್ಲಿ ತೊಡಗಿರುವ ಆಶಾ ಕಾರ್ಯಕರ್ತೆಯರು ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮನೆ ಮನೆಗಳಿಗೆ ಭೇಟಿ ನೀಡಿ ಕೋವಿಡ್ ರೋಗ ಲಕ್ಷಣ ಇರುವ ಶಂಕಿತ, ಸೊಂಕಿತರರನ್ನು ಗುರುತಿಸಿ ಹೋಮ್ ಕ್ಯಾರೆಂಟೈನ್ ಹಾಗೂ ಆಸ್ಪತ್ರೆಗೆ ದಾಖಲಿಸುವುದು, ಕೋವಿಡ್ ಲಸಿಕೆ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸಿ, ಲಸಿಕೆ ಹಾಕಿಸಿಕೊಳ್ಳಲು ಮನವೊಲಿಸುವುದು ಇದರ ಜೊತೆಗೆ ಗರ್ಭಿಣಿ ಹೆಣ್ಣು ಮಕ್ಕಳ ಹೆರಿಗೆ ಮತ್ತು ಶಿಶು ಆರೋಗ್ಯ, ಇತರೆ ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸಿ ಇಲಾಖೆ ಮತ್ತು ಜನತೆಯ ಮದ್ಯೆ ಕೊಂಡಿಯಂತೆ  ಮಹತ್ವದ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರು ಕೋವಿಡ್ ಎರಡನೇ ಅಲೆಯಲ್ಲಿ ಸಾವಿರಕ್ಕೂ ಹೆಚ್ಚು ಕಾರ್ಯಕರ್ತೆಯರು ಸೋಂಕಿಗೆ ಒಳಗಾಗಿದ್ದಾರೆ. 15ಕ್ಕೂ ಹೆಚ್ಚು ಆಶಾ ಮಾರಣ ಹೊಂದಿದ್ದಾರೆ. ನೂರಾರು ಆಶಾ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಕುಟುಂಬ ಸದಸ್ಯರ ವಿರೋಧವನ್ನು ಲೆಕ್ಕಿಸದೆ ಇಂತಹ ಪ್ರತಿಕೂಲ ಪರಿಷ್ಟಿತಿಯ ಮದ್ಯೆಯು ಎದೆ ಗುಂದದೆ ಜನ ಸಮುದಾಯದ ಜೊತೆ ನಿಂತು ಹೋರಾಡುತ್ತಿರುವ ಆಶಾ ಸೇವೆ ಶ್ಲಾಘನೀಯ.

Contact Your\'s Advertisement; 9902492681

ಕೋರೋನ ಮಹಮಾರಿ ವಿರುದ್ಧ ಹೋರಾಟ ನಿರತ ಆಶಾ ಕಾರ್ಯಕರ್ತೆಯರ ಸುರಕ್ಷತೆ ದೃಷ್ಟಿಯಿಂದ ಸಂಘದಿಂದ  ಆರೋಗ್ಯ ಸುರಕ್ಷಿತ ಪರಿಕರಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.”

ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಾದ ಶಾಂತವ್ವ, ಪ್ರಭಾವತಿ, ಸುಲೋಚನಾ, ಪ್ರೇಮವತಿ, ಕಾಶಿಬಾಯಿ, ಮರೆಮ್ಮ, ರಾಜೇಶ್ವರಿ, ಶ್ರೀದೇವಿ,  ಸೇರಿದಂತೆ ತಾಲೂಕಿನ ನೂರಾರು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here