ಕಲ್ಯಾಣ ಕರ್ನಾಟಕ ಇತಿಹಾಸ ಸಮಿತಿ ಪುನರ್ ರಚನೆಗೆ ಸಿಎಂಗೆ ಭೇಟಿ

0
27

ಕಲಬುರಗಿ: ಕಲ್ಯಾಣ ಕರ್ನಾಟಕ ಇತಿಹಾಸ ಸಮಿತಿ ಪುನಃ ರಚನೆಗೆ ಒತ್ತಾಯಿಸಿ ಒಕ್ಕೂಟದ ನಿಯೋಗ ನಾಳೆ ಮುಖ್ಯಮಂತ್ರಿಗಳಿಗೆ ಭೇಟಿ ನೀಡಲಿದೆ ಎಂದು ಒಕ್ಕೂಟದ ಅಧ್ಯಕ್ಷರಾದ ನಾಲವಾರಕರ್ ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟವು ಇಂದು ಕರೆಯಲಾಗಿದ ಪತ್ರಿಕಾ ಗೋಷ್ಠಿಯಲ್ಲಿ ಒಕ್ಕೂಟ ಅಧ್ಯಕ್ಷರಾದ ಮಂಜುನಾಥ ನಾಲವಾರಕರ್ ಮತ್ತು ಒಕ್ಕೂಟದ ಜಿಲ್ಲಾಧ್ಯಕ್ಷರಾದ ಸಚೀನ ಫರಹತಾಬಾದ ಮಾತನಾಡಿದರು.

Contact Your\'s Advertisement; 9902492681

ಹೈದ್ರಾಬಾದ್ ಕರ್ನಾಟಕ ಇತಿಹಾಸ ಸಮಿತಿಯು ರಚನೆಯಾಗಿದೆ ಆದರೇ ಯಾವುದೇ ಇತಿಹಾಸದ ಚಟುವಟಿಕೆಗಳು ನಡೆಯುತ್ತಿಲ್ಲ. ಈ ಭಾಗದ ಐತಿಹಾಸಿಕ ಸ್ಥಳಗಳಿಗೆ ಇಲ್ಲವರಿಗೆ ಸಮಿತಿ ಸದಸ್ಯರು ಭೇಟಿ ನೀಡಿಲ್ಲ. ನಾಳೆ ಮುಖ್ಯಮಂತ್ರಿಗಳಿಗೆ ಒಕ್ಕೂಟದ ನಿಯೋಗ ಭೇಟಿ ನೀಡಿ ಕಲ್ಯಾಣ ಕರ್ನಾಟಕ ಇತಿಹಾಸ ಸಮಿತಿ ಪುನರ್ ರಚನೆ ಮಾಡಬೇಕು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಈ ಭಾಗದ ಎಲ್ಲಾ ಜಿಲ್ಲೆಗಳಲ್ಲಿ ಇತಿಹಾಸ ಸಮಿತಿ ಕಛೇರಿ ಪ್ರಾರಂಭಿಸಿ, ಮೂಲಭೂತ ಸೌಕರ್ಯ ಒದಗಿಸಿ, ಅನುದಾನ ಬೀಡುಗಡೆಗೆ ಒತ್ತಾಯಿಸಲಾಗುವುದೆಂದು ಮಾಹಿತಿ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here