ನುಡಿದಂತೆ ನಡೆಯಲು ಸಿಎಂಗೆ ಲಕ್ಷ್ಮಣ ದಸ್ತಿ ಮನವಿ

0
34

ಕಲಬುರಗಿ: ಕಲ್ಯಾಣ ಕರ್ನಾಟಕ ಎಂದು ಹೆಸರು ನಾಮಕರಣ ಮಾಡಿ ಭಾಗದ ಜನತೆಗೆ ಸಂತೋಷ ನೀಡಿದಂತೆ ಪೂರಕವಾಗಿ ಕಲ್ಯಾಣ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕಲ್ಯಾಣ ಕರ್ನಾಟಕ ಜನಪರ ಸಂಫರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಒತ್ತಾಯಿಸಿದ್ದಾರೆ.

ಎರಡು ದಿನಗಳ ಹಿಂದೆ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಹೆಸರು ಬದಲಿಸಿ ಕಲ್ಯಾಣ ಕರ್ನಾಟಕ ಸಾರಿಗೆ ಎಂದು ನಾಮಕರಣ ಮಾಡಿದ್ದು ಸಮಿತಿ ಹರ್ಷ ವ್ಯಕ್ತಪಡಿಸಿ ಸ್ವಾಗತಿಸಿ, ಕಲ್ಯಾಣ ಕರ್ನಾಟಕ ಪ್ರದೇಶದ ವಿಶೇಷ ಅಭಿವೃದ್ಧಿಗೆ ತಕ್ಷಣ ಪ್ರತ್ಯೇಕ ಮಂತ್ರಾಲಯ ಸ್ಥಾಪನೆ ಮಾಡಿ ನುಡಿದಂತೆ ನಡೆದು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ದಿಟ್ಟತನದ ಪ್ರದರ್ಶಿಸಲು ಸಮಿತಿ ಪರವಾಗಿ ಆಗ್ರಹಿಸಿದ್ದಾರೆ.

Contact Your\'s Advertisement; 9902492681

371ನೇ ಜೆ ಕಲಂ ತಿದ್ದುಪಡಿಯ ಸವಲತ್ತುಗಳು ಜನರಿಗೆ ತಲುಪಲು ಇದರ ಪರಿಣಾಮಕಾರಿ ಅನುಷ್ಠಾನಕ್ಕೆ ಮತ್ತು ಕಲ್ಯಾಣ ಕರ್ನಾಟಕದ ವಿಶೇಷ ಅಭಿವೃದ್ಧಿಗೆ ಪ್ರತ್ಯೇಕ ಮಂತ್ರಾಲಯ ಸ್ಥಾಪನೆ, 371ನೇ. ಜೆ.ಕಲಂ ತಿದ್ದುಪಡಿಯ ನಿಯಮಗಳಲ್ಲಿರುವ ದೋಷಗಳನ್ನು ನಿವಾರಣೆ ಮಾಡಿ ಪರಿಷ್ಕೃತ ಹೊಸ ನಿಯಮಗಳು ರಚಿಸುವದು. ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದ ಕಛೇರಿಗಳು ವಿಭಾಗೀಯ ಕೇಂದ್ರ ಕಲಬುರಗಿಗೆ ಸ್ಥಳಾಂತರ, 371ನೇ .ಜೆ. ವಿಶೇಷ ಕೋಶ ಪ್ರಾದೇಶಿಕ ಕಛೇರಿ ಕಲಬುರಗಿಯಲ್ಲಿ ಅಸ್ತಿತ್ವಕ್ಕೆ ತರುವದು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಪ್ರಗತಿಗೆ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆ ಮಾಡುವುದು ಎಂದು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here