ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು: ಸಿದ್ದುಗೌಡ

0
27

ಶಹಾಬಾದ: ಸರ್ಕಾರದಿಂದ ಸಿಗುವ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಂಡು ಕೃಷಿಯಲ್ಲಿ ಹೆಚ್ಚಿನ ಏಳಿಗೆ ಕಂಡುಕೊಳ್ಳಬೇಕೆಂದು ಚಿತ್ತಾಪೂರ ಎಪಿಎಮ್‍ಸಿ ಅಧ್ಯಕ್ಷ ಸಿದ್ದುಗೌಡ ಅಫಜಲಪುರಕರ್ ಹೇಳಿದರು.

ಅವರು ಶುಕ್ರವಾರ ನಗರದ ರೈತ ಸಂಪರ್ಕ ಕೇಂದ್ರದಲ್ಲಿ ಆಯೋಜಿಸಲಾದ ತಾಡಪತ್ರಿ ವಿತರಣೆ ಕಾರ್ಯಕ್ರಮದಲ್ಲಿ ರೈತರಿಗೆ ತಾಡಪತ್ರಿ ವಿತರಿಸಿ ಮಾತನಾಡಿದರು.

Contact Your\'s Advertisement; 9902492681

ರೈತರಿಗೆ ಮಳೆ, ಗಾಳಿ, ಧೂಳಿನಿಂದ ರಾಶಿ ಮಾಡಿದ ಬೆಳೆ ಹಾಗೂ ದವಸಧಾನ್ಯಗಳನ್ನು ರಕ್ಷಿಸಿಕೊಳ್ಳಲು ತಾಡಪತ್ರಿ ತುಂಬಾ ಅವಶ್ಯಕತೆಯಿರುತ್ತದೆ. ಅಕಾಲಿಕವಾಗಿ ಸುರಿದ ಮಳೆ, ಸುಳಿಗಾಳಿಯಿಂದಾಗಿ ದವಸ ಧಾನ್ಯ ಹಾಳಾಗುತ್ತಿರುತ್ತದೆ. ರಾಶಿ ಮಾಡಲು ಸಹಿತ ತಾಡಪತ್ರಿ ಉಪಯೋಗಿಸಬಹುದು. ಹೆಸರು, ಉದ್ದು ಬೆಳೆಯನ್ನು ರಸ್ತೆಯ ಮೇಲೆಯೇ ರಾಶಿ ಮಾಡುತ್ತಿರುತ್ತಾರೆ. ಇದರಿಂದಾಗಿ ಅವಘಡ ಸಂಭವಿಸುವ ಸಾಧ್ಯತೆಯಿರುತ್ತದೆ.

ಬೆಳೆಗಳನ್ನು ಬಿಸಿಲಿಗೆ ಒಣಗಿಸಲು ಸಹ ತಾಡಪತ್ರಿಯ ಅವಶ್ಯಕತೆ ಹೆಚ್ಚಿರುತ್ತದೆ. ಹಾಗಾಗಿ ಸರ್ಕಾರದಿಂದ ಸಿಗುವ ಸೌಲಭ್ಯದಲ್ಲಿ ತಾಡಪತ್ರಿ ಪಡೆದುಕೊಂಡರೆ ನಿಮ್ಮ ದವಸಧಾನ್ಯಗಳ ರಕ್ಷಣೆಗೂ ಸಹಾಯವಾಗುತ್ತದೆ ಎಂದು ಹೇಳಿದರು.

ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ಕಾಶಿನಾಥ ದಂಡೋತಿ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಕೃಷಿ ಇಲಾಖೆಯಲ್ಲಿ ರಿಯಾಯಿತಿ ದರದಲ್ಲಿ ತಾಡಪತ್ರಿ ವಿತರಿಸಲಾಗುತ್ತಿದ್ದು, ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ರೈತರು ಜುಲೈ 17ರಿಂದ ಒಂದು ವಾರದೊಳಗೆ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತಿದ್ದು, ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಪಹಾಣಿ, ಬ್ಯಾಂಕ್ ಪಾಸ್‍ಬುಕ್ ನೀಡಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರು ಜಾತಿ ಪ್ರಮಾಣ ಪತ್ರದ ಝರಾಕ್ಸ್ ಪ್ರತಿ, ಒಂದು ಭಾವಚಿತ್ರವನ್ನು ಸಲ್ಲಿಸಬೇಕು.ಕಳೆದ ಮೂರು ವರ್ಷಗಳಲ್ಲಿ ತಾಡಪತ್ರಿ ಪಡೆದ ರೈತರ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಶಶಿಕಾಂತ ಭರಣಿ,ಸಹಾಯಕ ಕೃಷಿ ಅಧಿಕಾರಿ ರವೀಂದ್ರಕುಮಾರ, ಪ್ರವೀಣಕುಮಾರ, ಕು. ರಂಜಿತಾ ಸೇರಿದಂತೆ ವಿವಿಧ ಗ್ರಾಮದ ರೈತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here