ಕಲ್ಯಾಣ ಕರ್ನಾಟಕದ ಬಗ್ಗೆ ನಮ್ಮ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಬೇಕು: ದಸ್ತಿ

0
87

ಕಲಬುರಗಿ: ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಕೋರ ಕಮಿಟಿಯ ಮಹತ್ವದ ಸಭೆಯು ಹಿಂದಿ ಪ್ರಚಾರ ಸಭಾದ ಸಭಾಂಗಣದಲ್ಲಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಭೆಯಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಯ ಉದ್ದೇಶದಿಂದ ಸಂವಿಧಾನದ ೩೭೧ನೇ(ಜೆ) ಕಲಂ ತಿದ್ದುಪಡಿ ಮಾಡಿ ಕೇಂದ್ರ ಸರಕಾರ ಇದರ ಪರಿಣಾಮಕಾರಿ ಅನುಷ್ಠಾನಕ್ಕೆ ರಾಜ್ಯ ಸರಕಾರಕ್ಕೆ ಜವಾಬ್ದಾರಿ ವಹಿಸಿದೆ. ಆದರೆ ರಾಜ್ಯ ಸರಕಾರ ೨೦೧೩ ರಿಂದ ಇಲ್ಲಿಯವರೆಗೆ ಯಾವುದೇ ಪಕ್ಷದ ಸರಕಾರವಿರಲಿ ವಿಶೆಷ ಸ್ಥಾನಮಾನದ ಪರಿಣಾಮಕಾರಿ ಅನುಷ್ಠಾನಕ್ಕೆ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ನಿರ್ಲಕ್ಷ ಮಾಡುತ್ತಿರುವುದು ಖೇದಕರವಾದ ವಿಷಯವಾಗಿದೆ ಎಂದು ಕೋರ ಕಮಿಟಿಯ ಸಭೆಯಲ್ಲಿ ಎಲ್ಲಾ ಸದಸ್ಯರು ಗಂಭೀರವಾಗಿ ಚರ್ಚಿಸಿ ಈ ಬಗ್ಗೆ ಕಲ್ಯಾಣ ಕರ್ನಾಟಕದ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿ ತಮಗೆ ಮತ ನೀಡಿದ ಮತದಾರರ ಆಶಯವನ್ನು ಈಡೇರಿಸುವಲ್ಲಿ ಇನ್ನು ಮುಂದಾದರೂ ಪಕ್ಷಾತೀತವಾಗಿ ಸಂಘಟಿತ ರಾಜಕೀಯ ಇಚ್ಛಾಶಕ್ತಿ ವ್ಯಕ್ತಪಡಿಸಲು ಸಭೆ ಒತ್ತಾಯಿಸಿತು.

Contact Your\'s Advertisement; 9902492681

ಸಭೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮಂತ್ರಿ ಮಂಡಲದಲ್ಲಿ ಆಗುತ್ತಿರುವ ಅನ್ಯಾಯ, ಅನುದಾನದಲ್ಲಿ ಆಗುತ್ತಿರುವ ತಾರತಮ್ಯ, ವಿಜಯಭಾಸ್ಕರ ಸಮಿತಿಯ ಆಡಳಿತ ಸುಧಾರಣಾ ವರದಿಯನ್ನು ಆಧರಿಸಿ ಪ್ರಾದೆಶಿಕ ಆಯುಕ್ತರ ಕಚೇರಿಯ ರದ್ದತಿ, ೩೭೧ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಜಾರಿಗೆ ತರುವದರ ಬಗ್ಗೆ, ಕೇಂದ್ರ ಸರಕಾರದ ಯೋಜನೆಗಳು ಮತ್ತು ರಾಜ್ಯ ಸರಕಾರದ ಯೋಜನೆಗಳು ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಸಮತೋಲನವಾಗಿ ಹಂಚಿಕೆ ಮಾಡುವುದು, ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿಯ ಸ್ಥಾಪನೆಗೆ ಅಧಿಕೃತ ಒತ್ತಡ ತರುವುದರ ಬಗ್ಗೆ, ಕೊರೊನಾ ೩ನೇ ಅಲೆಯನ್ನು ಎದುರಿಸಲು ಸರಕಾರ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುವುದರ ಕುರಿತು ಅದರಂತೆ ಏಳು ಜಿಲ್ಲೆಗಳಲ್ಲಿ ಸಂಘಟನೆಯನ್ನು ಕೈಗೊಳ್ಳುವುದು ಮತ್ತು

ಮುಂದಿನ ಹೋರಾಟದ ರೂಪು ರೇಷೆಗಳನ್ನು ಹಮ್ಮಿಕೊಳ್ಳುವುದರ ಬಗ್ಗೆ ಸಮಿತಿಯ ಮುಖಂಡರಾದ ಮನೀಷ ಜಾಜು, ಅಶೋಕ್ ಗುರುಜೀ, ಲಿಂಗರಾಜ ಸಿರಗಾಪೂರ, ಡಾ. ಮಾಜಿದ್ ದಾಗಿ, ಶಿವಲಿಂಗಪ್ಪ ಬಂಡಕ್, ಡಾ. ಗಾಂಧೀಜಿ ಮೋಳಕೇರೆ, ಮಹಮ್ಮದ ಮಿರಾಜೊದ್ದೀನ್, ಡಿ.ಬಿ. ನಾಯಕ್, ವೀರೇಶ ಪುರಾಣಿಕ್, ಡಾ. ಭದ್ರಶೆಟ್ಟಿ, ಅಬ್ದುಲ ರಹೀಮ್, ಸಾಲೋಮನ್ ದಿವಾಕರ್, ಅಸ್ಲಂ ಚೌಂಗೆ, ಮಲ್ಲಿನಾಥ ಸಂಗಶೆಟ್ಟಿ, ಶಾಂತಪ್ಪ ಕಾರಭಾಸಗಿ, ರಾಜೆ ಶಿವಶರಣ ಗುರುರಾಜ ಭಂಡಾರಿ, ಸಾಬಿರ್ ಅಲಿ, ಭೀಮರಾಯ, ವಿಶಾಲದೇವ್, ಸಂಧ್ಯಾರಾಜ್ ಸ್ಯಾಮ್ಯುವೆಲ್, ಮಖ್ಬೂಲ್ ಪಟೇಲ್, ಎಚ್.ಎಂ. ಹಾಜಿ, ಅಮರ ಬಿದ್ದಾಪೂರ, ಮಾತನಾಡಿ ಸಮಿತಿಯ ಮುಂದಿನ ಹೋರಾಟದ ರೂಪರೇಷೆಗಳನ್ನು ಹಮ್ಮಿಕೊಳ್ಳಲು ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರಿಗೆ ಸರ್ವಾನುಮತದಿಂದ ಜವಾಬ್ದಾರಿ ನೀಡಲಾಯಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಲಕ್ಷ್ಮಣ ದಸ್ತಿಯವರು ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಸಂಬಂಧಿಸಿ ಎಲ್ಲಾ ಪಕ್ಷಗಳ ಮುಖಂಡರುಗಳ ಜೊತೆ ಸಮಾಲೋಚನೆ ನಡೆಸಿ ವಿಧಾನ ಮಂಡಲದ ಆಗಸ್ಟ ಅಧಿವೇಶನದ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಶಾಸಕರ ಸಭೆ ನಡೆಸಲು ಅದರಂತೆ ಸರ್ವ ಪಕ್ಷಗಳ ನಿಯೋಗ ಅದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಭೇಟಿ ಮಾಡುವ ಬಗ್ಗೆ ನಿರ್ಧರಿಸಲಾಗುವುದು.

ಇದಕ್ಕೆ ಪೂರ್ವಭಾವಿಯಾಗಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂಬಂಧಪಟ್ಟಂತಹ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳು, ನೆನೆಗುದಿಗೆ ಬಿದ್ದ ನಮ್ಮ ಪ್ರದೇಶದ ಜನಮಾನಸದ ಒತ್ತಾಯಗಳ ವಿಸ್ತೃತವಾದ ಪ್ರಸ್ತಾವನೆ ಸಿದ್ಧಪಡಿಸಿ ಆದಷ್ಟು ಶೀಘ್ರ ಪರಿಣಿತರ, ಚಿಂತಕರ, ಸರ್ವ ಪಕ್ಷಗಳ ಮುಖಂಡರ, ಸಮಾನ ಮನಸ್ಕರ ಸಭೆಗಳನ್ನು ನಡೆಸಿ ಮುಂದಿನ ಹೋರಾಟದ ರೂಪರೇಷೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here