ಬಿಜೆಪಿ ಸಂಘಟನೆಗಾಗಿ ಪ್ರಾಮಾಣಿಕ ಸೇವೆ ಸಲ್ಲಿಸುವ ಮನೋಭಾವನೆ ಬೆಳೆಸಿಕೊಳ್ಳಿ: ರೇವೂರ

0
132

ಶಹಾಬಾದ:ಬಿಜೆಪಿ ಪಕ್ಷದ ಸಂಘಟನೆ, ಪಕ್ಷ ನಿಷ್ಠೆ ನೋಡಿ ಕಾರ್ಯಕರ್ತರಿಗೆ ಸ್ಥಾನ ಮಾನಗಳನ್ನು ನೀಡುತ್ತದೆ.ಆದ್ದರಿಂದ ಪಕ್ಷಕ್ಕೆ ಯಾವಾಗಲೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.

ಅವರು ರವಿವಾರ ನಗರದ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮಂಡಲದಿಂದ ಆಯೋಜಿಸಲಾದ ಬಿಜೆಪಿ ಮಂಡಲ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಬಿಜೆಪಿಯಲ್ಲಿ ಕೆಲಸ ಮಾಡುವ ಸಾಮನ್ಯ ಕಾರ್ಯಕರ್ತನಿಗೂ ಉನ್ನತವಾದ ಸ್ಥಾನಮಾನಗಳನ್ನು ನೀಡಿದೆ.ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸುವ ಏಕೈಕ ಪಕ್ಷವೆಂದರೆ ಬಿಜೆಪಿ ಎಂದರು. ಕೇಂದ್ರದ ಮೋದಿ ಸರ್ಕಾರದ ಜನಪರವಾದ ಯೋಜನೆಗಳಾದ ಉಚಿತ ಗ್ಯಾಸ ಸಂಪರ್ಕ ಯೋಜನೆ, ಜನಧನ್ ಯೋಜನೆ, ಬೆಳೆ ವಿಮಾ ಯೋಜನೆ, ಕಿಸಾನ ಸಮ್ಮಾನ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ಅಟಲ್ ಪಿಂಚಣಿ ಯೋಜನೆ, ಕೋವಿಡ್ ಸಮಯದಲ್ಲಿ ಎಲ್ಲರಿಗೂ ಧೈರ್ಯ ತುಂಬುವುದರ ಜತೆಗೆ ನಿಯಂತ್ರಣ ಮಾಡಿರುವುದು ಸೇರಿದಂತೆ ಮುಖ್ಯಮಂತ್ರಿ ಯಡಿಯೂರಪ್ಪನವರ ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರ ಮನಕ್ಕೆ ಮುಟ್ಟಿಸುವ ಕಾರ್ಯವಾಗಬೇಕಿದೆ. ಅಲ್ಲದೇ ಪಕ್ಷದ ಧ್ಯೇಯ ಉದ್ದೇಶಗಳಿಗೆ ಬದ್ಧರಾಗಿ ಪಕ್ಷದ ಸಂಘಟನೆ ಕೈಗೊಳ್ಳಬೇಕು ಎಂದರು.

ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ಪ್ರತಿಯೊಂದು ಗ್ರಾಮದಲ್ಲಿ ಮತ್ತು ನಗರದಲ್ಲಿ ಒಗ್ಗಟ್ಟಾಗಿ ಬಿಜೆಪಿ ಪಕ್ಷವನ್ನು ಬೆಳಸಬೇಕು. ಪಕ್ಷಕ್ಕಾಗಿ ದುಡಿಯಬೇಕು. ನಿಮ್ಮ ವಾರ್ಡ ಮಟ್ಟದಲ್ಲಿ ಬಿಜೆಪಿ ಸಾಧನೆ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕು.ಮುಂಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಬೇಕು.ಅದಕ್ಕಾಗಿ ನಾವೆಲ್ಲರೂ ಪಕ್ಷವನ್ನು ಬೇರು ಮಟ್ಟದಿಂದ ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಂಘಟನೆಯಲ್ಲಿ ತೊಡಗಬೇಕೆಂದು ತಿಳಿಸಿದರು.

ಶಹಬಾದ ಮಂಡಲ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕಲಬುರ್ಗಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಕಲಬುರ್ಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಬಿರಾದಾರ , ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಕುಂಬಾರ, ಸಿದ್ರಾಮ ಕುಸಾಳೆ, ವಿಭಾಗ ಸಹಸಂಘಟನಾ ಕಾರ್ಯದರ್ಶಿಗಳಾದ ಸೂರ್ಯಕಾಂತ ದೋಣಿ ವೇದಿಕೆ ಮೇಲೆ ಇದ್ದರು.

ಕಲಬುರ್ಗಿ ಗ್ರಾಮಾಂತರ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗೀರಥಿ ಗುನ್ನಾಪುರ, ಅರುಣ ಪಟ್ಟಣಕರ , ನಾಗರಾಜ ಮೇಲಗೆರೆ, ಕನಕಪ್ಪ ದಂಡಗುಲಕರ,ಜ್ಯೋತಿಶರ್ಮಾ, ಸುಭಾ? ಜಾಪುರ, ನಿಂಗಣ್ಣ ಹುಳಗೋಳಕರ,ಚಂದ್ರಕಾಂತ ಗೊಬ್ಬುರಕರ,ಅನೀಲ ಬೊರಗಾಂವಕರ, ಬಸವರಾಜ ಬಿರಾದಾರ,ರವಿ ರಾಠೋಡ, ಎಲ್ಲಾ ಮೋರ್ಚಾಗಳ ಅಧ್ಯಕ್ಷರು , ಪದಾಧಿಕಾರಿಗಳು, ಕಾರ್ಯ ಕಾರಣಿ ಸದಸ್ಯರು, ಶಕ್ತಿಕೇಂದ್ರದ ಪ್ರಮುಖರು, ನಗರಸಭೆಯ ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಸದಾನಂದ ಕುಂಬಾರ ನಿರೂಪಿಸಿದರು,ರಾಜು ಕೋಬಾಳ ಪ್ರಾರ್ಥಿಸಿದರು, ಸಿದ್ರಾಮ ಕುಸಾಳೆ ಸ್ವಾಗತಿಸಿದರು, ಬಸವರಾಜ ಬಿರಾದಾರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here