ಕಲಬುರಗಿ: ನಗರದ ಖಾಜಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಖಾಜಾ ಬಂದೇನವಾಜ ವಿಶ್ವವಿದ್ಯಾಲಯದ ಕುಲಪತಿಗಳಾದ ಪೂಜ್ಯ ಡಾ. ಸೈಯದ ಶಾಹ ಖುಸ್ರೋ ಹುಸೈನಿ ಪ್ರೋತ್ಸಾಹದಲ್ಲಿ ಖಾಜಾ ಶಿಕ್ಷಣ ಸಂಸ್ಥೆಯ ಬೀಬೀ ರಜಾ ಮಹಿಳಾ ಮಹಾವಿದ್ಯಾಲಯ ಹಿಂದಿ ವಿಭಾಗದ ವತಿಯಿಂದ “ಹಿಂದಿ ಸೂಫಿ ಸಾಹಿತ್ಯ ಒಂದು ವಿವೇಚನೆ” ಎಂಬ ವಿಷಯವನ್ನು ಕುರಿತು ಒಂದು ದಿನದ ರಾಷ್ಟ್ರೀಯ ಇ-ಗೋಷ್ಠಿಯನ್ನು ಆಯೋಜಿಸಲಾಯಿತು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಅಧ್ಯಕ್ಷರಾದ ಡಾ. ರಾಜು ಬಾಗಲಕೋಟ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದರು.
ಸೂಫಿ ಸಂಪ್ರದಾಯ ಐತಿಹಾಸಿಕ ಪರಂಪರೆ ವಿವರಿಸಿ ಭಾರತ ಬಹುಸಂಸ್ಕೃತಿಯ ಸಮಾಜವನ್ನು ಹೊಂದಿರುವಂತಹ ರಾಷ್ಟ್ರ ಮೋಕ್ಷ ಸಾಧನೆಗೆ ಸರಳ ಮಾರ್ಗವನ್ನು ತಿಳಿಸಿದರು. ಮೇಲು ಕೀಳು ಎಂಬ ಭೇದವನ್ನು ತೊಲಗಿಸಿ ಸಮಾನತೆ ಸಾರಿದರು. ಧರ್ಮವೆಂದರೆ ಪ್ರೇಮ ಹಾಗೂ ಮಾನವಸೇವೆ ಎಂದು ಸಾರಿದರು.
ಸೂಫಿವಾದಿಗಳು ಆತಂಕ ಪವಿತ್ರತೆ ಬಗ್ಗೆ ಒತ್ತುನೀಡಿ ಭಕ್ತರಿಗೆ ಪ್ರೇಮದಿಂದ ಈಶ್ವರನನ್ನು ಪಡೆಯಲು ಸಾಧ್ಯವಾಗುತ್ತದೆ ಆಧ್ಯಾತ್ಮಿಕ ಹಾಗೂ ಲೌಖಿಕ ಸದ್ಭಾವನೆಗೆ ಮಾನವೀಯತೆ, ಸಹೋದರ ಭಾವನೆಗೆ ಮುಖ್ಯ ಅಂಶಗಳಾಗಿವೆ ಎಂದು ಹೇಳಿದರು.
ಸಾಹಿತಿ ಡಾ. ಧನ್ಯಕುಮಾರ ಬಿರಾದಾರ ಮಾತನಾಡಿ ಎಲ್ಲಾ ಧರ್ಮಗಳು ಮಾನವ ಕಲ್ಯಾಣವನ್ನೆ ಸಾರಿವೆ ದೇವರು ಒಬ್ಬನೇ ನಾಮ ಹಲವು ಎಂದು ಹೇಳಿದರು. ಪ್ರೇಮ ಮತ್ತು ಮಾನವ ಸೇವೆಯೇ ನಿಜವಾದ ಧರ್ಮ ಎಂದು ಉಪನ್ಯಾಸದ ಮೂಲಕ ತಿಳಿಸಿದರು.
ಹೈದರಾಬಾದ ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಪಠಾನ್ ರಹಿಮ್ ಖಾನ್ ಅವರು ಖಾಜಾ ಬಂದಾ ನವಾಜ್ ( ಗೇಸುದರಾಜ್) ಅವರು ಕಲಬುರಗಿಯಲ್ಲಿ ಹಿಂದೂ, ಮುಸ್ಲಿಂ ಜನರಲ್ಲಿ ಸಾಮರಸ್ಯಕ್ಕಾಗಿ ಹೆಸರುವಾಸಿಯಾಗಿದರು. ಇವರು ಬಹುಭಾಷೆ ಪ್ರವೀಣರಾಗಿದ್ದು, ಅರಬ್ಬೀ, ಫಾರಸಿ, ಉರ್ದು, ದಖನಿ ಮತ್ತು ಸಂಸ್ಕೃತ ಭಾಷೆಯಲ್ಲಿ ಪ್ರವಿಣ್ಯತೆಯನ್ನು ಹೊಂದಿದರು. ಬಡವರ ಸೇವೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದರು ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ. ಜೇಬಾ ಪರ್ವಿನ್ ಅವರು ಅಧ್ಯಕ್ಷತೆ ವಹಿಸಿದರು. ಉಮ್ಮೆ ಕುಲ್ಸುಮ್ ಆತಿಕಾ ಪ್ರಾರ್ಥಿಸಿದರು. ಡಾ. ಬಿ ಜ್ಯೋತಿ ಸ್ವಾಗತಿಸಿದರು. ಸಂಚಾಲಕರಾದ ಡಾ. ಅಫಶಾ ದೇಶಮುಖ ಪರಿಚಯಿಸಿದರು. ಡಾ. ಪ್ರೇಮಚಂದ ಚವಾಣ್ ನಿರೂಪಿಸಿದರು. ಕೊನೆಯಲ್ಲಿ ಡಾ. ಕನೀಜ್ ಫಾತಿಮಾ ಆಳ್ವಿ ವಂದಿಸಿದರು.