ಬಿ.ಎಸ್.ಎನ್.ಎಲ್ ಕಚೇರಿಯ ಉಪ ಮಂಡಲ: ಎಂಜಿನಿಯರ್ ಡಾ.ಹೀರಾಸಿಂಗ್ ರಾಠೋಡ್ ಅವರಿಗೆ ಬೀಳ್ಕೊಡುಗೆ

0
7

ಕಲಬುರಗಿ: ಆಗಸ್ಟ್: ೦೫: ಕಲಬುರಗಿಯ ಬಿ.ಎಸ್.ಎನ್.ಎಲ್ ಕಚೇರಿಯಲ್ಲಿ ಉಪ ಮಂಡಲ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿದ್ದ ಹಾಗೂ ನಗರ ರಾಜಭಾಷೆ ಅನುಷ್ಠಾನ ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ಡಾ.ಹೀರಾಸಿಂಗ್ ರಾಠೋಡ ಅವರು ಕಳೆದ ಜುಲೈ.೩೧ರಂದು ಸೇವಾ ನಿವೃತ್ತಿ ಹೊಂದಿದರು. ಇದರ ಅಂಗವಾಗಿ ಕಲಬುರಗಿಯ ಮಹಾಪ್ರಬಂಧಕರ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ರಾಜಭಾಷಾ ಕಲಬುರಗಿ ಎಂಬ ವಾರ್ಷಿಕ ಗೃಹ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.

ಕಲಬುರಗಿ ಬಿ.ಎಸ್.ಎನ್.ಎಲ್ ಕಚೇರಿಯ ಮಹಾಪ್ರಬಂಧಕ ಹಾಗೂ ನಗರ ರಾಜಭಾಷೆ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ.ಎಸ್. ಚೊಂಗಡ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ಜ್ಯೋತಿ ಬೆಳಗಿಸುವುದರ ಮೂಲಕ ರಾಜಭಾಷಾ ಕಲಬುರಗಿ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಸಾಂಕ್ರಾಮಿಕ ಮಹಾಮಾರಿ ಕೋವಿಡ್ ಆರ್ಥಿಕ ಸಂಕಷ್ಟದ ಸಂದರ್ಭದಲ್ಲೂ ಕಲಬುರಗಿ ನಗರದಲ್ಲಿ ’ರಾಜಭಾಷಾ ಕಲಬುರಗಿ’ ಎಂಬ ಹಿಂದಿ ಪತ್ರಿಕೆಯಲ್ಲಿ ಅತ್ಯಂತ ಜವಾಬ್ದಾರಿಯಿಂದ ಲೇಖನಗಳನ್ನು ಸಂಗ್ರಹಿಸಿ ಪತ್ರಿಕೆ ಓದುಗರಿಗೆ ಕೈಗೆಟಕಿಸುವಲ್ಲಿ ಸಂಪಾದಕರಾದ ಡಾ.ಹೀರಾಸಿಂಗ್ ರಾಠೋಡ ಹಾಗೂ ಉಪಸಂಪಾದಕರಾದ ಸುಧೀರ್ ಕುಮಾರ್ ಶರ್ಮಾ ಅವರ ಕಾರ್ಯ ವೈಖರಿ ಕುರಿತು ಶ್ಲಾಘಿಸಿದರು.

Contact Your\'s Advertisement; 9902492681

ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಬಿ.ಎಸ್.ಎನ್.ಎಲ್ ಕಚೇರಿಯಲ್ಲಿ ಉಪ ಮಂಡಲ ಅಭಿಯಂತರಾದ ಡಾ.ಹೀರಾಸಿಂಗ್ ರಾಠೋಡ ಅವರು, ಸುಮಾರು ೪೧ ವ?ಗಳವರೆಗೆ ಬಿ.ಎಸ್.ಎನ್.ಎಲ್ ಹಾಗೂ ’ರಾಜಭಾ?’ ಹಿಂದಿಯ ಸೇವೆ ಸಲ್ಲಿಸಿ ತಮ್ಮ ಸೇವಾ ಅನುಭವದಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಹಿರಿಯ-ಕಿರಿಯ ಅಧಿಕಾರಿಗಳಿಗೂ ಧನ್ಯವಾದ ತಿಳಿಸಿದರು. ಭವಿ?ದಲ್ಲಿ ಬಿ.ಎಸ್.ಎನ್.ಎಲ್ ಸೇವೆಯನ್ನು ಉತ್ತಮಗೊಳಿಸಿ ತನ್ನ ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕು ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಪ ಮಹಾಪ್ರಬಂಧಕ ಅನಂತರಾಮ ಚೌದ್ರಿ ಅವರು ಡಾ.ಹೀರಾಸಿಂಗ್ ರಾಠೋಡ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ಕರ್ಮಚಾರಿ ಪ್ರೀತಿ ಮೋಹನ್‌ರಾವ್, ಸಹಾಯಕ ಮಹಾಪ್ರಬಂಧಕರಾದ ಸುನೀಲ್ ಗಣಪತಿ, ಅನೀಲ್ ಕುಮಾರ್ ಕೆ.ಸಿ., ನಿವೃತ್ತ ಲೇಖಾಧಿಕಾರಿ ಜಿ.ಎಸ್.ಹೂಗಾರ್, ಉಪ ಮಂಡಲದ ಅಭಿಯಂತರರಾದ ಅಶೋಕ್ ಖಂಡಿ ಸೇರಿದಂತೆ ಇನ್ನಿತರ ಅಧಿಕಾರಿಗಳು, ಕರ್ಮಚಾರಿಗಳು ಹಾಗೂ ಡಾ.ಹೀರಾಸಿಂಗ್ ರಾಠೋಡ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here