ಕುಂಬಾರ ಸಮುದಾಯಕ್ಕೆ ಕೋವಿಡ್ ನೆರವಿನ ಕಿಟ್‍ಗಳ ವಿತರಣೆ

0
8

ಸುರಪುರ: ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕರಿಗೆ ಸರಕಾರ ನೀಡಿರುವ ದಿನಸಿ ಕಿಟ್‍ಗಳನ್ನು ಕುಂಬಾರ ಸಮುದಾಯದ ಜನರಿಗೆ ವಿತರಣೆ ಮಾಡಲಾಯಿತು.

ನಗರದ ರಂಗಂಪೇಟೆಯ ಕುಂಬಾರ ಓಣಿಯ ಬಳಿ ನಿರ್ಮಿಸಲಾಗಿರುವ ಸಮುದಾಯ ಭವನದಲ್ಲಿ ಶುಕ್ರವಾರ ಸಂಜೆ ನಡೆದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರ್ಮಿಕ ಬಂಧು ಬಸವರಾಜ ಪೂಜಾರಿ ಮಾತನಾಡಿ,ಸರಕಾರ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಮತ್ತು ಅಸಂಘಟಿತ ಕಾರ್ಮಿಕರಿಗೆ ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಕಾರ್ಮಿಕರು ತೊಂದರೆಗೆ ಸಿಲುಕಿದ್ದಾರೆಂದು ದಿನಸಿ ಕಿಟ್‍ಗಳನ್ನು ನೀಡುವ ಮೂಲಕ ಅಸಂಘಟಿತ ಕಾರ್ಮಿಕ ಕುಟುಂಬಗಳಿಗೆ ನೆರವಾಗಿದೆ.ಆದ್ದರಿಂದ ಈಗ ಅಸಂಘಟಿತ ವಲಯದಲ್ಲಿರುವ ಕುಂಬಾರ ಸಮುದಾಯಕ್ಕೂ ಕಿಟ್‍ಗಳು ಬಂದಿದ್ದು ಅವುಗಳನ್ನು ವಿತರಣೆ ಮಾಡಲಾಗುತ್ತಿದೆ.ಆಯ್ದ ಕುಟುಂಬಗಳಿಗೆ ಕಿಟ್‍ಗಳು ನೀಡಲಾಗುತ್ತಿದ್ದು,ಇವುಗಳನ್ನು ಪಡೆದುಕೊಂಡು ಸರಕಾರದ ನೆರವನ್ನು ಸದುಪಯೋಗ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

Contact Your\'s Advertisement; 9902492681

ನಂತರ ಸಾಂಕೇತಿಕವಾಗಿ ಕೆಲವರಿಗೆ ಕಿಟ್‍ಗಳನ್ನು ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಮತ್ತೋರ್ವ ಕಾರ್ಮಿಕ ಬಂಧು ರಾಜು ಕಲಾಲ ಮತ್ತು ಬಸವರಾಜ ಪೂಜಾರಿಯವರಿಗೆ ಕುಂಬಾರ ಸಮುದಾಯದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಕುಂಬಾರ ಸಂಘದ ಅಧ್ಯಕ್ಷ ರಾಜು ಕುಂಬಾರ,ಉಪಾಧ್ಯಕ್ಷ ಸಾಹೇಬಗೌಡ ಕುಂಬಾರ,ಪ್ರಧಾನ ಕಾರ್ಯದರ್ಶಿ ಭೀಮರಾಯ ಕುಂಬಾರ,ನಗರಯೋಜನಾ ಪ್ರಾಧಿಕಾರದ ಸದಸ್ಯ ವೀರಭದ್ರಪ್ಪ ಕುಂಬಾರ,ಮುಖಂಡರಾದ ಅಮರೇಶ ಕುಂಬಾರ,ವಕ್ತಾರ ನಿಂಗಣ್ಣ ವಡಗೇರಿ,ನಗರಸಭೆ ಮಾಜಿ ಸದಸ್ಯ ಮಲ್ಲಪ್ಪ ಹುಬ್ಬಳ್ಳಿ,ಅಮರೇಶ ಪಾನ ಶಾಪ್,ಆನಂದ ಕುಂಬಾರ,ಬಸವರಾಜ ಕುಂಬಾರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here