ಸಾಹಿತ್ಯ ಸಾರಥಿ ಪ್ರಶಸ್ತಿ ಪ್ರದಾನ

0
95

ಕಲಬುರಗಿ: ಜಿಲ್ಲೆಯ ಅನೇಕ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮಾಡುವ ಮೂಲಕ ಬಿ ಎಚ್ ನಿರಗುಡಿ ಅವರು ಸದಾ ಕನ್ನಡದ ಕಂಪು ಹರಿಸುತ್ತಿದ್ದಾರೆ.ಇವರನ್ನು ಮುಂಬರುವ ಕಲಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಚುನಾಯಿಸಬೇಕೆಂದು ಅವರು ಜಿಲ್ಲೆಯ ಸಾಹಿತ್ಯ ಪರಿಷತ್ತಿನ ಸದಸ್ಯರಿಗೆ ಕರೆ ನೀಡಿದರು.

ಇಂದು ಅವರು ರಂಗಾಯಣದಲ್ಲಿ ನಡೆದ ನಿರಗುಡಿ ಅವರ ಸಾಹಿತ್ಯ ಸಾರಥಿ ಪತ್ರಿಕೆಯ ನಾಲ್ಕನೇ ವಾರ್ಷಿಕೋತ್ಸವದ ಉದ್ಘಾಟನೆ ಮಾಡಿ ವಿಶೇಷ ಸಂಚಿಕೆ ಹಾಗೂ ಹನ್ನೆರಡು ಜನ ಸಾಧಕರಿಗೆ ಸಾಹಿತ್ಯ ಸಾರಥಿ ಪ್ರಶಸ್ತಿ ನೀಡುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾಂಸ್ಕೃತಿಕ ಮನಸ್ಸುಗಳಿಗೆ ವಿನಂತಿಸಿದರು. ಮುಂದುವರಿದು ಇಂತಹ ವ್ಯಕ್ತಿಗಳಿಂದ ಜಿಲ್ಲೆಯ ತುಂಬಾ ನಿರಂತರವಾಗಿ ಸಾಹಿತ್ಯ ಚಟುವಟಿಕೆ ನಡೆಯುತ್ತಿರುವುದು ಅಭಿಮಾನದ ಸಂಗತಿ ಅಂತ ತಿಳಿಸಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಹನ್ನೆರಡು ಜನ ಸಾಧಕರಿಗೆ ಪ್ರಶಸ್ತಿ ಪ್ರದಾನವನ್ನು ಶರಣಬಸವೇಶ್ವರ ವಿವಿಯ ಕುಲಸಚಿವ ರಾದ ಲಿಂಗರಾಜ ಶ್ಯಾಸ್ತ್ರಿಯವರು ನೆರವೇರಿಸಿದರು.ನಮ್ಮ ಜಿಲ್ಲೆಯ ಅನೇಕ ಪ್ರತಿಭಾವಂತರಿಗೆ,ಹಿರಿಯರಿಗೆ, ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪುರಸ್ಕಾರ ನೀಡುವ ಈ ಕೆಲಸ ಸ್ಲಾಘನೀಯವಾಗಿದೆ. ಸಾಹಿತ್ಯ ಸಾರಥಿ ಮೂಲಕ ಅನೇಕ ಪ್ರತಿಭೆಗಳಿಗೆ ಬೆಳೆಯಿಸುವ ಕೆಲಸ ಸಹ ಮಾಡುತ್ತಿದ್ದಾರೆ.ನಿರಗುಡಿ ಅವರಿಗೆ ನಾವು ಸದಾ ಜೊತೆ ಇದ್ದು ಎಲ್ಲಾ ರೀತಿಯಲ್ಲೂ ಸಹಕರಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರ ಗ್ರಂಥಾಲಯ ನಿರ್ದೇಶಕರಾದ ಡಾ.ಸತೀಶ ಹೊಸಮನಿಯವರಿಗೆ ಅವರು ಇಡೀ ದೇಶದಲ್ಲೇ ಗ್ರಂಥಾಲಯ ಡಿಜಿಟಲಿಕರಣ ಮಾಡಿದ ಸಾಧನೆಗಾಗಿ ಈ ಸಾಹಿತ್ಯ ಸಾರಥಿ ಪುರಸ್ಕಾರ ನೀಡಿ ಅವರಿಗೆ ಗೌರವಿಸಲಾಯಿತು.ಅವರು ಮುಖ್ಯ ಅತಿಥಿಯಾಗಿ ಸಹ ಕಾರ್ಯಕ್ರಮ ಪಾಲ್ಗೋಂಡಿದ್ದರು.

ಅವರು ಮಾತನಾಡಿ ನಿರಗುಡಿ ಅವರ ಈ ಕಾರ್ಯ ಶ್ಲಾಘನೀಯ ಎಂದರು.ಇಂತಹ ನಿಷ್ಕಾಮ ಸೇವೆ ಸಲ್ಲಿಸುವ ನಿರಗುಡಿಯವರು ಇನ್ನೂ ಎತ್ತರಕ್ಕೆ ಏರಲಿದ್ದಾರೆ ಎಂದು ಶುಭ ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆ ಪ್ರಭಾಕರ ಜೋಶಿ ನಿರ್ದೇಶಕರು ರಂಗಾಯಣ ವಹಿಸಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು “ಸಾಹಿತ್ಯಕ್ಷೇತ್ರ” ಡಾ. ಸ್ವಾಮಿರಾವ್ ಕುಲಕರ್ಣಿ, ಡಾ ಕಲ್ಯಾಣರಾವ್ ಪಾಟೀಲ್, ಪ್ರೊ ವಿಜಯ್ ಕುಮಾರ್ ಪರುತೆ . ” ಪತ್ರಿಕಾ ಕ್ಷೇತ್ರ ” ದೇವಯ್ಯ ಗುತ್ತೇದಾರ, ವೈದ್ಯ ಕ್ಷೇತ್ರ ಡಾ. ಎಸ್.ಎಸ್.ಗುಬ್ಬಿ, ರಂಗಭೂಮಿ ಎಚ್.ಎಸ್.ಬಸವಪ್ರಭು , ಶಿಕ್ಷಣ ಕ್ಷೇತ್ರ ಮಲ್ಲಯ್ಯ ಗುತ್ತೇದಾರ್, ಸಮಾಜಸೇವೆ ಸಿದ್ದಪ್ಪ ತಳ್ಳಳ್ಳಿ, ಉಮೇಶ್ ಶೆಟ್ಟಿ, ಗ್ರಂಥಾಲಯ ಡಾ. ಸತೀಶ್ ಕುಮಾರ್ ಹೊಸಮನಿ, ” ಸಂಗೀತ ಕ್ಷೇತ್ರ “ಅಮರ ಪ್ರಿಯ ಹಿರೇಮಠ್, “ಚಿತ್ರ ಕಲಾಕ್ಷೇತ್ರ ” ಮಂಜುಳಾ ಜಾನೆ, ಇವರ ಸಮಗ್ರ ಸಾಧನೆಯನ್ನು ಪರಿಗಣಿಸಿ ಇವರನ್ನು ಸಾಹಿತ್ಯ ಸಾರಥಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಆರಂಭದಲ್ಲಿ ಸಂಪಾದಕರಾದ ಬಿ.ಎಚ್.ನಿರಗುಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕನ್ನಡದ ವಿಭಿನ್ನ ವೈಶಿಷ್ಟ್ಯಗಳ ಕಾರ್ಯಕ್ರಮವನ್ನು ಮಾಡುತ್ತಿದ್ದೇನೆ.ಇನ್ನೂ ಹೆಚ್ಚಿನ ಸಾಹಿತ್ಯಿಕ ಸೇವೆ ಮಾಡುವ ಅವಕಾಶ ಒದಗಿಸಿಕೊಡಿ ಎಂದು ಬಿ.ಎಚ್.ನಿರಗುಡಿ ಜಿಲ್ಲೆಯ ಸಾಹಿತ್ಯ ಪರಿಷತ್ತಿನ ಸದಸ್ಯರಿಗೆ ವಿನಂತಿಸಿದರು. ಕಾರ್ಯಕ್ರಮವನ್ನು ಶರಣಬಸಪ್ಪ ವಡ್ಡನಕೇರಿ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಪಿ.ಎಂ.ಮಣ್ಣೂರು, ಸಿದ್ಧರಾಮ ಹೊನ್ಕಲ್,ಡಾ.ಎಚ್.ಟಿ.ಪೋತೆ,ಡಾ.ಕಾಶಿನಾಥ ಅಂಬಲಗೆ,ಜರಣಪ್ಪ ಚಿಂಚೋಳಿ,ಲಿಂಗಾರೆಡ್ಡಿ ಸೇರಿ, ಮಹಿಪಾಲರೆಡ್ಡಿ ಮುನ್ನೂರು,ಎಸ್.ಪಿ.ಸುಳ್ಳದ, ನಾಗಪ್ಪ ಹೊನ್ನಳ್ಳಿ,ಡಾ ಸುಜಾತಾ ಜಂಗಮಶೆಟ್ಟಿ,ಡಾ.ಶೋಭಾದೇವಿ ಚೆಕ್ಕಿ,ಶಿವಯ್ಯ ಸ್ವಾಮಿ ದಿಬ್ಬಳ್ಳಿ,ನಾಗಯ್ಯಸ್ವಾಮಿ ಬೊಮ್ಮನಹಳ್ಳಿ ಮುಂತಾದ ನೂರಾರು ಗಣ್ಯರು ಭಾಗವಹಿಸಿದ್ದರು. ಕಿರಣ್ ಪಾಟೀಲ,ಚಾಮರಾಜ ದೊಡ್ಡಮನಿ,ಗೀತ ಗಾಯನ ಮಾಡಿದರು.ಆರಂಭದಲ್ಲಿ ಅಕ್ಷತಾ ಕುಲಕರ್ಣಿ ಪ್ರಾರ್ಥಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here