ಆರೋಗ್ಯದ ಅರಿವು: ಗ್ರಾಮ ಸಭೆ

0
121

ಅಫಜಲಪುರ:ತಾಲ್ಲೂಕಿನ ಗೊಬ್ಬರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೊಂದಿಕೊಂಡ  ಹೂವಿನಳ್ಳಿ ಗ್ರಾಮದಲ್ಲಿ ಗ್ರಾಮ ಸಭವು , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  ಹಾಗೂ ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಲಬುರಗಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಗೊಬ್ಬರ್ ಸಂಯುಕ್ತ ಆಶ್ರಯದಲ್ಲಿ ಆರೋಗ್ಯದ ಅರಿವು ಗ್ರಾಮದ ಕಡೆ ಗ್ರಾಮ ಸಭೆ ಬಂದರವಾಡ ಉಪ ಕೇಂದ್ರ ಹೂವಿನಳ್ಳಿ ಗ್ರಾಮದಲ್ಲಿ ಇಂದು ಗ್ರಾಮಸಭಾ ಜರುಗಿತು ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ರೂಪಾ ಪ್ರಭುಲಿಂಗ ವಹಿಸಿದ್ದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗ್ರಾಮದ ಚುನಾಯಿತ ಪ್ರತಿನಿಧಿಗಳು ಗ್ರಾಮದ ಹಿರಿಯರು ಸರಕಾರಿ ಪ್ರಾಥಮಕ ಶಾಲಾ ಮುಖ್ಯ ಗುರುಗಳು ಜಿಲ್ಲಾ ಮಲೇರಿಯಾ ಘಟಕದ ಸಿಬ್ಬಂದಿಗಳು ಪ್ರಾಥಮಿಕ ಆರೋಗ್ಯ ಸಿಂಬ್ಬದಿಗಳು ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಪ್ರಾಥಮಿಕ ಆರೋಗ್ಯ ಕೇಂದ್ರ ಗೊಬ್ಬುರ್ (ಬಿ)  ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಶಶಿಧರ್ ಬಾಳೆ ಸ್ವಾಗತಿಸಿ ಪ್ರಸ್ತಾವಿಕ ನುಡಿಯನ್ನು ಆಡಿದರು ಆದನಂತರ ಜಿಲ್ಲೆಯ ಕೀಟ ಶಾಸ್ತ್ರಜ್ಞ ರಾದ ಚಾಮರಾಜ ದೊಡ್ಡಮನಿ ಸೊಳ್ಳೆಗಳಿಂದ ಹರಡುವ ಚಿಕನ್‌ಗುನ್ಯಾ, ಡೇಂಗ್ಯೂ ರೋಗದ ಕುರಿತು ಸವಿಸ್ತಾರವಾದ ಮಾಹಿತಿ ನೀಡಿದರು ಸೊಳ್ಳೆಗಳ ಕಡಿತದಿಂದ ದೂರ ಇರಬೇಕೆಂದು ತಿಳಿ ಹೇಳಿದರು ನಂತರ ಜಿಲ್ಲೆಯ ಗಣೇಶ್ ಚಿನ್ನಾಕರ್ ಮಾತನಾಡಿ ಸೊಳ್ಳೆಗಳಿಂದ ಹರಡುವ ರೋಗಗಳ ಮುಂಜಾಗ್ರತಾ ಕ್ರಮಗಳ ಮಾಹಿತಿ ನೀಡಿದರು.

Contact Your\'s Advertisement; 9902492681

ನಂತರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಹಾಜಿ ಮಲಂಗ್ ಅವರು ಮಾತನಾಡಿ ಧೂಮೀಕರಣ ಮಾಡಿಸುವುದಾಗಿ ಸಭೆಯಲ್ಲಿ ತಿಳಿಸಿದರು. ಇಂದು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ನಿಯೋಜಿಸಲು ಪಟ್ಟ ಸಿಬ್ಬಂದಿಗಳು ಸ್ಥಳದಲ್ಲಿ ಚಿಕಿತ್ಸೆ ನೀಡಿ ಲಕ್ಷಣಗಳ ಆಧಾರದ ಮೇಲೆ 52 ರೋಗಿಗಳನ್ನು ಡಾಕ್ಟರ್ ಜ್ಯೋತಿ ಮುಳುಜೆ ಚಿಕಿತ್ಸೆ ನೀಡಿದರು.

ಪ್ರಮುಖರಾದ ಜಿಲ್ಲಾ ವಿಬಿ ಡಿಸಿಪಿ ಮೇಲ್ವಿಚಾರಕ ಕಾರಣಿಕ ಕೋರೆ ಜಿಲ್ಲಾ ನಿರೀಕ್ಷಿಣಾಧಿಕಾರಿ ಸಿದ್ದರೂಢ ಸಂಗೋಳಗಿ. ಸಮುದಾಯ ಆರೋಗ್ಯ ಅಧಿಕಾರಿ ಬಂದರವಾಡ ಭುವನೇಶ್ವರಿ, ಲಕ್ಷ್ಮಿಕಾಂತ ಲಾಲಿ, ರಾಜಶೇಖರ್ ಬಿರಾದರ್, ಗುರು ಗಂಟೆ, ರವಿಕಿರಣ್ ತಪಾಸಣ ತಂಡದಲ್ಲಿದ್ದರು, ಅಜಿಂ ಪ್ರೆಂಜಿ ಫೌಂಡೇಶನ್ ರಾಜಶೇಖರ್, ಯೂಸುಫ್ ಮತ್ತು ಉಪ ಕೇಂದ್ರದ ಸಿಬ್ಬಂದಿಗುಂಡಪ್ಪ, ಗ್ರಾಮ ಸಭೆಯಲ್ಲಿ ಗ್ರಾಮದ ಮುಖಂಡರು ಸದಸ್ಯರು, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಸಭೆಯಲ್ಲಿ ಭಾಗವಹಿಸಿದ್ದರು.

ವಿಶೇಷವಾಗಿ ಕೋವಿಡ್ ವ್ಯಾಕ್ಸಿನೇಷನ್‌ 18 ವರ್ಷ ಮೇಲ್ಪಟ್ಟವರು ತಪ್ಪದೆ ಕೋವಿಡ್ ಲಸಿಕೆ ಹಾಕಿಕೊಳ್ಳುವಂತೆ ಪ್ರಚಾರ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here