ಮಹಿಳೆ ಹತ್ಯೆ ಖಂಡಿಸಿ ಡಿಎಸ್‌ಎಸ್ ಪಂಜಿನ ಮೆರವಣಿಗೆ

0
23

ಸುರಪುರ: ತಾಲೂಕಿನ ಚೌಡೇಶ್ವರಿಹಾಳ ಗ್ರಾಮದಲ್ಲಿ ದುಷ್ಕರ್ಮಿಯೊಬ್ಬ ಪೆಟ್ರೋಲ್ ಸುರಿದು ಮಹಿಳೆಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದ ಘಟನೆ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣ ಶನಿವಾರ ರಾತ್ರಿ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿ ಘಟನೆಯನ್ನು ಖಂಡಿಸಿದರು.ನಗರದ ಮಹಾತ್ಮ ಗೌತಮ್ ಬುದ್ಧನ ವೃತ್ತದಿಂದ ದರಬಾರ ಮಾರ್ಗವಾಗಿ ವೇಣುಗೋಪಾಲಸ್ವಾಮಿ ದೇವಸ್ಥಾನ ಮೂಲಕ ಮಹಾತ್ಮ ಗಾಂಧಿ ವೃತ್ತದವರೆಗೆ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಲ್ಲರು ಘಟನೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ,ಕಳೆದ ಐದು ದಿನಗಳ ಹಿಂದೆ ಚೌಡೇಶ್ವರಿಹಾಳ ಗ್ರಾಮದಲ್ಲಿ ಅತ್ಯಾಚಾರಕ್ಕೆ ಯತ್ನಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ಗೂಂಡಾಗಳನ್ನು ಬಂಧಿಸಬೇಕು ಮತ್ತು ಇಂತಹ ಘಟನೆ ನಡೆಯಲು ಪೊಲೀಸರ ವೈಫಲ್ಯ ಕಾರಣವಾಗಿದೆ.ಜಿಲ್ಲೆಗೆ ಈಗಿನ ಎಸ್ಪಿಯವರು ಬಂದಾಗಿನಿಂದ ಮಹಿಳೆಯರ ಮೇಲೆ ಅತ್ಯಾಚಾರದಂತಹ ಘಟನೆಗಳು ಹೆಚ್ಚಿವೆ,ಅಲ್ಲದೆ ಸುರಪುರ ಡಿವೈಎಸ್ಪಿಯವರು ಸರಿಯಾಗಿ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ.

Contact Your\'s Advertisement; 9902492681

ಆದ್ದರಿಂದ ಎಸ್ಪಿ ಮತ್ತು ಡಿವೈಎಸ್ಪಿಯವರನ್ನು ವರ್ಗಾವಣೆ ಮಾಡಬೇಕೆಂದರು.ಅಲ್ಲದೆ ಹಲ್ಲೆಗೊಳಗಾದ ಎಲ್ಲಾ ಮಹಿಳೆಯರಿಗೆ ಪರಿಹಾರ ನೀಡಬೇಕು,ಚೌಡೇಶ್ವರಿಹಾಳ ಗ್ರಾಮದ ಹತ್ಯೆಗೊಳಗಾದ ಮಹಿಳೆಯ ಕುಟುಂಬಕ್ಕೆ ಸರಕಾರಿ ನೌಕರಿ ನೀಡಬೇಕು ಮತ್ತು ಜಮೀನು ನೀಡಬೇಕೆಂದು ಆಗ್ರಹಿಸಿದರು.ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ ಕಚೇರಿ ಸಿರಸ್ತೆದಾರರ ಮೂಲಕ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮಾನಪ್ಪ ಬಿಜಾಸಪುರ,ಮಹಾದೇವಪ್ಪ ಬಿಜಾಸಪುರ,ಜೆಟ್ಟೆಪ್ಪ ನಾಗರಾಳ,ರಾಮಣ್ಣ ಶೆಳ್ಳಗಿ,ಬಸವರಾಜ ದೊಡ್ಮನಿ,ಖಾಜಾಹುಸೇನ ಗುಡಗುಂಟಿ,ಮಲ್ಲೇಶಿ ಹೊಸ್ಮನಿ,ಹುಲಗಪ್ಪ ಜಾಂಗೀರ,ಭಾಗಪ್ಪ ದೇವಿಕೇರಿ,ಯಂಕಪ್ಪ ದೇವಿಕೇರಿ,ರಾಮಣ್ಣ ಬಬಲಾದ,ಹಣಮಂತ ನರಸಿಂಗಪೇಟ,ಮಹೇಶ ಯಾದಗಿರಿ,ಮಲ್ಲಪ್ಪ ಬಡಿಗೇರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here