ಸುರಪುರ: ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಕಳೆದ ತಿಂಗಳು ಕಿಡಿಗೇಡಿಗಳು ಬುದ್ಧನ ಮೂರ್ತಿಯನ್ನು ಧ್ವಂಸಗೊಳಿಸಿದ್ದರು,ಇದರಿಂದ ಬುದ್ಧ ವಿಹಾರದಲ್ಲಿ ನೂತನ ಬುದ್ಧನ ಕಂಚಿನ ಮೂರ್ತಿ ಪ್ರತಿಷ್ಠಾಪನೆಗೆ ಎಲ್ಲಾ ದಲಿತ ಮತ್ತು ಪ್ರಗತಿಪರ ಸಂಘಟಕರು ನೂತನ ಪ್ರತಿಷ್ಠಾಪನೆಗೆ ಮುಂದಾಗಿದ್ದರು.ಅದರಂತೆ ಭಾನುವಾರ ಬುದ್ಧ ವಿಹಾರದಲ್ಲಿ ಸಭೆ ನಡೆಸಿ ಇದೇ ಅಕ್ಟೋಬರ್ ೧೪ ರಂದು ನೂತನ ಮೂರ್ತಿ ಪ್ರತಿಷ್ಠಾಪನೆಗೆ ದಿನಾಂಕ ನಿಗದಿಪಡಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ,೧೪ನೇ ತಾರೀಖು ನಡೆಯುವ ಕಾರ್ಯಕ್ರಮದ ಕುರಿತು ಈಗಾಗಲೇ ವರಜ್ಯೋತಿ ಭಂತೇಜಿಯವರು ಮಾರ್ಗದರ್ಶನ ಮಾಡಿದಂತೆ,ಅಂದು ಬೆಳಿಗ್ಗೆ ೮ ಗಂಟೆಗೆ ನಗರದ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ ಮೊದಲಿಗೆ ಪಂಚಶೀಲ ಧ್ವಜಾರೋಹಣ ನೆರವೇರಿಸಿ ನಂತರ ಐದು ಜನ ಭಂತೇಜಿಗಳಿಂದ ಬುದ್ಧನ ಮೂರ್ತಿಗೆ ಪೂಜೆ ಸಲ್ಲಿಸಿ ನಂತರ ಮೂರ್ತಿಯನ್ನು ಎಲ್ಲಾ ಭಂತೇಜಿಗಳು ಹಾಗು ಉಪಾಸಕರ ಸಹಭಾಗಿತ್ವದಲ್ಲಿ ನಗರದ ಪ್ರಮುಖ ರಸ್ತೆಗಳ ಮೂಲಕ ಮೌನ ಮೆರವಣಿಗೆ ನಡೆಸಿ ಬುದ್ಧ ವಿಹಾರಕ್ಕೆ ತರಲಾಗುವುದು ಎಂದು ತಿಳಿಸಿದರು. ನಂತರ ಮೂರ್ತಿ ಪ್ರತಿಷ್ಠಾಪನೆ ಜರುಗಲಿದೆ ಎಂದರು.
ಸಭೆಯಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಕ್ರಾಂತಿ,ಮಾನಪ್ಪ ಕಟ್ಟಿಮನಿ,ವೆಂಕಟೇಶ ಹೊಸ್ಮನಿ,ನಾಗಣ್ಣ ಕಲ್ಲದೇವನಹಳ್ಳಿ,ಮಲ್ಲಿಕಾರ್ಜುನ ಸತ್ಯಂಪೇಟೆ,ಅಹ್ಮದ್ ಪಠಾಣ್,ಮಾಳಪ್ಪ ಕಿರದಹಳ್ಳಿ,ರಾಹುಲ್ ಹುಲಿಮನಿ,ಭೀಮರಾಯ ಸಿಂದಗೇರಿ,ಉಸ್ತಾದ್ ವಜಾಹತ್ ಹುಸೇನ್, ಲಾಲಪ್ಪ ಹೊಸ್ಮನಿ,ಮಾನಪ್ಪ ಬಿಜಾಸಪುರ,ಮಹ್ಮದ್ ಮೌಲಾ ಸೌದಾಗರ್,ಶ್ರೀಮಂತ ಚಲುವಾದಿ,ರಮೇಶ ಅರಕೇರಿ, ಧರ್ಮಣ್ಣ ಬಡಿಗೇರ,ಶರಣಪ್ಪ ತಳವಾರಗೇರಾ,ತಿಪ್ಪಣ್ಣ ಪಾಟೀಲ್,ವಿಶ್ವನಾಥ ಹೊಸ್ಮನಿ,ಶಿವಶಂಕರ ಬೊಮ್ಮನಹಳ್ಳಿ ಸೇರಿದಂತೆ ಅನೇಕರಿದ್ದರು.