ಮಹಾಪುರಾಣ, ಪ್ರವಚನ, ಆಧ್ಯಾತ್ಮಿಕ ಕಾರ್ಯಕ್ರಮ

0
39

ಕಲಬುರಗಿ: ಮನುಷ್ಯನು ತನ್ನ ಒಳ್ಳೆಯ ಕಾರ್ಯದೊಂದಿಗೆ ಉತ್ತಮ ವಿಚಾರಗಳನ್ನು ಎತ್ತರಿಸಬೇಕೆ  ವಿನಃ ನಮ್ಮ ಧ್ವನಿಯಲ್ಲಾ ಏಕೆಂದರೆ ಮಳೆ ನೀರಿನಿಂದ ಮರಗಳು ಬೆಳೆಯುತ್ತವೆ ಹೊರತು ಗುಡುಗು ಸಿಡಿಲಿನಿಂದಲ್ಲಾ  ಎಂದು ಖ್ಯಾತ ಪುರಾಣ ಪಟುಗಳಾದ ಸಂಗಮೇಶ ಶಾಸ್ತ್ರಿ ಮಾಷಾಳ ಹೇಳಿದರು.

ನಗರದ ಚನ್ನವೀರ ನಗರದಲಿೢ ಅಂಬಾಭವಾನಿ ದೇವಸ್ಥಾನದ ಆವರಣದಲ್ಲಿ ಮಹಾನವಮಿ ಹಬ್ಬದ ನಿಮಿತ್ಯ ಜೈ ಭವಾನಿ ನವ ಯುವಕ ತರುಣ ಸಂಘ ಆಯೋಜಿಸಿದ  ಸೊಲ್ಲಾಪುರದ ಸಿದ್ದರಾಮೇಶ್ವರ  ಮಹಾಪುರಾಣವನ್ನು ಹೇಳುತ್ತಾ ಪುರಾಣ, ಪ್ರವಚನ, ಆಧ್ಯಾತ್ಮಿಕದ ಕಾರ್ಯಕ್ರಮಗಳಿಂದ ನಯ, ವಿನಯ, ಪ್ರೀತಿ, ಪ್ರೇಮ ಒಬ್ಬರಿಗೊಬ್ಬರ ಆತ್ಮೀಯತೆ ಬೆಳೆದು ಸಂಸ್ಕಾರ ಸಮಾಜ ನಿರ್ಮಿಸಬಹುದು  ಆದರೆ ಸಿಟ್ಟು, ಮೋಸ, ವಂಚನೆ ಹಾಗೂ ತಿರಸ್ಕಾರಗಳಿಂದ ಸಮಾಜ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.

Contact Your\'s Advertisement; 9902492681

ಪುರಾಣದಲ್ಲಿ ಬರುವ ಹಲವಾರು ಅದ್ಭುತ ವಿಚಾರಗಳು ತಮ್ಮ ಜೀವನದಲಿೣ ಅಳವಡಿಸಿಕೊಂಡು ಮಕ್ಕಳಿಗೆ, ಹಿರಿಯರು ಆದರ್ಶವಾಗಬೇಕೆಂದು ಮಾರ್ಮಿಕವಾಗಿ ನುಡಿದರು. ಗವಾಯಿಗಳಾದ ಶಾಂತಕುಮಾರ ಸಾವಳಗಿ ಹಾಗೂ  ಶಂಭುಲಿಂಗ ಪಾಟೀಲ ದುಧನಿ ತಬಲಾ ಸಾಥ   ನೀಡಿದರು.ಕಲಾವಿದರಾದ ರಾಜು ಹೆಬ್ಬಾಳ, ಮಹೇಶ ತೆಲೆಕುಣಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸುರೇಶ ಹನಗುಡಿ, ಯುವ ಮುಖಂಡರಾದ ಚನ್ನು ಲಿಂಗನವಾಡಿ,ಸಭೆ ಸಂಚಾಲಕರಾದ ಶಿವರಾಜ ರೇವೂರ,  ಬಸವರಾಜ ಹೊಡಲ, ಶೇಖರ ಗರಡನ, ಗೌರಿಶ೦ಕರ ಕುಂಬಾರ, ರೇವಣಸಿದ್ದಪ್ಪ ಕುಂಬಾರ,ಶರಣು ಬಡದಾಳ, ಶರಣು ಮುನ್ನಳ್ಳಿ,  ಶರಣು ಹರಸುರ, ಶರಣು ಸಾಲ೦ಕಿ, ವಿಶ್ವನಾಥ  ತಾಂಬಾ, ಚಂದಣ್ಣ ಬಶೆಟ್ಟಿ, ಮಲ್ಲಿನಾಥ ರೇವುರ, ಸಾಗರ  ಜಿಡಗಾ, ಅನಿಲ ಸ್ವಾಮಿ, ಅರುಣ ಸಲಗರ, ಹಣಮಂತರಾಯ ಗೋಳಾ, ಭಗವಂತ ಹೇರೂರ, ಶರಣು ರೇವೂರ ಹಾಗೂ ಬಡಾವಣೆಯ ಹಿರಿಯರಾದ ಹಿರಗಣ್ಣಾ ಪೂಜಾರಿ, ಪುಂಡಲೀಕ ಶಿಂಧೆ, ಬಸವರಾಜ ಭೈರಾಮಡಗಿ,ಮಡಿವಾಳಯ್ಯ ಸ್ವಾಮಿ ಶ್ರೀಚ೦ದ,  ಹಣಮಂತರಾಯ ಉಮ್ಮರಗಿ, ಚಂದ್ರಕಾಂತ ಘಾಣೂರೆ, ಬಸವರಾಜ ರೇವೂರ, ಮಲ್ಲಿಕಾರ್ಜುನ  ಸುರಪೂರ, ಯಶವಂತರಾವ ರೇವೂರ, ಮಹಾದೇವಪ್ಪ ಬಡದಾಳ, ಅಣ್ಣಪ್ಪ ಮುನ್ನಳ್ಳಿ,ಅಪ್ಪಾರಾವ ಮುನ್ನಳ್ಳಿ,  ನಾಗಣ್ಣ ಕುಂಬಾರ  ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here