ಪೆಟ್ರೋಲ್ ಬಂಕ್ ಸ್ಥಳಾಂತರಕ್ಕೆ ಆಗ್ರಹಿಸಿ ಜೈಕನ್ನಡಿಗರ ಸೇನೆ ಪ್ರತಿಭಟನೆ

0
14

ಕಲಬುರಗಿ: ವಾರ್ಡ ನಂ.೪೯ರಲ್ಲಿ ಬರುವ ನಗರದ ಹಳೆ ಜೇವರ್ಗಿ ರಸ್ತೆ ರೈಲ್ವೆ ಕೆಳ ಸೇತುವೆ ಮುದ್ದಿ ಹನುಮಾನ ದೇವಸ್ಥಾನದ ಹತ್ತಿರ ನಿರ್ಮಾಣ ಮಾಡಲಾಗುತ್ತಿರುವ ಪೆಟ್ರೋಲ್  ಬಂಕ್ ಇಲ್ಲಿಂದ ಸ್ಥಳಾಂತರಿಸುವಂತೆ ಆಗ್ರಹಿಸಿ ಜೈಕನ್ನಡಿಗರ ಸೇನೆ ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ಕೈಗೊಳ್ಳಲಾಯಿತು.

ರೈಲ್ವೆ ಕೆಳ ಸೇತುವೆಗೆ ಹೊಂದಿಕೊಂಡಿರುವ ಮುದ್ದಿ ಹನುಮಾನ ದೇವಸ್ಥಾನಕ್ಕೆ ಪ್ರತಿನಿತ್ಯ ಭಕ್ತರು ಭೇಟಿ ನೀಡುತ್ತಾರೆ ಮೀಗಿಲಾಗಿ ಇಕ್ಕಟಾಗಿರುವ ರೈಲ್ವೆ ಕೆಳ ಸೇತುವೆ ರಸ್ತೆಯಲ್ಲಿನ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿ ಟ್ರಾಫಿಕ ಜಾಮ್ ಆಗುವ ಸಾಧ್ಯತೆ ಇರುವುದರಿಂದ ಇಲ್ಲಿ ನಿರ್ಮಿಸಲು ಉದ್ದೇಶಿಸಿರುವ ಇಂಡಿಯನ್ ಆಯಿಲ್ ಕಾರ್ಪೋರೆಷನ್ ಸಂಸ್ಥೆಯ ಪೆಟ್ರೋಲ್ ಬಂಕ್ ಮತ್ತು ತೈಲ ಸಂಗ್ರಾಹಲಯ ಘಟಕವನ್ನು ಬೆರೆಕಡೆ ಸ್ಥಳಾಂತರ ಗೊಳಿಸಬೇಕೆಂದು ಸೇನೆಯ ಅಧ್ಯಕ್ಷ ದತ್ತು ಎಚ್.ಭಾಸಗಿ ಅವರು ಆಗ್ರಹಿಸಿದರು.ಹಳೆ ಜೇವರ್ಗಿ ರಸ್ತೆ ರೈಲ್ವೆ ಕೆಳ ಸೇತುವೆಗೆ ಹೊಂದಿಕೊಂಡು ಪೆಟ್ರೊಲ್ ಬಂಕ್ ಹಾಗೂ ತೈಲ್ ಸಂಗ್ರಾಹಲಯ ಘಟಕ ನಿರ್ಮಾಣಕ್ಕೆ ಅವಕಾಶ ನೀಡಬಾರರು, ಇದು ಜನಸಂದಣಿಯ ಸಾರ್ವಜನಿಕ ವಲಯದ ಪ್ರದೇಶವೂ ಆಗಿರುತ್ತದೆ.

Contact Your\'s Advertisement; 9902492681

ಈ ಮಾರ್ಗದಲ್ಲಿ ಸಂಚರಿಸುವ ವಿದ್ಯುತ ಚಾಲಿತ ರೈಲ್ವುಗಳ ಕಂಬಗಳು, ವಿದ್ಯುತ ತಂತಿಗಳು ಇಲ್ಲಿಂದ ಹಾದು ಹೋಗಿವೆ ಅಲ್ಲದೆ ರೈಲ್ವೆ ಪ್ರಯಾಣಿಕರಲ್ಲಿ ಯಾರಾದರೂ ಅಕಸ್ಮೀಕವಾಗಿ ಬೆಂಕಿಕಟ್ಟಿ ಏನಾದರೂ ಕಿಡಕಿಗಳಿಂದ ಎಸೆದಿದೇ ಆದಲ್ಲಿ ಭಾರಿ ಪ್ರಮಾಣದ ಅಪಾಯ ಸಂಭವಿಸುವ ಸಾಧ್ಯತೆ ಇರುತ್ತದೆ ಈ ಪ್ರದೇಶದ ಸುತ್ತಲಿನ ಜನವಸತಿ ಬಡಾವಣೆಗಳ ನಾಗರಿಕರು ಬೊರವೆಲ್‌ಗಳನ್ನು ಕೊರೆಸಿದ್ದಾರೆ ಅವರ ಅಂತರ ಜಲ ಕಲುಷಿತಗೊಳ್ಳುತ್ತದೆ.

ಬೆಂಕಿ ದುರೈತ ಏನಾದರು ಸಂಭವಿಸಿ ತಮ್ಮ ಮನೆಗಳಿಗೆ ಬೆಂಕಿ ಅವರಿಸಿ ಪ್ರಾಣವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಭಯ ಅವರಲ್ಲಿ ದಿನನಿತ್ಯ ಕಾಡುತ್ತಲಿರುತ್ತದೆ. ಇಲ್ಲಿನ ನಾಗರಿಕರಲ್ಲಿ ಆವರಿಸಿರುವ ಭಯ ಮತ್ತು ಆತಂಕವನ್ನು ದೂರ ಮಾಡಲು ಹಾಗೂ ಭವಿಷ್ಯತ್ತಿನಲ್ಲಿ ಮುಂದೆ ಸಂಭವಿಸಲಿರುವ ಅಪಾಯವನ್ನು ತಪ್ಪಿಸಲು ಮತ್ತು ಪರಿಸರ ರಕ್ಷಣೆಯ ಉದ್ದೇಶದಿಂದ ಇಲ್ಲಿ ನಿರ್ಮಾಣಗೊಳ್ಳುತ್ತಿರುವ ಪೆಟ್ರೊಲ್ ಬಂಕ್ ಕೂಡಲೇ ಇಲ್ಲಿಂದ ಸ್ಥಳಾಂತರಗೊಳಿಸ ಬೇಕೆಂಬ ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಹುಸೇನ, ಶಿವು ಮಡಕಿ, ರಾಮಾ ಪೂಜಾರಿ, ಶ್ರೀಶೈಲ, ಸಾಗರ ಕುಮಸಿ, ಸಂಜೀವಕುಮಾರ ಮಾಳಗಿ, ವಿಶ್ವಜಿತ,ಪ್ರಶಾಂತ ಬಾಪುನಗರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here