ಸುರಪುರ: ಆಶಾ ಕಾರ್ಯಕರ್ತೆಯರ ತಾಲೂಕು ಮಟ್ಟದ ಸಮಾವೇಶ

0
9

ಸುರಪುರ: ಆಶಾ ಕಾರ್ಯಕರ್ತೆಯರ ಹಲವು ಸಮಸ್ಯೆಗಳ ವಿರುದ್ಧ ಎಐಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಸುರಪುರ ನಗರದ ಸಾಮರ್ಥ್ಯ ಸೌಧ (ತಾಲೂಕ ಪಂಚಾಯತ ಪಕ್ಕದಲ್ಲಿ) ದಲ್ಲಿ ಸುರಪುರ ತಾಲ್ಲೂಕ ಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು.

ಸಮಾವೇಶಕ್ಕೆ ಮುಖ್ಯ ಭಾಷಣಕಾರರಾಗಿ ಸಂಘದ ರಾಜ್ಯ ಅಧ್ಯಕ್ಷರಾದ ಕೆ ಸೋಮಶೇಖರ್ ಅವರು ಭಾಗವಹಿಸಿ ಮಾತನಾಡಿ,ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ 12 ಸಾವಿರ ನಿಗದಿ ಮಾಡಬೇಕು, ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು, ಸೇವಾ ಭದ್ರತೆ ಒದಗಿಸಬೇಕು ಹಾಗೂ ಸರ್ಕಾರಿ ನೌಕರರಾಗಿ ಪರಿಗಣಿಸಬೇಕು ಎಂದು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬರಲಾಗುತ್ತಿದೆ. ಆದರೆ ಸರ್ಕಾರ ದುಡಿಯುವ ಜನತೆಯ ನ್ಯಾಯುತ ಬೇಡಿಕೆಗಳನ್ನು ಈಡೇರಿಸುವಲ್ಲಿ ಬೇಜವಾಬ್ದಾರಿ ತೋರುತ್ತಿದೆ.

Contact Your\'s Advertisement; 9902492681

ಕಾರ್ಮಿಕ ವಿರೋಧಿ 4 ಲೇಬರ್ ಕೋಡ್ ಗಳ ಜಾರಿ ಮೂಲಕ ಕಾರ್ಮಿಕರ ಎಲ್ಲಾ ಶಾಸನಬದ್ಧ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ. ಈಗೆ ಹಲವು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಾ, ಎಲ್ಲಾ ರೀತಿಯ ಅನ್ಯಾಯದ ವಿರುದ್ಧ ಸಂಘಟಿತ ಹೋರಾಟ ಒಂದೇ ಪರಿಹಾರ ಮಾರ್ಗ ಆದ್ದರಿಂದ ಆಶಾ ಕಾರ್ಯಕರ್ತೆಯರು ಸಮಸ್ಯೆಗಳ ಪರಿಹಾರಕ್ಕೆ ಸಂಘವನ್ನು ಗಟ್ಟಿಕೊಳಿಸುತ್ತಾ ಪ್ರಭಲ ಹೋರಾಟಕ್ಕೆ ಮುಂದಾಗುವಂತೆ ಕರೆ ನೀಡಿದರು.

ಹಲವು ವರ್ಷಗಳು ಇಲಾಖೆ ಮತ್ತು ಜನತೆ ಮದ್ಯೆ ಕೊಂಡಿಯಂತೆ ಅಮೂಲ್ಯ ಸೇವೆ ಸಲ್ಲಿಸಿ ಮರಣ ಹೊಂದಿದ ಆಶಾ ಕಾರ್ಯಕರ್ತೆಯರಿಗೆ ಒಂದು ನಿಮಿಷ ಮೌನಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ಜಿಲ್ಲಾ ಮುಖಂಡ ರಾಮಲಿಂಗಪ್ಪ ಬಿ.ಎನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಬಲಿಷ್ಠ ಹೋರಾಟಗಳನ್ನು ಕಟ್ಟಲು ಸಂಘದ ತಾಲೂಕ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಶಾಂತವ್ವ, ಅಧ್ಯಕ್ಷರಾಗಿ ಪುಷ್ಪಲತಾ, ಉಪಾಧ್ಯಕ್ಷರಾಗಿ ಪ್ರೇಮವತಿ, ಕಾರ್ಯದರ್ಶಿಯಾಗಿ ಅಶ್ವಿನಿ, ಸಹ ಕಾರ್ಯದರ್ಶಿಗಳಾಗಿ ಪ್ರಭಾವತಿ ಹಾಗೂ ಸುಲೋಚನಾ ಮತ್ತು ಸಮಿತಿ ಸದಸ್ಯರಾಗಿ ಮರೆಮ್ಮಾ, ಗೌರಮ್ಮ, ಯಶೋಧಾ, ಪದ್ಮಾ, ಲಕ್ಷ್ಮೀ, ಅಂಜಮ್ಮ, ಲಕ್ಷ್ಮೀ ಹೇಮನುರು ಅವರು ಆಯ್ಕೆಯಾದರು. ಈ ಸಮಾವೇಶದಲ್ಲಿ ತಾಲೂಕಿನ ಅನೇಕ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here