ದೇವಾಪುರ ಕ್ರಾಸ್: ರೈತರ ವಿವಿಧ ಬೇಡಿಕೆಗಳಿಗಾಗಿ ಲಕ್ಷ್ಮೀಶ ವೃತ್ತದಲ್ಲಿ ರಸ್ತೆ ತಡೆ

0
12

ಸುರಪುರ: ದೇಶದಲ್ಲಿನ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಷ್ಟ್ರೀಯ ಸಂಯುಕ್ತ ಹೋರಾಟ ಸಮಿತಿಯಿಂದ ತಾಲೂಕಿನ ದೇವಾಪುರ ಕ್ರಾಸ್‌ನ ಲಕ್ಷ್ಮೀಶ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಹೋರಾಟ ನಡೆಸಲಾಯಿತು.

ಹೋರಾಟದಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ, ದೇಶದಲ್ಲಿನ ರೈತರ ಒತ್ತಾಯದಂತೆ ರೈತರ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನು ಬಧ್ಧಗೊಳಿಸಬೇಕು,ಹೋರಾಟದಲ್ಲಿ ಹುತಾತ್ಮರಾದ ರೈತರಿಗೆ ಪರಿಹಾರ ನೀಡಬೇಕು ಮತ್ತು ಲಖಿಂಪೂರ್‌ನಲ್ಲಿ ರೈತರ ಮೇಲೆ ಕಾರು ಹತ್ತಿಸಿದ ಆಶೀಶ್ ಮಿಸ್ರಾಗೆ ಕಠಿಣ ಶಿಕ್ಷೆಯಾಗಬೇಕು ಹಾಗು ಅಕಾಲಿಕವಾಗಿ ಸುರಿದ ಮಳೆಯಿಂದ ಬೆಳೆ ಹಾನಿಗೀಡಾಗಿದ್ದು ಕೂಡಲೇ ಸಮೀಕ್ಷೆ ನಡೆಸಿ ಎಲ್ಲಾ ರೈತರಿಗೆ ಪರಿಹಾರ ನೀಡಬೇಕು.ಮುಂದೆ ನಡೆಯುವ ನೀರಾವರಿ ಸಲಹಾ ಸಮಿತಿ ಸಭೆಗೆ ಕಡ್ಡಾಯವಾಗಿ ರೈತ ಮುಖಂಡರನ್ನು ಆಹ್ವಾನಿಸಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ್ ಸೂಫಿಯಾ ಸುಲ್ತಾನ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ಅಯ್ಯಣ್ಣ ಹಾಲಬಾವಿ,ಮಹಾದೇವಮ್ಮ ಬೇವಿನಾಳಮಠ,ಹಣಮಂತ್ರಾಯ ಚಂದ್ಲಾಪುರ,ಹೆಚ್.ಆರ್.ಬಡಿಗೇರ, ಸಾಹೇಬಗೌಡ ಮದಲಿಂಗನಾಳ,ಹನುಮಗೌಡ ನಾರಾಯಣಪುರ,ದೇವಿಂದ್ರಪ್ಪ ಪತ್ತಾರ,ಮಲ್ಲಯ್ಯ ಕಮತಗಿ,ಮಲ್ಲಣ್ಣ ಹಾಲಬಾವಿ,ಗದ್ದೆಪ್ಪ ನಾಗಬೇವಿನಾಳ,ತಿಪ್ಪಣ್ಣ ಜಂಪಾ,ವೆಂಕಟೇಶ ಕುಪಗಲ್,ಚಂದ್ರು ವಜ್ಜಲ್,ರಾಘು ಕುಪಗಲ್,ಯಂಕೋಬ ದೊರೆ ಕುಪಗಲ್,ಪ್ರಭು ದೊರೆ ಅರಳಹಳ್ಳಿ,ಮೌನೇಶ ಅರಳಹಳ್ಳಿ,ರುದ್ರಪ್ಪಗೌಡ ಮೇಟಿ,ಧರ್ಮಣ್ಣ ಮಳಕೇರಿ,ಹಣಮಂತ್ರಾಯ ನಾರಾಯಣಪುರ,ಸೇರಿದಂತೆ ಅನೇಕರಿದ್ದರು.ಪ್ರತಿಭಟನೆಯಿಂದ ಸುಮಾರು ಎರಡು ಗಂಟೆಗು ಹೆಚ್ಚು ಕಾಲ ರಸ್ತೆ ತಡೆಯಿಂದ ವಾಹನ ಸವಾರರು ಪರದಾಡಿದರು.ಸುರಪುರ ಪೊಲೀಸ್ ಅಧಿಕಾರಿಗಳು ಸೂಕ್ತ ಬಂದೋಬಸ್ತ್ ಮಾಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here