ಹುಬ್ಬಳ್ಳಿ ಧಾರವಾಡ ಪ್ರಧಾನ ಮತ್ತು ಪ್ರಭಾವಿ ರಾಜಕಾರಣಿ ಎಸ್.ಆರ್.ಮೋರೆ ಇನ್ನಿಲ್ಲ

0
6
  • ಕುಶಲ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪ್ರಭಾವಿ ರಾಜಕಾರಣಿ ಮಾಜಿ ಸಚಿವ ಎಸ್‌.ಆರ್.ಮೋರೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಎಸ್.ಆರ್‌.ಮೋರೆ‌ ಧಾರವಾಡ ಎಸ್‌ಡಿ‌ಎಂ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ.

ಇವರು ಕಳೆದ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ನಾಲ್ಕು ಬಾರಿ ಧಾರವಾಡದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಎಸ್.ಆರ್.ಮೋರೆ, ಬಂಗಾರಪ್ಪ ಹಾಗೂ ಧರಂಸಿಂಗ್ ಸರ್ಕಾರದಲ್ಲಿ ಸಚಿವರಾಗಿದ್ದವರು.

Contact Your\'s Advertisement; 9902492681

ಬಂಗಾರಪ್ಪ ಸರ್ಕಾರದಲ್ಲಿ ಸಹಕಾರಿ ಸಚಿವ ಹಾಗೂ ಧರಂಸಿಂಗ್ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ, ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಎಸ್.ಆರ್.ಮೋರೆ ಗುರುವಾರ ಮುಂಜಾನೆ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.

ಮೋರ್ ಪ್ರಬಲ ಮರಾಠ ನಾಯಕ ಮತ್ತು ನಾಲ್ಕು ಬಾರಿ ಶಾಸಕರಾಗಿದ್ದರು. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವಧಿಯಲ್ಲಿ ಮೋರೆ ಅವರು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಜನಪ್ರಿಯ ನಾಯಕರಾಗಿದ್ದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಂತಾಪವೂ : ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಮಾಜಿ ಶಾಸಕರು, ರಾಜ್ಯದ ಮಾಜಿ ಸಚಿವರು ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ಎಸ್. ಆರ್. ಮೋರೆ ಅವರು ನಿಧನರಾಗಿದ್ದು ತುಂಬಾ ವಿಷಾದನೀಯ ಸಂಗತಿ.

ದೇವರು ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ ಮತ್ತು ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಮಾಜಿ ಸಚಿವ ಎಸ್. ಆರ್. ಮೋರೆ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಬುಧವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಗುರುವಾರ ಬೆಳಗಿನ ಜಾವ ಕೊನೆ ಉಸಿರೆಳದಿದ್ದಾರೆ. ಅವರಿಗೆ 84 ವಯಸ್ಸಾಗಿತ್ತು.

ಹುಬ್ಬಳ್ಳಿ ಧಾರವಾಡದ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದ ಅವರು ಮಾಜಿ ಸಿಎಂ ಬಂಗಾರಪ್ಪ ಹಾಗೂ ಧರ್ಮಸಿಂಗ್ ಸಂಪುಟದಲ್ಲಿ ಸಚಿವರಾಗಿದ್ದರು. ಇವರು ಮರಾಠಾ ಸಮಾಜದ ಪ್ರಭಾವಿ ಮುಖಂಡರಾಗಿದ್ದರು.

ಧಾರವಾಡದ ಭಾಗದ ಆಶ್ರಯ ಮನೆ ಹರಿಕಾರ ಎಂತಲೇ ಅವರು ಜನಪ್ರಿಯರಾಗಿದ್ದರು.ಹುಬ್ಬಳ್ಳಿ ಧಾರವಾಡ ನಗರದ ಜನರಿಗೆ ಕನಿಷ್ಠ 7 ದಿನಕೊಮ್ಮೆ ನೀರು ಪೂರೈಸುವಲ್ಲಿ ಪ್ರಮುಖರಾಗಿದ್ದರು.  ಇನ್ನು ಡಿಸೆಂಬರ್‌ 9 ರಂದು ಎಸ್.ಆರ್.ಮೋರೆ ಜನಿಸಿದ್ದರು. ಇದೀಗ ಹುಟ್ಟಿದ ದಿನವೇ ಮೊರೆ ಅವರು ನಿಧನರಾಗಿದ್ದಾರೆ. ಗುರುವಾರ ಸಂಜೆ ಮೋರೆ ಅವರ ಅಂತ್ಯಸಂಸ್ಕಾರ ನೆರವೇರಲಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here