ಅವಕಾಶ ಸಿಕ್ಕರೆ ಮೋದಿ ವಿರುದ್ಧ ಸ್ಪರ್ಧೆಗೆ ಸಿದ್ಧ: ಶತೃಘ್ನ ಸಿನ್ಹಾ

0
86
ನವದಹೆಲಿ: ಲೋಕಸಭೆ ಚುನಾವಣೆ ರಣಕಹಳೆ ರಂಗೇರುತ್ತಿದ್ದೆ. ವಿರೋಧ ಪಕ್ಷದ ನಾಯಕರು ಹಾಗೂ ಮೋದಿ ವಿರೋಧಿಗಳು ಪ್ರಧಾನಿ ಮೋದಿ ಅವರು ಸ್ಪರ್ಧಿಸಲಿರುವ ವಾರಣಾಸಿ ಕ್ಷೇತ್ರದಿಂದ ಕಣಕಿಳಿಯಲು ಆಸಕ್ತಿ ತೊರುತ್ತಿದ್ದಾರೆ.

ಈ ಪಟ್ಟಿಯಲ್ಲಿ ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ರೆಬೆಲ್ ಸ್ಟಾರ್ ಮತ್ತು ಫೈರ್ ಬ್ರಾಂಡ್ ಶತೃಘ್ನ ಸಿನ್ಹಾ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಕಾಶ ಸಿಕ್ಕರೆ ಸ್ಪರ್ಧಿಸಲು ನನಗಿಷ್ಟ ಎಂದು ಹೇಳಿಕೆ ನೀಡಿದ್ದಾರೆ.

ಸಿನ್ಹಾಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಈಗಾಗಲೇ ಬಿಹಾರದ ಪಾಟ್ಮಾ ಸಾಹಿಬ್ ಕ್ಷೇತ್ರದಿಂದ ಟಿಕೆಟ್ ಪಡೆದಿದ್ದಾರೆ. ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಕಳೆದ 2 ಬಾರಿ ಆರಿಸಿ ಬಂದಿದ್ದ ಶತೃಘ್ನ ಸಿನ್ಹಾ ಅವರಿಗೆ ಹಾಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ಹೀಗಾಗಿ ಶತೃಘ್ನ ಸಿನ್ಹಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.
ಅಂತೆಯೇ ಬಿಜೆಪಿ ವಿರುದ್ಧ ತಮ್ಮ ಟೀಕಾ ಪ್ರಹಾರವನ್ನು ಮುಂದುವರೆಸಿರುವ ಅವರು, ಬಿಜೆಪಿಯವರು ಮೂರ್ಖರೊಂದಿಗೆ ಬದುಕುತ್ತಿದ್ದಾರೆ. ಅವರು ಹಾಗೆಯೇ ಇರಲಿ ಬಿಡಿ.. ಪಾಟ್ನಾ ಸಾಹಿಬ್ ಜನತೆ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here