‘ರಾಜ’ ರಾಣಿ ಹೊಟ್ಟೆಯಿಂದ ಅಲ್ಲ, ಮತದಾನದ ಪೆಟ್ಟಿಗೆ ಯಿಂದ ಹುಟ್ಟುತ್ತಾನೆ: ಡಾ. ಅಂಬೇಡ್ಕರ್

1
167

ಒಮ್ಮೆ ಬಾಬಾ ಸಾಹೇಬರು ಖುಷಿಯಿಂದ ಮುಗುಳ್ ನಗುತ್ತಾ ಸಂಸದ ಭವನದಿಂದ ಹೊರಗೆ ಬರುತಿದ್ದಾಗ  ಕಾಂಗ್ರೆಸಿನ ಆಚಾರ್ಯ ಕೃಪಲಾನಿ ಬಾಬಾ ಸಾಹೇಬರಿಗೆ ಭೇಟಿ ಆಗಿ ಕೇಳ್ತಾರೆ ಕೃಪಲಾನಿ- ಅಂಬೇಡ್ಕರರೆ ಇವತ್ತು ನೀವು ಬಹಳ ಖುಷಿಯಾಗಿ ಕಾಣ್ತಿದಿರಿ ಏನ್ ಸಮಾಚಾರ??

ಬಾಬಾ ಸಾಹೇಬರು- ಮೊದಲು ರಾಣಿಯ  ಹೊಟ್ಟೆಯಿಂದಲೇ ರಾಜ ಹುಟ್ಟುತ್ತಿದ್ದ ಆದರೆ ಈಗ ನಾನು ಆ ವ್ಯವಸ್ಥೆ ಬದಲಾಹಿಸಿದ್ದೇನೆ, ಈಗ ರಾಜ ರಾಣಿ ಹೊಟ್ಟೆಯಿಂದ ಅಲ್ಲ ಮತದಾನದ ಪೆಟ್ಟಿಗೆ ಯಿಂದ ಹುಟ್ಟುತ್ತಾನೆ ಅದಕ್ಕಾಗಿ ನಾನು ಖುಷಿಯಾಗಿರುವೆ.

Contact Your\'s Advertisement; 9902492681

ಕೃಪಲಾನಿ- ಅಗಾದರೆ ನಿಮ್ಮ ಖುಷಿ ಹೆಚ್ಚು ದಿನ ಉಳಿಯದು, ನಿಮ್ಮ ಜನ ಬಡವರು, ಅಸೆ ಕೋರರು, ಮಾರಿಕೊಳ್ಳುವವರು, ಮಾರಿಕೊಳ್ಳುತ್ತಾರೆ, ನಾವು ಅವರ ಓಟನ್ನು ಖರೀದಿ ಮಾಡಿ ನಮ್ಮ ಸರಕಾರ  ಕಟ್ಟುತ್ತೇವೆ, ನೀವು ಏನು ಮಾಡಕ್ಕಾಗಲ್ಲ.

ಬಾಬಾ ಸಾಹೇಬರು- ನನ್ನ ಜನ ಬಡವರು, ಅಸೆ ಕೋರರರು, ಮಾರಿಕೊಳ್ಳುವವರು, ಮಾರಿಕೊಳ್ಳುತ್ತಾರೆ, ನೀವು ಅವರನ್ನು ಖರೀದಿ ಮಾಡಿ ನಿಮ್ಮ ಸರಕಾರ ಕಟ್ಟಿಕೊಳ್ಳುತ್ತೀರಿ  ಆದರೆ ಯಾವ ದಿನ ನನ್ನ ಜನರಿಗೆ ತಮ್ಮ ಓಟಿನ ಮಹತ್ವ ಗೊತ್ತಾಗುವುದೋ ಆ ದಿನ ನಿಮ್ಮಷ್ಟು ದೊಡ್ಡ ಭೀಕಾರಿ ಮತ್ತ್ಯಾರು ಸಿಗೋದಿಲ್ಲ.

ಜೈ ಭೀಮ್

(ವಿವಿಧ ಮೂಲಗಳಿಂದ ಸಂಗ್ರಹ)

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here