ಜಯ ಕರ್ನಾಟಕ ರಕ್ಷಣಾ ಸೇನೆ ಯಿಂದ ನೇಗಿಲಯೋಗಿ ರತ್ನ ಪ್ರಶಸ್ತಿ ಪ್ರದಾನ

0
24

ಕಲಬುರಗಿ: ತಾಲೂಕಿನ ಶ್ರೀನಿವಾಸ ಸರಡಗಿ ಗ್ರಾಮದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾ ಘಟಕ ವತಿಯಿಂದ ಅನ್ನದಾತರ ರೈತರ ಹಬ್ಬದ ಪ್ರಯುಕ್ತ ಪ್ರಗತಿಪರ ರೈತರಾದ ದೇವೇಂದ್ರಪ್ಪ ಭೆರಜಿ, ಸಿದ್ದಲಿಂಗಯ್ಯ ಸ್ವಾಮಿ ಮಠಪತಿ ಅವರನ್ನು ನೇಗಿಲಯೋಗಿ ರತ್ನ ಪ್ರಶಸ್ತಿ ಪ್ರಧಾನ ಮಾಡಿ ಸತ್ಕರಿಸಲಾಯಿತು.

ಈ ಕೃಷಿ ಸಚಿವರಾದ ಬಿ.ಸಿ ಪಾಟಿಲ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ರೈತರು ದೇಶದ ಬೆನ್ನೆಲುಬು ಇಂತಹ ರೈತರ ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸುವ ಅದೃಷ್ಟ ನನ್ನದಾಗಿದೆ ತುಂಬಾ ಖುಷಿ ಆಯ್ತು ಈ ಕಾರ್ಯಕ್ರಮವನ್ನು ಆಯೋಜಿಸಿದ ಜಯ ಕರ್ನಾಟಕ ರಕ್ಷಣಾ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ಮಲ್ಲಿಕಾರ್ಜುನ ಎಸ್ ಕಿಳ್ಳಿ ಅವರಿಗೆ ತುಂಬು ಹೃದಯದ ಅಭಿನಂದನೆಗಳು ಇದೆ ತರಹ ಮುಂದೆ ನಿಮ್ಮ ಸಮಾಜಮುಖಿ ಕಾರ್ಯವನ್ನು ಮುಂದುವರೆಸಿ ನಿಮ್ಮ ಕಾರ್ಯಕ್ಕೆ ಇನ್ನೂ ಹೆಚ್ಚಿನ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಪರಮ ಪೂಜ್ಯ ಡಾ.ಅಪ್ಪಾರಾವ್ ದೇವಿ ಮುತ್ಯಾ ಶಕ್ತಿಪೀಠ ಶ್ರೀನಿವಾಸ ಸರಡಗಿ ರವರು ವಹಿಸಿದ್ದರು.

ಸಂಸದ ಉಮೇಶ ಜಾಧವ, ವಿಧಾನ ಪರಿಷತ್ ಸದಸ್ಯ ಬಿ.ಜಿ ಪಾಟೀಲ್, ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿರ್ದೇಶಕ ಸುರೇಶ ತಂಗಾ, ವಿನೋದ್ ಪಾಟಿಲ್, ಕಾಂಗ್ರೇಸ್ ಮುಖಂಡ ರವಿ ಚವ್ಹಾಣ, ವೀರಶೈವ ಮಹಾಸಭಾ ಸಾಮಾಜಿಕ ಜಾಲತಾಣ ಸಂಯೋಜಕ ನಾಗಲೀಂಗಯ್ಯ ಮಠಪತಿ, ,
ಗ್ರಾ.ಪಂ ಅಧ್ಯಕ್ಷ ಪ್ರವೀಣ ಬಿ. ಆಡೆ, ಉಪಾಧ್ಯಕ್ಷ ಇಂದುಬಾಯಿ ರಾಣಪ್ಪ ಮೀಸಿ, ಜಯ ಕರ್ನಾಟಕ ರಕ್ಷಣಾ ಸೇನೆಯ ರಾಜ್ಯ ಕರ್ಯಧ್ಯಕ್ಷ ರಾಜಶೇಖರ ಮಾಚಾರ್ಲಾ, ಜಯ ಕರ್ನಾಟಕ ರಕ್ಷಣಾ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಎಸ್. ಕಿಳ್ಳಿ, ಪ್ರಥಮದರ್ಜೆ ಗುತ್ತಿಗೆದಾರರಾದ ಶಿವಕುಮಾರ ಎಸ್. ಕಿಳ್ಳಿ, ಕುರುಬ ಸಮಾಜದ ಅಧ್ಯಕ್ಷ ಸಿದ್ದಪ್ಪ ಪೂಜಾರಿ, ಯುವ ಮುಖಂಡರಾದ ರಾಜು ಶ್ರೀಗನ್, ರಮೇಶ ಮೀಸಿ, ಮಲ್ಲಿಕಾರ್ಜುನ ಶ್ರೀಗನ್, ಮಲ್ಲಿಕಾರ್ಜುನ ಬೆನೂರ್, ದನೇಶ ಮೀಸಿ, ಆಕಾಶ ಬೆಳಗುಂಪಿ, ಶಿವಾನಂದ ಆರ್ ಕಿಳ್ಳಿ ಹಾಗೂ ಗ್ರಾ.ಪಂ. ಸರ್ವಸದಸ್ಯರು, ಗ್ರಾಮಸ್ಥರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here