ತಾರಫೈಲ್ ಸರಕಾರಿ ಶಾಲೆಯಲ್ಲಿ ಗಣರಾಜ್ಯೋತ್ಸವ

0
12

ಕಲಬುರಗಿ: ಗಣರಾಜ್ಯೋತ್ಸವದ ದಿನದ ಅಂಗವಾಗಿ ತಾರಫೈಲ್ ಬಡಾವಣೆಯ ಸರಕಾರಿ ಶಾಲೆಯಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ನಿಂಗಮ್ಮ ಸಿ ಕಟ್ಟಿಮನಿಯವರು ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಲಿಂಗರಾಜ ತಾರಫೈಲ್ ಅವರು ಮಾತನಾಡುತ್ತಾ ಹಿರಿಯರ ತ್ಯಾಗ ಬಲಿದಾನದಿಂದ ಸ್ವತಂತ್ರ ಸಿಕ್ಕ ನಂತರ ನಮ್ಮ ದೇಶಕ್ಕಾಗಿ ಸವಿಧಾನ ರಚನೆ ಮಾಡುವುದಕ್ಕೆ ಬಾಬಾಸಾಬ್ ಅಂಬೇಡ್ಕರ್ ಅವರ ಮುಂದಾಳತ್ವದಲ್ಲಿ ಸವಿಧಾನ ರಚಿಸಲಾಯಿತು.

Contact Your\'s Advertisement; 9902492681

ಆದಕಾರಣ ನಮ್ಮೆಲ್ಲರ ಹಿರಿಯರ ತ್ಯಾಗ- ಬಲಿದಾನವನ್ನು ಇಂದು ನಾವೆಲ್ಲರೂ ನೆನೆಸುತ್ತ ಬದುಕಬೇಕಾಗಿದೆ ಹಾಗೂ ತಾವೆಲ್ಲ ಮುದ್ದು ಮಕ್ಕಳು ಕೂಡ ಮುಂದಿನ ದಿನಗಳಲ್ಲಿ ಈ ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ತಾವುಗಳು ಕೂಡ ಯಾವುದೇ ಖಾಸಗಿ ಶಾಲೆಗಳ ಕ್ಕಿಂತಲೂ ಕಡಿಮೆ ಇಲ್ಲ ಎನ್ನುವುದನ್ನು ನಿರೂಪಿಸಬೇಕು ಎಂದು ಕಿವಿಮಾತನ್ನು ಹೇಳಿದ್ದರು ಹಾಗೂ ಅಂದಿನ ಕಾಂಗ್ರೆಸ್ ಸರ್ಕಾರವು ಲಾಹೋರಿನಲ್ಲಿ ನಡೆದ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ ದಿನವೆಂದು ಘೋಷಿಸಿ ಸಂವಿಧಾನ ಜಾರಿಗೆ ತರಲಾಯಿತು ಅದಕ್ಕಾಗಿ ಇಂದು ಗಣರಾಜ್ಯೋತ್ಸವ ದಿನ ಎಂದು ಆಚರಿಸಲಾಗುತ್ತದೆ ಹೇಳಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ಶಿವರಾಮ ರಾಠೋಡ, ರಜನಿಕಾಂತ್ ಶಿವಕೇರಿ, ಭಾಗ್ಯಶ್ರೀ, ಶೋಭಾ ಪಾಟೀಲ್, ಸುಚಿತ್ರ ಮೇಡಂ, ಸುನಿಲ ದತ್, ಬಸಮ್ಮ ಮದರಕಲ ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here