ಭಾರತದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಇಲ್ಲ: ನ್ಯಾ. ಗೌ. ಎಸ್. ಆರ್. ಕೃಷ್ಣಕುಮಾರ್

0
13

ಕಲಬುರಗಿ:ಬ್ರಿಟೀಷರಿಂದ ಅಧಿಕಾರ ಪಡೆದ ಕೆಲದಿನಗಳಲ್ಲೇ ಭಾರತ ಹರಿದು ಹಂಚಿಹೋಗಲಿದೆ ಎಂದು ಕೆಲ ಬುದ್ಧಿಜೀವಿಗಳು ಆಗ ಮೂದಲಿಸಿದ್ದರು. ಆದರೆ, ಭಾರತ ಸ್ವಾತಂತ್ರ್ಯ ಪಡೆದು ೭೫ ವರ್ಷವಾದರೂ ಒಕ್ಕೂಟ ವ್ಯವಸ್ಥೆಗೆ ಯಾವುದೇ ಧಕ್ಕೆ ಬಂದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠದ ಹಿರಿಯ ನ್ಯಾಯಮೂರ್ತಿ ಗೌರವಾನ್ವಿತ ಎಸ್. ಆರ್. ಕೃಷ್ಣಕುಮಾರ್ ಅವರು ಹೆಮ್ಮೆಯಿಂದ ನುಡಿದರು.

ಬುಧವಾರ ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠದ ಆವರಣದಲ್ಲಿ ೭೩ನೇ ಗಣರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಭಾರತ ಸ್ವತಂತ್ರವಾದ ಅಲ್ಪಾವಧಿಯಲ್ಲೇ ಪ್ರಾದೇಶಿಕತೆ, ಜಾತಿ-ಮತ-ಪಂಥಗಳು ಇನ್ನಿತರ ಆಂತರಿಕ ಸಮಸ್ಯೆಗಳಿಂದ ದೇಶ ತುಂಡು-ತುಂಡಾಗುತ್ತದೆ ಎಂದಿದ್ದರು. ಆದರೆ, ಭಾರತೀಯರು ಈ ಭವಿಷ್ಯವನ್ನು ಹುಸಿಗೊಳಿಸಿದ್ದಾರೆ ಎಂದು ಅವರು ಹೇಳಿದರು.

ನಮ್ಮ ಸಂವಿಧಾನವು ನಮಗೆ ಮುಕ್ತವಾದ ನಾಗರಿಕ ಹಕ್ಕುಗಳನ್ನು ನೀಡಿದೆ. ಆದರೆ ನಮ್ಮ ಪ್ರಜಾಪ್ರಭುತ್ವದ ಮೂಲತತ್ವಗಳಾದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಯಾವಾಗಲೂ ಅನುಸರಿಸುವ ಜವಾಬ್ದಾರಿಯನ್ನು ನಮ್ಮ ಮೇಲೆ ಇರಿಸಿದೆ. ನಮ್ಮ ರಾ?ಪಿತ ಮಹಾತ್ಮ ಗಾಂಧಿ ಅವರ ಜೀವನ ಮತ್ತು ಮೌಲ್ಯಗಳನ್ನು ನಾವು ಮನಸ್ಸಿನಲ್ಲಿಟ್ಟುಕೊಂಡರೆ ಈ ಸಾಂವಿಧಾನಿಕ ಆದರ್ಶಗಳನ್ನು ಅನುಸರಿಸಲು ನಮಗೆ ಸುಲಭವಾಗುತ್ತದೆ ಎಂದು ಅವರು ಒತ್ತಿ ಹೇಳಿದರು.

೩೦ ಜನವರಿ ೧೯೪೮ ರಂದು, ಆ ಮಹಾನ್ ಶಾಂತಿದೂತ ಮಹಾತ್ಮ ಗಾಂಧೀಜಿ ಅವರು ಹಂತಕನ ಹಿಂಸಾಕೃತ್ಯಕ್ಕೆ ಬಲಿಯಾದರು ಎಂದು ವಿಷಾದ ವ್ಯಕ್ತಪಡಿಸಿದ ನ್ಯಾ.ಮೂರ್ತಿಗಳು, ಶಾಂತಿ, ಪ್ರೀತಿ ಹಾಗೂ ಸಹಿ?ತೆಯ ಹಾದಿಯಲ್ಲಿ ನಡೆಯುವುದೇ ಇಂದು ರಾಷ್ಟ್ರಪಿತ ಗಾಂಧೀಜಿಗೆ ನಾವು ನೀವೆಲ್ಲರೂ ಸಲ್ಲಿಸಬಹುದಾದ ಉತ್ತಮವಾದ ಗೌರವ ಎಂದು ಅವರು ಅಭಿಪ್ರಾಯಪಟ್ಟರು.

ಜನವರಿ ೨೬, ೧೯೫೦ ರಂದು, ಭಾರತವು ಪ್ರಜಾಪ್ರಭುತ್ವ ರಾ?ವಾಗಿದೆ. ಆ ದಿನದಿಂದ ಭಾರತವು ಜನರಿಂದ ಮತ್ತು ಜನರಿಗಾಗಿ ಎಂಬ ಸರ್ಕಾರವನ್ನು ಹೊಂದಿರುತ್ತದೆ ಎಂಬ ನವೆಂಬರ್ ೨೫, ೧೯೪೯ ರಂದು, ಸಂವಿಧಾನ ಸಭೆಯ ಅಂತಿಮ ಭಾ?ಣದಲ್ಲಿ, ಸಂವಿಧಾನ ಕರಡು ಸಮಿತಿ ಅಧ್ಯಕ್ಷ ಡಾ. ಬಿ.ಆರ್. ಅಂಬೇಡ್ಕರ್ ಅವರು ನುಡಿದಿದ್ದ ಮಾತನ್ನು ನ್ಯಾಯಾಧೀಶರು ಆರಂಭದಲ್ಲಿ ಉಲ್ಲೇಖಿಸುವ ಮೂಲಕ ಭಾಷಣ ಶುರು ಮಾಡಿದರು.

ಈ ಕಾರ್ಯಕ್ರಮದಲ್ಲಿ ಗೌರವಾನ್ವಿತ ನ್ಯಾಯಮೂರ್ತಿಗಳಾದ ಇ.ಎಸ್. ಇಂದ್ರೇಶ್, ವಿ. ಶ್ರೀಶಾನಂದ, ಜೆ.ಎಂ, ಖಾಜಿ, ಕೆ.ಎಸ್. ಹೇಮಲೇಖಾ, ಅಪರ ಮಹಾ ವಿಲೇಖನಾಧಿಕಾರಿ ಕೆ.ಎಸ್. ವಿಜಯ, ಅಪರ ಮಹಾ ವಿಲೇಖನಾಧಿಕಾರಿ(ನ್ಯಾಯಾಂಗ) ಶ್ರೀನಿವಾಸ್ ಸುವರ್ಣ, ಹೈಕೋರ್ಟ್ ಬಾರ್ ಅಸೋಸಿಯೇಶನ್ ಅಧ್ಯಕ್ಷ ರಾಜಕುಮಾರ್ ಕಡಗಂಚಿ ಮುಂತಾದವರು ಇದ್ದರು.

ಹೈಕೋರ್ಟ್‌ನ ವಕೀಲರ ಸಂಘದ ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಸರ್ಕಾರಿ ವಕೀಲರು ಹಾಗೂ ಹೈಕೋರ್ಟ್‌ನ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here