17.6 ಕೋಟಿ ರುಪಾಯಿ ಕಾಮಗಾರಿಗೆ ಶಾಸಕ ಡಾ. ಅಜಯ್ ಸಿಂಗ್ ಚಾಲನೆ

0
10

ಜೇವರ್ಗಿ: ಪಟ್ಟಣದ ಮುಖ್ಯ ರಸ್ತೆ ಶೀಘ್ರದಲ್ಲಿಯೇ ಹೈಟೆಕ್ ರಸ್ತೆ ಸವಲತ್ತು ಹೊಂದಲಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿಯಲ್ಲಿ ಪಟ್ಟಣದ ರz್ದÉೀವಾಡಗಿ ಪೆಟ್ರೋಲ್ ಪಂಪ್‍ನಿಂದ ಬಸವೇಶ್ವರ ವೈತ್ತದ ವರೆಗೆ ಸಿಸಿ ರಸ್ತೆ, ಚರಂಡಿ, ಡಿವೈಡರ್, ಫುಟ್‍ಪಾತ್ ಹಾಗೂ ಬೀದಿ ದೀಪ ಒಳಗೊಂಡಂತಹ ಸುಂದರ ಹಾಗೂ ಹೈಟೆಕ್ ರಸ್ತೆ ಜೇವರ್ಗಿ ಜನತೆಗೆ ಅರ್ಪಿಸಲಾಗುತ್ತಿದೆ.

ಜೇವರ್ಗಿ ಶಾಸಕರಾದ ಡಾ. ಅಜಯ್ ಸಿಂಗ್ ಅವರ ಸತತ ಪರಿಶ್ರಮದ ಫಲ ಈ ಹೈಟೆಕ್ ರಸ್ತೆ ಮೂಲ ಸವಲತ್ತು ಎನ್ನಬಹುದು.  2019 ರಿಂದ ಸತತ ಪ್ರಯತ್ನದ ಫಲವಾಗಿ 17.6 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಇದೀಗ ಅನುಷ್ಠಾನಗೊಳ್ಳುತ್ತಿದೆ.

Contact Your\'s Advertisement; 9902492681

ಬಸವೇಶ್ವರ ವೈತ್ತದಿಂದ ಅಗ್ನಿಶಾಮಕ ಠಾಣೆಯವರೆಗೆ ಹಾಗೂ ಬಸವೇಶ್ವರ ವೈತ್ತದಿಂದ ಜೇವರ್ಗಿ.ಕೆ ಹಳ್ಳದ ವರೆಗೆ ಡಾಂಬರ್ ರಸ್ತೆ, ಚರಂಡಿ, ಡಿವೈಡರ್, ಫುಟ್‍ಪಾತ್ ಹಾಗೂ ಬೀದಿ ದೀಪ ಅಳವಡಿಸುವ ವಿಶೇಷ ಕಾಮಗಾಇ ಇದಾಗಿದ್ದು ಇದನ್ನು ಜೇವರ್ಗಿ ಪಟ್ಟಣದ ಜನತೆಯ ದಿನದ ಅಗತ್ಯಗಳಿಗೆ ತಕ್ಕಂತೆ ರೂಪಿಸಲಾಗುತ್ತಿದೆ ಎಂದು  ವಿಧಾನಸಭೆ ವಿರೋಧ ಪP್ಷÀದ ಮುಖ್ಯ ಸಚೇತಕ, ಶಾಸಕ ಡಾ.ಅಜಯಸಿಂಗ್ ಹೇಳಿದ್ದಾರೆ.

ಗುರುವಾರ ಜೇವರ್ಗಿ ಪಟ್ಟಣದ ಬಸವೇಶ್ವರ ವೈತ್ತದ ಬಳಿ ಲೋಕೋಪಯೋಗಿ ಇಲಾಖೆ ವತಿಯಿಂದ 2019-20ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನ ಅಡಿಯಲ್ಲಿ ಪಟ್ಟಣದ ಮುಖ್ಯ ರಸ್ತೆಯಲ್ಲಿ 17.6 ಕೋಟಿ ವೆಚ್ಚದ ಹೈಟೆಕ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಸಾರ್ವಜನಿಕರನ್ನು ಉz್ದÉೀಶಿಸಿ ಅವರು ಮಾತನಾಡಿದರು.

ಜೇವರ್ಗಿ ಪಟ್ಟಣ ಸುತ್ತಮುತ್ತಲಿನ ಎಲ್ಲಾ ನಗರಗಳಿಗೆ ತೆರಳಲು ಕೇಂದ್ರ ಸ್ಥಾನವಾಗಿದೆ. ಹೀಗಾಗಿ ಪಟ್ಟಣದ ಸೌಂದರ್ಯಿಕರಣಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ. ಪಟ್ಟಣದ ಮುಖ್ಯ ರಸ್ತೆ ಹಾಳಾಗಿರುವ ಕುರಿತು ದಿನಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿ, ಹಲವಾರು ಜನ ಈ ಬಗ್ಗೆ ಮನವಿ ಕೂಡ ಮಾಡಿದ್ದರು. ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಹಾಗು ರಾಜ್ಯಹೆದ್ದಾರಿ ಮದ್ಯ ಬರುವ ರಸ್ತೆ ನಿರ್ಮಾಣಕ್ಕೆ 17.6 ಕೋಟಿ ಬಿಡುಗಡೆಗೊಳಿಸಲಾಗಿದೆ. ಪದೇ ಪದೇ ಅನುದಾನ ತರುವುದು ಕಷ್ಟ, ಬಂದ ಅನುದಾನವನ್ನು ಅಕಾರಿಗಳು ಸಮರ್ಪಕವಾಗಿ ಬಳಕೆ ಮಾಡಿ ಬರುವ 6 ತಿಂಗಳ ಒಳಗೆ ಈ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ತಾಲೂಕಿನ ನೆಲೋಗಿ, ಕೋಳಕೂರ, ಇಜೇರಿ, ಯಡ್ರಾಮಿ, ಆಂದೋಲಾ, ಮಂದೇವಾಲ, ಅರಳಗುಂಡಗಿ ಗ್ರಾಮಗಳಲ್ಲಿ ಕೂಡ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡಲಾಗಿದೆ. ಶೀಘ್ರದಲ್ಲೇ ಜೇವರ್ಗಿ ತರಕಾರಿ ಮಾರುಕಟ್ಟೆ ಉದ್ಘಾಟನೆ ಮಾಡುವುದರ ಜತೆಗೆ ಪೂರ್ಣಗೊಂಡಿರುವ ಡಾ.ಅಂಬೇಢ್ಕರ್ ಭವನ, ವಾಲ್ಮೀಕಿ ಭವನ, ಬಂಜಾರಾ ಭವನ ಕೂಡ ಲೋಕಾರ್ಪಣೆಗೊಳಿಸಲಾಗುವುದು. ಅನುದಾನದ ಕೊರತೆಯಿಂದ ಬಸವ ಭವನ, ಕನಕ, ಭವನ, ಘಾಣದ ಕಣ್ಣಪ್ಪ ಭವನ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಬರುವ ವರ್ಷದೊಳಗೆ ಪೂರ್ಣಗೊಳಿಸಲಾಗುವುದು. ಚುನಾವಣೆ ಬಂದಾಗ ಮಾತ್ರ ಒಂದು ತಿಂಗಳು ರಾಜಕೀಯ ಮಾಡಲಾಗುವುದು. ಉಳಿದ 4 ವರ್ಷ 11 ತಿಂಗಳು ಪಕ್ಷಾತೀತವಾಗಿ ಸಾರ್ವಜನಿಕರ ಸಹಕಾರದೊಂದಿಗೆ ಅಭಿವೈದ್ಧಿಗೆ ಒತ್ತು ನೀಡಲಾಗುವುದು ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.

ಜೇವರ್ಗಿ : ಪಟ್ಟಣದ ಬಸವೇಶ್ವರ ವೈತ್ತದ ಬಳಿ ಲೋಕೋಪಯೋಗಿ ಇಲಾಖೆ ವತಿಯಿಂದ 2019-20ನೇ ಸಾಲಿನ ಕೆಕೆಆರ್‍ಡಿಬಿ ಯೋಜನೆ ಅಡಿ 17.6 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಡಾ.ಅಜಯಸಿಂಗ್ ಅಡಿಗಲ್ಲು ನೆರವೇರಿಸಿದರು. ಪುರಸಭೆ ಅಧ್ಯಕ್ಷೆ ಶರಣಮ್ಮ ಸಾಯಬಣ್ಣ ತಳವಾರ, ಲೋಕೋಫಯೋಗಿ ಇಲಾಖೆಯ ಕಾರ್ಯನಿವಾಹಕ ಅಭಿಯಂತರ ಮಲ್ಲಿಕಾರ್ಜುನ ಜೇರಟಗಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮುರುಳೀಧರ ಹಂಚಾಟೆ, ಪುರಸಭೆ ಉಪಾಧ್ಯP್ಷÀ ಗುರುಶಾಂತಯ್ಯ ಹಿರೇಮಠ ಇದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here