ದೋಷಮುಕ್ತ ಮತದಾರರ ಪಟ್ಟಿ ತಯಾರಿಕೆಗೆ ಸೂಚನೆ | voter Electoral Roll

0
26

ಕಲಬುರಗಿ: ಸರಿಯಾದ ಮಾಹಿತಿ ಪಡೆದುಕೊಂಡು ದೋಷಮುಕ್ತ ಮತದಾರರ ಪಟ್ಟಿ ತಯಾರಿಸಬೇಕು. ಯಾವುದೇ ಮನೆ ಬಿಟ್ಟು ಹೋಗದಂತೆ ಮತ್ತು ಯಾವುದೇ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಸಮೀಕ್ಷೆ ಕಾರ್ಯ ಕೈಗೊಳ್ಳಬೇಕೆಂದು ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಮೊರಾರ್ಜಿ ದೇಸಾಯಿ ವಸತಿ ಶಾಲೆ: 6ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

Contact Your\'s Advertisement; 9902492681

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ದೋಷಮುಕ್ತ ಮತದಾರರ ಪಟ್ಟಿ ತಯಾರಿಕೆಗಾಗಿ ಮನೆ ಮನೆ ಸಮೀಕ್ಷೆಯ ಕುರಿತ ಜರುಗಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, 18 ವರ್ಷ ಮೇಲ್ಪಟ್ಟವರನ್ನು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಬೇಕು. ಈ ಮನೆ-ಮನೆ ಸಮೀಕ್ಷೆಯ ಕಾರ್ಯ ಪ್ರಗತಿ ಪರಿಶೀಲಿಸಲು ಬಿಎಲ್‍ಓಗಳು ಗ್ರಾಮದಲ್ಲಿ ಎಲ್ಲಾ ಮನೆ-ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿರುವುದು ಸಂತೋಷದ ವಿಷಯ. ಆದರೆ ಬಿಎಲ್‍ಓ ಗಳು ಗ್ರಾಮದ ಜನನ ನೋಂದಣಿ ರಿಜಿಸ್ಟರ್‍ನ್ನು ಪರಿಶೀಲಿಸಿ, ಕೆಲವು ಮತದಾರರು ವಲಸೆ ಹೋಗುತ್ತಿದ್ದು, ಎರಡು ಕಡೆ ನೋಂದಣಿಯಾಗಿದ್ದಲ್ಲಿ ಅಂಥವರನ್ನು ಗುರುತಿಸಿ ಮತದಾರರ ಪಟ್ಟಿಯಿಂದ ತೆಗೆದು ಹಾಕುವಂತೆ ಸಲಹೆ ನೀಡಿದರು.

ಮನೆಮನೆ ಸಮೀಕ್ಷೆ ಕಾರ್ಯಕ್ಕಾಗಿ ಕಲಬುರಗಿ ಜಿಲ್ಲೆಯ 42-ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ 51,596 ಮನೆಗಳನ್ನು ಗುರುತಿಸಲಾಗಿದ್ದು, 50,899 ಮನೆಗಳ ಸಮೀಕ್ಷೆ ಮಾಡಲಾಗಿದ್ದು, ಅದರಲ್ಲಿ 695 ಮನೆಗಳ ಸಮೀಕ್ಷೆಯು ಬಾಕಿ ಉಳಿದಿದೆ. ಶೇಕಡಾ 98 ರಷ್ಟು ಪ್ರಗತಿ ಮಾಡಲಾಗಿದೆ. ಅದೇ ರೀತಿ 43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 63,974 ಮನೆಗಳನ್ನು ಸಮೀಕ್ಷೆ ಕಾರ್ಯಕ್ಕಾಗಿ ಗುರುತಿಸಲಾಗಿದ್ದು, ಅದರಲ್ಲಿ 54,608 ಮನೆಗಳ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ ಶೇಕಡಾ 87 ರಷ್ಟು ಪ್ರಗತಿ ಮಾಡಲಾಗಿದೆ. ಉಳಿದ 9,366 ಮನೆಗಳ ಸಮೀಕ್ಷೆಯನ್ನು 04 ದಿನದೊಳಗಾಗಿ ಪೂರ್ಣಗೊಳಿಸುವಂತೆ ಎಲ್ಲಾ ಬಿ.ಎಲ್.ಒ ಮೇಲ್ವಿಚಾರಕರಿಗೆ ಸೂಚಿಸಿದರು.

ಇದನ್ನೂ ಓದಿ: ಗುತ್ತಿಗೆದಾರರಿಗೆ ಸ್ಪಂದಿಸದ ರಾಜ್ಯ ಸರ್ಕಾರ: ಜಗನ್ನಾಥ ಶೇಗಜಿ ಆರೋಪ

ಈ ಸಭೆಯಲ್ಲಿ ಕಲಬುರಗಿ ಉಪ ವಿಭಾಗಾಧಿಕಾರಿ ಡಿ.ಎಂ ಪಾಣಿ, ಸೇಡಂ ಉಪ ವಿಭಾಗಾಧಿಕಾರಿ ಸುರೇಖಾ, ಚುನಾವಣಾ ತಹಸೀಲ್ದಾರ ಮಹಾಂತಪ್ಪ ಮುಡಬಿ ಹಾಗೂ ಜಿಲ್ಲೆಯ ಎಲ್ಲಾ ತಹಸೀಲ್ದಾರರು ಮತ್ತು ಚುನಾವಣೆ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here